Advertisement

Month: May 2024

ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮುಂದೆ ಕಾಣುವ ಬಸದಿಯ ಕಟ್ಟಡವು ಕಗ್ಗಲ್ಲಿನ ನಿರ್ಮಿತಿ. ಕಟ್ಟಡದ ಮೇಲುಭಾಗ ಮರದಿಂದ ಮಾಡಲ್ಪಟ್ಟಿದ್ದು ಹೆಂಚು ಹೊದಿಸಿದೆ. ಕರಾವಳಿಪ್ರದೇಶದ ಬಿಸಿಲು, ಗಾಳಿ, ಮಳೆಗಳನ್ನು ತಡೆಯಲು ಸಮರ್ಥವಾಗುವಂತಹ ವಾಸ್ತುಶೈಲಿಯುಳ್ಳ ನಿರ್ಮಾಣ. ಹಲವು ಮಂಟಪಗಳನ್ನುಳ್ಳ ಬಸದಿಯ ಕಟ್ಟಡದತ್ತ ಸೋಪಾನವೇರಿ ಹೋದರೆ ಮೊದಲಿಗೆ ನಕ್ಷತ್ರಾಕಾರದ ಮಂಟಪವನ್ನು ಕಾಣುವಿರಿ…”

Read More

ಕಿರಸೂರ ಗಿರಿಯಪ್ಪ ಬರೆದ ಎರಡು ಗಝಲ್ ಗಳು

“ಪ್ರೀತಿ ಹಂಚಿ ಕುಡಿದ ಬಟ್ಟಲಲಿ ಸ್ವಾರ್ಥದ ನೆರಳು ತುಂಬಿದೆ
ಅವ್ವಳ ಎದೆಯ ಜೋಳಿಗೆಯಲಿ ಕನಸುಗಳ ಹೆಣೆಯುತ್ತಾ ಸಾಗಿದೆ”- ಕಿರಸೂರ ಗಿರಿಯಪ್ಪ ಬರೆದ ಎರಡು ಗಝಲ್ ಗಳು

Read More

ಅಮೃತಾ ಪ್ರೀತಮ್ ಕವಿತೆಗಳ ಕುರಿತು ರೇಣುಕಾ ನಿಡಗುಂದಿ ಮಾತುಗಳು…

“ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ….”

Read More

ಅಗಸ್ತ್ಯ: ಉಮಾರಾವ್ ಬರೆದ ಕತೆ

“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”

Read More

ಸರ್ವೇಜನ ಸುಖೀನೋ ಭವಂತು….: ಲಕ್ಷ್ಮಣ ವಿ.ಎ. ಅಂಕಣ

“ಈ ದೇಶದ ಶ್ರಮಿಕವರ್ಗವಿದೆಯಲ್ಲ ಇವರ್ಯಾರೂ ಧರ್ಮ ಪಂಥ ಪಂಗಡಗಳ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಂಡವರಲ್ಲ. ದೇವರನ್ನು ಮನೆಯ ಜಗುಲಿಗಳಿಗೇ ಕಟ್ಟಿ ಹಾಕಿ ರೊಟ್ಟಿ ಬುತ್ತಿ ಅಂಬಲಿಯನ್ನು ಸಾಬರು ಮಾಲಗಾರರು ಲಿಂಗಾಯತರೆನ್ನದೇ ಜೋಳದ ಹೊಲದಲ್ಲಿ ಕುಳಿತು ಬುತ್ತಿಯ ಬಿಚ್ಚಿ ಹಂಚಿ ತಿಂದು ಬದುಕುವವರು. ಹೀಗೆ ಮಾಡುವುದು ಇದೊಂದು ಅವರಿಗೆ ಆದರ್ಶವೆನ್ನುವ ಅಹಂ…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ