Advertisement

Month: May 2024

ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

“ದಿಟ್ಟ ನಿಲುವೆಂದು
ಕೊಟ್ಟ ಮಾತೆಂದು
ನಾ ನಿಲ್ಲುವ ನೆಲ ಅಲುಗದಿರಲೆಂದು
ಮೊಂಡಾಡದೆ ಚೆಂಡನ್ನು
ಅವರ ಪರಿಧಿಗೆ
ಬೇಕೆಂದೇ ಒದೆಯುವುದನ್ನು”- ಡಾ. ಪ್ರೇಮಲತಾ ಬರೆದ ಈ ದಿನದ ಕವಿತೆ

Read More

ಅಜಯ್ ವರ್ಮಾ ಅನುವಾದಿಸಿದ ‘ವಿಮುಕ್ತೆ’ ಕೃತಿಗೆ ಬಿ.ಎನ್.ಸುಮಿತ್ರಾಬಾಯಿ ಬರೆದ ಮುನ್ನುಡಿ

“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ….”

Read More

ಶಾಸ್ತ್ರಿ ಮನೆಯ ಅಜ್ಜಿ!: ಓಬಿರಾಯನಕಾಲದ ಕಥಾ ಸರಣಿಯಲ್ಲಿ ಕಟಪಾಡಿ ಶ್ರೀನಿವಾಸ ಶೆಣೈ ಬರೆದ ಕತೆ

“ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು.”

Read More

ದೇಸಿ ವಿದ್ಯಾರ್ಥಿಗಳ ವಿದೇಶಿ ಹಾಡುಪಾಡು: ವಿನತೆ ಶರ್ಮಾ ಅಂಕಣ

“ಇಷ್ಟೆಲ್ಲಾ ಆಗುವಷ್ಟರಲ್ಲಿ ಅವನ ಇಬ್ಬರು ಸ್ನೇಹಿತರು ವಾಪಸ್ ಹೈದರಾಬಾದಿನ ತಮ್ಮನೆಗೆ ವಾಪಸ್ಸಾಗಿದ್ದರು. ಇವನು ಆಶಾವಾದಿ, ದೇಶದ ಆರ್ಥಿಕತೆಗೆ ಅನುಕೂಲವಾಗುವ ಮತ್ತೊಂದು ಆರು ತಿಂಗಳ ಕೋರ್ಸಿಗೆ ಸೇರಿಕೊಂಡು ಪಾರ್ಟ್ ಟೈಮ್ ವಿದ್ಯಾರ್ಥಿಯಾದ. ಈಗ ಆ ಕೋರ್ಸನ್ನ ಮಾಡುತ್ತಲೇ ಜೀವನೋಪಾಯಕ್ಕಾಗಿ ಎರಡು ಕಡೆ ಕೆಲಸ ಮಾಡುತ್ತಿದ್ದಾನೆ. ಅವನ ಒಂದು ಉದ್ಯೋಗವಿರುವುದು ಪಿಜ್ಝಾ ಅಂಗಡಿಯಲ್ಲಿ..”

Read More

ಕಹಿಗಳಿಗೆಗಳು: ಕುರಸೋವ ಆತ್ಮಕತೆಯ ಮತ್ತೊಂದು ಕಂತು

“ಒಟ್ಟಿನಲ್ಲಿ ಸೆನ್ಸಾರ್ ಶಿಪ್ ಬ್ಯೂರೋದ ಡಾಬರ್ ಮನ್ ಗಳು ಅಂದಿನ ಅಧಿಕಾರಶಾಹಿಯ ಕೈಗೊಂಬೆಯಾಗಿದ್ದರು ಎನ್ನುವುದಂತೂ ಸತ್ಯ. ಸಮಯದ ಕೈಗೊಂಬೆಯಾಗಿ ಸ್ವಂತಿಕೆಯಿಲ್ಲದ ಒಬ್ಬ ಅಧಿಕಾರಿಶಾಹಿ ಮನುಷ್ಯನಿಗಿಂತ ಅಪಾಯಕಾರಿ ಮತ್ತೊಬ್ಬರಿಲ್ಲ. ನಾಜಿ ಯುಗದಲ್ಲಿ ಹಿಟ್ಲರ್ ಹುಚ್ಚುಮನುಷ್ಯ. ಆದರೆ ಅವನ ಹಿಂದಿದ್ದ ಹಿಮ್ಲರ್ ಮತ್ತು ಈಚಮನ್ ನಂತಹವರನ್ನು ನೋಡಿದಾಗ ಅವರ ರಾಕ್ಷಸಿ ಮನೋಭಾವದ ಅರಿವಾಗುತ್ತದೆ….”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ