ಮಂಜುನಾಯಕ ಚಳ್ಳೂರು ಬರೆದ ಕತೆ “ಫೂ….”
ಆ ಹೊತ್ತು ಅವಳು ಹುಚ್ಚಿಯಂತೆ ಕಾಣುತ್ತಿದ್ದಳು ನನಗೆ. ಮುಖದ ತುಂಬ ಕೈಯಾಡಿಸಿದಳು. ತಲೆ ಸವರಿದಳು. ಯಾಕೋ ಎಷ್ಟೊತ್ತಾದರೂ ನನ್ನ ಬಿಡಲೇ ಇಲ್ಲ. ಅವ್ವ ಅಲ್ಲಿಂದಲೇ, `ಸಾಕ್ ಹೋಗು ಚಂದ್ರಪ್ಪಾ. ಬುಟ್ರ ಲಂಗದಾಗ್ ಸುರುಗ್ಸ್ಯಂತಾಳ್ ಈ ಅಡಾವುಡಿ ನಿನ್ನಾ…’ ಎಂದಳು. ಅತ್ತೆ, `ಯೇ ಮಂಗಾ.. ಬಾಯೈತಂತ ಏನೇನರ ಬೊಗಳ್ಬ್ಯಾಡ. ನನ ಹೊಟ್ಯಾಗ್ ಹುಟ್ಬೇಕಾದದ್ ಇದು. ತಪ್ಪಿ ನಿನ್ ಹೊಟ್ಯಾಗ್ ಹುಟ್ಟೇತಿ.’ ಎಂದುತ್ತರಿಸಿದಳು. ಆಗವಳ ಕೈಗಳು ನಡುಗುತ್ತಿದ್ದವು. ಕೆಂಡದಂತೆ ಬೆಚ್ಚಗಾಗಿದ್ದವು.
ಮಂಜುನಾಯಕ ಚಳ್ಳೂರು ಅವರ “ಫೂ..” ಕಥಾಸಂಕಲನದ ಶೀರ್ಷಿಕೆ ಕತೆ ನಿಮ್ಮ ಈ ಭಾನುವಾರದ ಓದಿಗೆ
ಮಂಜುನಾಯಕ ಚಳ್ಳೂರ ಕಥಾಲೋಕ…
“ಧಾರವಾಡದಲ್ಲಿ ಪಿಯುಸಿಯಲ್ಲಿದ್ದಾಗ ‘ಗಾಳಿಪಟ’ ಎಂಬ ಕತೆ ಬರೆದಿದ್ದೆ. ಅದಕ್ಕೂ ಮುನ್ನ ‘ಗೋಧಾವರಿ’ ಎಂಬ ಕತೆಯನ್ನು ಬರೆದು ಸ್ನೇಹಿತರ ಮುಂದೆ ಇಟ್ಟಾಗ, ಹಾಸ್ಟೇಲಿನ ದೋಸ್ತರೆಲ್ಲ ಅದನ್ನು ಓದಿ “ಚೊಲೋ ಬರ್ದಿ” ಎಂದು ಬೆನ್ನುತಟ್ಟಿದ್ದರು. ತುಷಾರ ಕಥಾ ಸ್ಪರ್ಧೆಗೆಂದು ಬರೆದಿದ್ದ ಕತೆ ಅದು. ಕೈಬರಹದಲ್ಲಿದ್ದ ಆ ಕತೆಯ ಪ್ರತಿಯನ್ನು, ಮತ್ತೊಮ್ಮೆ ಓದಿ ಕೊಡುವುದಾಗಿ ನನ್ನಿಂದು ಇಸಿದುಕೊಂಡು ಹೋದ ದೋಸ್ತ ಇನ್ನೂ ವಾಪಸ್ ಕೊಟ್ಟಿಲ್ಲ. ಮಂಜುನಾಯಕ ಚಳ್ಳೂರರ “ಫೂ” ಕಥಾಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಿಕ್ಕಿದ್ದು ಇದೇ ಸಂದರ್ಭದಲ್ಲಿ ಅವರ ಕಥಾಲೋಕದ ಕುರಿತು ರೂಪಶ್ರೀ ಕಲ್ಲಿಗನೂರ್ ಬರಹ
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ
ಇವಾ ಹಿಂಗ್ಯಾಕ ಇದ್ದಾನ? ನನ್ನ ನೋಡಿದ್ರ ನಗೋದಿಲ್ಲಾ ಮಾತಾಡೊದಿಲ್ಲಾ? ಅವ್ವನೂ ಯಾವಾಗ್ಲೂ ಹಿಂಗs ಇರತಾಳ…. ಬ್ಯಾಂಕಿನಿಂದ ಬಂದಾಕಿನs ಮಲಗಿ ಬಿಡತಾಳ…. ನಾ ಯಾರ ಕೂಡ ಮಾತಾಡಬೇಕು?…. ಮುಂಜಾನಿಂದ ಊಟಿಲ್ಲಾ…. ಹಂಗs ಕೂತಾಳ; ಅಪ್ಪಾ ತಾ ಮಾತ್ರ ಹೊರಗ ಊಟಾ ಮಾಡಿ ಬರತಾನ, ಆಕೀಗೆ ಊಟಾ ಮಾಡು ಅಂತ ಸುದ್ದಾ ಹೇಳೋದಿಲ್ಲಾ…. ಛೇ ಎಂಥಾ ಅಪ್ಪಾ ಇವಾ….?
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಾಲತಿ ಪಟ್ಟಣಶೆಟ್ಟಿ ಬರೆದ ಕಥೆ “ನಾ ಯಾಕ ಹುಟ್ಟಿದೆನೋ…… ?” ನಿಮ್ಮ ಓದಿಗೆ
ರಾಮು ಮತ್ತು ‘ತಾಯಿ’: ಸವಿತಾ ನಾಗಭೂಷಣ ಬರಹ
ಇದಾದ ಆರು ತಿಂಗಳ ನಂತರ ರಾಮು ಅವರ ಮನೆಗೆ ಹೋದಾಗ ಅವರು ಮೂಲೆ ಅಂಗಡಿಯಿಂದ ಕೊಬ್ಬರಿ ಮಿಠಾಯಿ ಖರೀದಿಸಿ ತಂದು ಕೊಟ್ಟರು. “ಅಲ್ರೀ.. ಮೂವರೂ ಶುಗರ್ ಪೇಷಂಟು…” ಅಂತ ನಾಗಭೂಷಣ ರಾಗ ಎಳೆಯಲು… “ತಿನ್ನಿ ಕಮ್ಮಿ ಆಗುತ್ತದೆ” ಎಂದು ರಾಮು ನಕ್ಕರು. ನಾನು, “ನನಗೆ ಅವಕಾಶ ಸಿಕ್ಕಾಗಲೆಲ್ಲಾ ಕವಿಗೋಷ್ಟಿ / ಕಾವ್ಯ ಕಮ್ಮಟಗಳಲ್ಲಿ ನಿಮ್ಮ ‘ತಾಯಿ’ ಕವನ ಓದುತ್ತಿರುವೆ” ಎಂದು ರಾಮುವಿಗೆ ಹೇಳಿದೆ. ನಾಗಭೂಷಣ ‘ಹೌದೌದು ನಿಮ್ಮ”ತಾಯಿ”ಯನ್ನು ಅಮರ ಮಾಡಬೇಕೆಂದು ಸಂಕಲ್ಪ ಮಾಡಿದ್ದಾಳೆ! ಎಂದರು.
ರಾಮು ಅವರ ಕುರಿತು ಸವಿತಾ ನಾಗಭೂಷಣ ಬರಹ
ಹಿರಿಯ ಪತ್ರಕರ್ತ ಹಾಗೂ ಕವಿ ರಾಮು ಇನ್ನಿಲ್ಲ
ಹಿರಿಯ ಪತ್ರಕರ್ತ ಹಾಗೂ ಕವಿ ರಾಮು(69) ಮಂಗಳವಾರ ಮುಂಜಾನೆ ತೀರಿಕೊಂಡರು. ವಿಭಿನ್ನ ನೆಲೆಗಟ್ಟಿನ ಅವರ ಕವಿತೆಗಳ ಕಾರಣಕ್ಕೆ ಮತ್ತು ಅವರ ಆಪ್ತತೆಯ ಕಾರಣಕ್ಕೆ ಮೈಸೂರಿನ ಹಾಗೂ ಮೈಸೂರಿಗೆ ಆಗಮಿಸುತ್ತಿದ್ದ ಸಾಹಿತ್ಯದ ಬಂಧುಗಳೆಲ್ಲ ಅವರನ್ನು ಆಗಾಗ ಭೇಟಿಯಾಗುತ್ತಲೆ ಇರುತ್ತಿದ್ದರು.
ಅಗ್ನಿಸೂಕ್ತ, ರಾಮು ಕವಿತೆಗಳು, ವಿಷ್ಣುಕ್ರಾಂತಿ ಮತ್ತು ಇತರೆ ಕವಿತೆಗಳು ಇವರ ಪ್ರಕಟಿತ ಕವನ ಸಂಕಲನಗಳು.
ರಾಮು ಅವರನ್ನು, ಅವರ ವ್ಯಕ್ತಿತ್ವದ ಕುರಿತು ಕವಯತ್ರಿ ರೂಪಾ ಹಾಸನ ಬರೆದ ಕವಿತೆಯೊಂದು ನಿಮ್ಮ ಓದಿಗೆ
ರವಿಶಂಕರ್ ಎಸ್.ಎಲ್. ಬರೆದ ಈ ಭಾನುವಾರದ ಕಥೆ
ಮನೆಯಕಡೆಯಿಂದ ಜಾನಕಿ ನರಳುವ ಸಣ್ಣಸದ್ದು ಕೇಳತೊಡಗಿತು. ಜಾನಕಿಗೆ ಒಂಭತ್ತು ತಿಂಗಳುಗಳು ತುಂಬಿದ್ದರಿಂದ ಹೆರಿಗೆನೋವು ಶುರುವಾಗಿತ್ತು. ಶಿವಮ್ಮ ಸಾಕಷ್ಟು ಹೆರಿಗೆಗಳನ್ನು ಮಾಡಿಸಿದ್ದರಿಂದ, ಯಾರ ಸಹಾಯವೂ ಬಯಸದೆ, ಒಬ್ಬಂಟಿಯಾಗೇ ಹೆರಿಗೆಮಾಡಿಸುವ ಅನುಭವ ಪಡೆದಿದ್ದಳು. ಹೆರಿಗೆನೋವಿನ ನರಳುವಿಕೆಯ ಕೂಗು ಹೆಚ್ಚಾಗುತ್ತಿದ್ದಂತೆಯೇ, ಸಂಗಣ್ಣ ತಾನು ಇಳಿದು ಹೋಗಲೆ. ಬೇಡವೇ? ಎಂಬ ಯೋಚನೆಗೆಬಿದ್ದ.
ರವಿಶಂಕರ್ ಎಸ್.ಎಲ್. ಬರೆದ ಈ ಭಾನುವಾರದ ಕಥೆ “ಹಬ್ಬ” ನಿಮ್ಮ ಓದಿಗೆ
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ
ಈ ನಡುವೆ ಪಾತ್ಲಿಂಗಪ್ಪ ಹಾಗೂ ಚಿತ್ಲಿಂಗ ಮತ್ಮತ್ತೆ ಭೇಟಿಯಾಗುತ್ತಿದ್ದದ್ದು ತಿಳಿದು ಮಗಳು ಕುದ್ದು ಹೋಗಿ ವರ್ಷದ ಹಿಂದೆ ಅಪ್ಪನಿಗೆ ಲಾಯರ್ ನೋಟೀಸ್ ಕಳಿಸಿದ್ದಳು. ಇದು ಪಾತ್ಲಿಂಗಪ್ಪನನ್ನು ಕುಗ್ಗಿಸಿತ್ತು. ತನ್ನದೆಲ್ಲವನ್ನೂ ಕಿತ್ತುಕೊಂಡು ಬೀದಿಗೆ ತಳ್ಳುವ ಹುನ್ನಾರದಂತೆ ಕಂಡಿತ್ತು. ಹಂಗಾಗಿ ಅದು ಆ ವಿಚಾರದಲ್ಲಿ ಅವನನ್ನು ಮತ್ತಷ್ಟು ಬಿಗಿಯಾಗುವಂತೆ ಮಾಡಿತ್ತು. ಅದರೊಟ್ಟಿಗೆ ಅವನೊಳಗೆ ತಾನು ತಮ್ಮನ ಮಗನಿಗೆ ಮಾಡಿದ್ದ ಅನ್ಯಾಯದ ಪಾಪಪ್ರಜ್ಞೆ ಬೆಳೆಯತೊಡಗಿತ್ತು.
ಎಸ್. ಗಂಗಾಧರಯ್ಯ ಬರೆದ ಈ ಭಾನುವಾರದ ಕಥೆ “ಸೋಲು” ನಿಮ್ಮ ಓದಿಗೆ
ಸೌರಭಾ ಕಾರಿಂಜೆ ಬರೆದ ಈ ಭಾನುವಾರದ ಕಥೆ
ಬೆಳಿಗ್ಗೆ ತುಂಬಿಸಿಕೊಂಡ ದೋಸೆ ಡಬ್ಬಿ ಹಾಗೇ ಇದೆ ಎಂಬುದು ನೆನಪಾಯಿತು ಅವಳಿಗೆ. ಕೊಟ್ಟು ಬಿಡಲೇ ಅನಿಸಿತು ಒಮ್ಮೆ. ಮನೆಗೆ ಹೋಗಿ ತಿನ್ನಬಹುದು ತಾನು. ಆದರೆ ಇವನಿಗೆ ಬೇಕಾದದ್ದು ದುಡ್ಡು, ಊಟ ಅಲ್ಲ, ಆ ದುಡ್ಡನ್ನು ಕಬಳಿಸಲು ನಮೂನೆ ನಮೂನೆಯ ಪ್ರಯತ್ನ ಅನ್ನಿಸಿ ಮನಸ್ಸೆಲ್ಲಾ ಕಹಿಯಾಯಿತು. ಜೊತೆಗೆ ಬಾಯಿಯೂ ಕಹಿಯಾಯಿತು. ಬಾಯಿಯಲ್ಲಿ ತುಂಬಿಕೊಂಡಿದ್ದ ಎಂಜಲನ್ನು ನುಂಗಲು ಅಸಹ್ಯವಾಗಿ ಉಗುಳುವ ಒತ್ತಡ ಉಂಟಾಯಿತು. ಯಾವತ್ತೂ ರಸ್ತೆಯಲ್ಲಿ ಉಗುಳಿದವಳಲ್ಲ. ಮುಜುಗರ ಒತ್ತಿ ಬಂತು.
ಸೌರಭಾ ಕಾರಿಂಜೆ ಬರೆದ ಕಥೆ “ಹಣಾಹಣಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ
ಮುನವ್ವರ್ ಜೋಗಿಬೆಟ್ಟು ಬರೆದ ಈ ಭಾನುವಾರದ ಕಥೆ
ಬಟ್ಟೆ ತೊಳೆಯಲು ಹೋಗಿದ್ದ ಉಮ್ಮ ಬಂದು ಹಿತ್ತಲಿಗೆ ತಲುಪಿದ್ದಳು. ಹೊರಳಾಡುತ್ತಿರುವ ಝುಮೈರ್‌ನನ್ನು ಸಮಾಧಾನ ಮಾಡುವ ಶತ ಪ್ರಯತ್ನ ಮಾಡ ತೊಡಗಿದಳು. ವಿಶಣ್ಣನಾಗಿ ಅಬ್ಬ ಮಗನ ರೋಧನೆಯನ್ನು ನೋಡುತ್ತಾ ಕುಳಿತಿದ್ದ. ಹೇಗೋ ಸಮಧಾನಿಸಿ ಮನೆಯೊಳಗೆ ಕರೆದುಕೊಂಡು ಹೋದಳು ಉಮ್ಮ. ಮಗ ಎಷ್ಟೇ ಸಮಾಧಾನ ಮಾಡಿದರೂ ಅವನ ದುಃಖ ಇಳಿಯುವುದಿಲ್ಲವೆಂದು ಉಮ್ಮನಿಗೆ ಖಾತ್ರಿಯಾಯಿತು. ರಾತ್ರಿ ಊಟ ಮಾಡದೆ ಮಲಗಿದ್ದ ಮಗನ ಬಳಿಗೆ ಬಂದವಳು “ಐವತ್ತು ರೂಪಾಯಿ ನಾನು ಕೊಡ್ತೇನೆ.
ಮುನವ್ವರ್ ಜೋಗಿಬೆಟ್ಟು ಬರೆದ ಕಥೆ “ಶಾಲಾ ಮಕ್ಕಳ ಪ್ರವಾಸಕ್ಕೆ ಜಯವಾಗಲಿ” ನಿಮ್ಮ ಓದಿಗೆ