Advertisement

Month: May 2024

ಕುಬಟೂರಿನ ಕೈಟಭೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಪುರಾಣಕ್ಕಿಂತ ಐತಿಹಾಸಿಕವಾಗಿ ಹೆಚ್ಚಿನ ಮಹತ್ವ ಪಡೆದ ಈ ಕುಬಟೂರು ಶಿವಮೊಗ್ಗ ಜಿಲ್ಲೆಯ ಆನವಟ್ಟಿಯ ಸಮೀಪವಿದೆ. ಕೈಟಭೇಶ್ವರ ದೇವಾಲಯವಿರುವ ಕುಬಟೂರಿಗೆ ಕುಪ್ಪತ್ತೂರು, ಕೋಟಿಪುರ ಮೊದಲಾದ ಹೆಸರುಗಳೂ ಇವೆ. ಕ್ರಿ.ಶ. ಮೂರನೆಯ ಶತಮಾನದ ಬನವಾಸಿಯ ಕದಂಬರಿಂದ ಮೊದಲುಗೊಂಡು ಬಾದಾಮಿಯ ಚಾಲುಕ್ಯರು, ಕಲ್ಯಾಣದ ಚಾಲುಕ್ಯರು, ಹೊಯ್ಸಳರು ಹಾಗೂ ಕೆಳದಿಯ ನಾಯಕರವರೆಗೆ…”

Read More

ಗಿರೀಶ್ ಜಕಾಪುರೆ ಪುಸ್ತಕದ ಕುರಿತು ಶ್ರೀದೇವಿ ಕೆರೆಮನೆ ಬರಹ

“ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ.”

Read More

ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ

“ಕೊರೆಕೊರೆವ ನೀರ ಗಡ್ಡೆ
ಬಿಸಿಯುಸಿರ ಹಬೆ ತಾಗಿ
ಸರಿಸರಿದು ಸರ್ರನೆ ಹರಿಯೆ
ನಡುಗಿರುವ ನೆಲವೆಲ್ಲಾ
ತೇಲುವ ಮಾಂಸಗಳ ಗಾಡಿ!”- ಮುರಳಿ ಹತ್ವಾರ್ ಬರೆದ ಈ ದಿನದ ಕವಿತೆ

Read More

ಓಬಿರಾಯನಕಾಲದ ಕಥಾ ಸರಣಿಯಲ್ಲಿ ಎಸ್. ಯು. ಪಣಿಯಾಡಿ ಬರೆದ ಕತೆ

“ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ.”

Read More

ಗೋಕುಲ ನಿರ್ಗಮನದ ಪುತಿನ ಮತ್ತು ಎಚ್ ಎಸ್ ವಿ: ಲಕ್ಷ್ಮಣ ವಿ.ಎ. ಅಂಕಣ

“ಹಿರಣ್ಯಕಶಪುವಿಗೆ ಕಂಬ ಮಾತ್ರ ಕಂಡಿತು; ಪ್ರಹ್ಲಾದನಿಗೆ ಕಂಬದ ಒಳಗೆ ಅಡಗಿರುವ ನರಸಿಂಹ ಕಂಡ! ಕಾಣಲಿಕ್ಕೆ ದೃಷ್ಟಿಯಷ್ಟೇ ಸಾಲದು…. ಅದೃಷ್ಟವೂ ಇರಬೇಕು. ಅದಕ್ಕೆ ಮಹಾಕವಿಗಳು ಹೇಳಿದ್ದು ಕಂಡ ಕಂಡವರಿಗೆಲ್ಲಾ ಕಾಣುವುದಿಲ್ಲ…. ಕಂಡವರಿಗಷ್ಟೇ ಕಾಣಬೇಕಾದ್ದು ಕಾಣುವುದು ಎಂದು! ಅದನ್ನೇ ನಾವು ದರ್ಶನ ಎನ್ನುವುದು. ಇಂತಹ ದರ್ಶನದಿಂದ ತುಂಬಿರುವುದರಿಂದಲೇ ಪುಟ್ಟಪ್ಪನವರು ತಮ್ಮ ಕಾವ್ಯಕ್ಕೆ ರಾಮಾಯಣ ದರ್ಶನನಂ ಎಂದು ಹೆಸರಿಟ್ಟರು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ