ಜ್ಯೋತಿ ಬರೆದ ದೀಪಾವಳಿ ಕವಿತೆ
ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.
ಭಾನುವಾರದ ವಿಶೇಷ; ಅಮಿತಾವ್ ಘೋಷ್ ಬರೆದ ‘ಸೀ ಆಫ್ ಪೊಪಿಸ್’
ಕಡಲನ್ನೇ ನೋಡಿರದ ದೀತಿಗೆ, ಕಡಲಿಂದ ನೂರಾರು ಮೈಲುಗಳ ತನ್ನ ಊರಲ್ಲೇ – ದೂರದಲ್ಲಿ ಹಕ್ಕಿಯಂತೆ ರೆಕ್ಕೆ ಬಿಚ್ಚಿದ ಹಾಯಿ ಹಡಗೊಂದು ಕಂಡಂತಾಗಿ, ಯಾವುದೋ ಪ್ರಯಾಣಕ್ಕೆ ನಾಂದಿ ಎಂದು ಅನಿಸುವುದುರ ಮೂಲಕ ಕತೆ ತೊಡಗುತ್ತದೆ.
ಸುದರ್ಶನ್ ಬರೆದ ಸಣ್ಣಕಥೆ ‘ತಲುಪದೇ ಸಿಕ್ಕ ಪತ್ರ’
ನೀವು ಗಡಿಬಿಡಿಯಲ್ಲಿ ಹೋಗುತ್ತಿರುವಾಗ ಬೀದಿಯಲ್ಲಿ ನಿಮಗೊಂದು ಕಾಗದ ಬಿದ್ದಿರುವುದು ಕಣ್ಣಿಗೆ ಬೀಳುತ್ತದೆ. ಅದನ್ನು ಕಡೆಗಣಿಸಿ ಒಂದೆರಡು ಹೆಜ್ಜೆ ಮುಂದೆ ಹೋದೊಡನೆ ಆ ಇನ್ಲಾಂಡ್ ಲೆಟರ್ ಮೇಲೆ ಬರೆದಿದ್ದ ಹೆಸರು ನಿಮಗೆ ಪರಿಚಿತ ಎಂದು ಹೊಳೆಯುತ್ತದೆ.
ಭಾನುವಾರದ ಸ್ಪೆಷಲ್ – ಸಣ್ಣ ಕಥೆ `ಅಲ್ಲಿ ನೀನೂ ಇದ್ದೆಯಲ್ಲ’
ಪಕ್ಕದ ಹೊಟೇಲಲ್ಲಿ ಬೈಟು ಕಾಫಿಗೆ ಕಾಯುತ್ತಾ ಕನ್ನಡಿಯ ಮುಂದೆ ಕೂತವರಂತೆ ಕೂತರು. ಮೀಸೆಗೆ ತಪ್ಪದೆ ಬಣ್ಣ ಹಚ್ಚಿಕೊಳ್ಳುವ ಇವನು ಅವನನ್ನು ಕುಣಿಯುವ ಕಣ್ಣುಗಳಿಂದ ನೋಡುತ್ತಿದ್ದ. ಅವನಿಗೇನೋ ದುಗುಡವಿದ್ದಂತೆ, ಆಗಾಗ ಗಡಿಯಾರ ನೋಡಿಕೊಳ್ಳುತ್ತಿದ್ದ..
ದೀಪಾವಳಿ ಸ್ಪೆಷಲ್: ನರಕಾಸುರನೆಂಬ ನಮ್ಮೊಳಗಿನ ವಿಲನ್
ಮಲೆನಾಡಿನ ಹಬ್ಬಗಳ ಆಚರಣೆಗಳ ಬಗ್ಗೆ ಪತ್ರಿಕೆಗಳಿಗೆ ಏನು ವ್ಯಾಮೋಹವೊ ತಿಳಿಯದು. ಅಂತು ಪ್ರತಿ ಹಬ್ಬದಲ್ಲೂ ಒಂದು ಪೇಪರಲ್ಲಾದ್ರೂ ಕೃಷಿ ಕುಟುಂಬದ ಆಚರಣೆಯ ವಿವರಗಳನ್ನು, ಒಂಥರಾ ನಾಸ್ಟಾಲ್ಜಿಯ ದಾಟಿಯಲ್ಲಿ ಬರೆದಿರ್ತಾರೆ.
ದಿನದ ಕವಿತೆಯಲ್ಲಿ ಜಯಂತ ಕಾಯ್ಕಿಣಿ
ಕತ್ತಲಲ್ಲಿ ಕಳೆದು ಹೋಗುವ ಸೂಜಿ
ಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆ
ಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳು
ಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲ
ಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡುಗಳ ಮೂಸುತ್ತ
ಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆ
ಪೋಣಿಸಿದ ತಾಯನ್ನು ಅರಸಿಕೊಂಡು
ಭಾನುವಾರದ ವಿಶೇಷ: ಸಿಂಧು ಬರೆದ ಸಣ್ಣ ಕತೆ `ಸ್ನಾನ’
ಸರೋಜ ಕಣ್ಣು ದೊಡ್ಡಕೆ ಬಿಟ್ಟು ಹೆದರಿಸುತ್ತಿದ್ದರೂ ಸೀತಾರಾಮನ ನಂಜಿನ ನಗೆ ಬಾಡಲಿಲ್ಲ. ಅಮ್ಮನ ಶ್ಲೋಕದ ವಾಲ್ಯೂಮ್ ದೊಡ್ಡದಾಯಿತಾದರೂ, ಸ್ಪಷ್ಟತೆಯನ್ನು ನುಂಗಿಕೊಂಡಿತು.
ಪುಟ್ಟ ಕೈಗಳ ಮರೆಯ ಮಿಣುಕು ಬೆಳಕಿನ ಹಣತೆ
ಸ್ವಿಚ್ಚೊತ್ತಿದರೆ, ಕೆಲಸದವಳೂ ಬಂದು ನಿಮಿಷಗಳಲ್ಲಿ ಮನೆ ಕ್ಲೀನಾಗುವಾಗ ನಾನು ಹಬ್ಬದ ಹಿಂದಿನ ಸಂಜೆ ಅವಳ ತಿಂಗಳ ಸಂಬಳವನ್ನ ಒಂದಷ್ಟು ಗಂಟೆ ಕಂಪ್ಯೂಟರ್ ಮುಂದೆ ಕೂತು ದುಡಿಯುತ್ತಿರುತ್ತೇನೆ. ಗುಡಿಸಲು ಅಂಗಳವಿಲ್ಲ.
ತಂದೆ ಪು.ತಿ.ನ. ಕುರಿತು ಮಗಳು ಶಾಂತಾ: ಸಿಂಧು
ಮನೆಯ ಕೆಲಸ, ಮಕ್ಕಳ ಪಾಲನೆ, ಅಣ್ಣನ ಲಾಲನೆ, ಅತಿಥಿಗಳ ಸತ್ಕಾರ ಎಲ್ಲವನ್ನು ಅಣ್ಣ ಭಲೇ ಎನ್ನುವಂತೆ, ಮೆಚ್ಚುವಂತೆ ನಡೆಸಿ ಅನುಸರಿಸಿಕೊಂಡು ಹೋದವರು ಅಮ್ಮ.









