Advertisement

Month: May 2024

ನೀಲ ಕುರುಂಜಿಯ ನಾಡಿನಲ್ಲಿ ರಕ್ತಸಿಕ್ತ ಅಧ್ಯಾಯ

ಯಾವುದೇ ಮನೆ, ಕಾಂಕ್ರೀಟ್ ಕಾಡಿನ ಕಟ್ಟಡಗಳಿಲ್ಲದ, ಒಂದು ಪ್ರಶಾಂತವಾದ ಜಾಗ. ಆದರೆ ಅಲ್ಲಿಗೆ ಹೋಗಿ ತಲುಪುವುದು ಸ್ವಲ್ಪ ಕಷ್ಟದ ಕೆಲಸ. ಹತ್ತು ಕಿಲೋಮೀಟರು ದೂರದವರೆಗೆ ನಿಮ್ಮ ವಾಹನಗಳಲ್ಲಿ ಹೋಗಿ, ಅಲ್ಲಿಂದ ಮುಂದೆ ಅದಕ್ಕೆಂದೇ ಬಾಡಿಗೆ ಇರುವ ಕೆಲವು ಫೋರ್ ವ್ಹೀಲ್ ಜೀಪ್‌ಗಳಲ್ಲಿ ಮಾತ್ರ ಹೋಗಬಹುದು. ಓರೆ ಕೋರೆ, ನೀರು ಹರಿದು, ಅರ್ಧ ಹಾಳಾದ ರಸ್ತೆಯಲ್ಲಿ ಹೋಗುವುದೇ ಒಂದು ಸಾಹಸ ಕ್ರೀಡೆ ಅರ್ಥಾತ್ ಅಡ್ವೆಂಚರ್. ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಮೇಲೆ ಇರುವ ಸ್ಥಳ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’

Read More

ಯಕ್ಷಗಾನವೂ ಜಾನಪದವೂ ಶಾಸ್ತ್ರೀಯವೂ

ಮೀಮಾಂಸೆಯ ಕ್ಷೇತ್ರ ‘ಶಾಸ್ತ್ರೀಯ’ ಕಲೆಗಳ ಸಾಮಾಜಿಕತೆಯನ್ನೂ ತೋರಿಸಿದೆ. ವೈಯಕ್ತಿಕತೆಯ ಹುಸಿಕಲ್ಪನೆಯನ್ನು ಬಲಪಡಿಸುವುದು, ರಾಷ್ಟ್ರವನ್ನು ಪ್ರತಿನಿಧಿಸುವುದು ಮತ್ತು ಇತರೆ ಕಲೆಗಳಿಂದ ಬೇರ್ಪಡಿಸಿಕೊಂಡು ಯಥಾಸ್ಥಿತಿಯನ್ನು ಕಾಯ್ದುಕೊಳ್ಳುವುದು ಇವೆಲ್ಲವೂ ಅದರ ಕೆಲಸವೇ. ‘ಜಾನಪದ’ ಕಲೆಯನ್ನು ಅದರ ಸಾಮಾಜಿಕ ಉಪಯುಕ್ತತೆಗಾಗಿ ನೋಡುವುದು, ‘ಶಾಸ್ತ್ರೀಯ’ವನ್ನು ‘ಶುದ್ಧ ಸೌಂದರ್ಯದ’ ಪರಿಕಲ್ಪನೆಯಲ್ಲಿ ಮಾತ್ರ ನೋಡುವುದು ಕಲಾ ಅಧ್ಯಯನದ ಒಂದು ಮಿತಿಯೇ ಹೌದು. -ಕೃತಿ ಆರ್ ಪುರಪ್ಪೇಮನೆ ಬರಹ

Read More

ಶರೀಫರ ಅನುಭವ ಲೋಕಕ್ಕೊಂದು ಕೈಪಿಡಿ

ಹತ್ತೊಂಬತ್ತನೇ ಶತಮಾನದಲ್ಲಿ ಮುಸ್ಲಿಂ ದಂಪತಿಯ ಮಗನಾಗಿ ಜನಿಸಿದ ವರಕವಿ ಮಹಾ ಮಾನವತಾವಾದಿ ಸಂತಶ್ರೇಷ್ಠ ಪರಿಪೂರ್ಣ ಶಿವಯೋಗಿ ಶರೀಫರು ರಾಮಾಯಣ ಮಹಾಭಾರತ, ದೇವಿಪುರಾಣ, ಪ್ರಭುಲಿಂಗಲೀಲೆ, ಬಸವ, ಅಲ್ಲಮ ಅಕ್ಕರನ್ನು ಮೈಗೂಡಿಸಿಕೊಂಡಿದ್ದವರು. ಮಾಸ್ತರರಾಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳ ರೂವಾರಿಯಾಗಿದ್ದವರು. ಕಳಸದ ಗೋವಿಂದ ಭಟ್ಟರನ್ನು ಸಂಧಿಸಿದಾಗ, ಗೋವಿಂದಭಟ್ಟರು ತಮ್ಮ ಅನುಭಾವದ ಆಧ್ಯಾತ್ಮ ಸಾಮ್ರಾಜ್ಯಕ್ಕೆ ಶರೀಫರನ್ನೇ ಉತ್ತರಾಧಿಕಾರಿಯಾಗಿಸುತ್ತಾರೆ.  ಚಂದ್ರಪ್ರಭಾ ಬರೆದ  ‘ತಗಿ ನಿನ್ನ ತಂಬೂರಿ, ಷರೀಫರ ತತ್ವ ಭಾಷ್ಯ’ ಪುಸ್ತಕದ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ಚಪ್ಪಲಿ ಸಾಹೇಬರ ಚೌರ್ಯಸಂಬಂಧೀ ನೆನಪು

ಸುಮಾರು ದೂರ ಓಡಿ ಅವರನ್ನು ಹಿಡಿದು ಭುಜ ತಟ್ಟಿ ಮಾತಾಡಿಸಿ ಅದೇನೋ ಕೇಳಿದ. ಕೂಡಲೇ ನಕ್ಕು ಪ್ರತಿಕ್ರಿಯಿಸಿದ ಆ ವಯೋವೃದ್ಧರು ತಮ್ಮ ಕೈಲಿದ್ದ ಪ್ಲಾಸ್ಟಿಕ್ ಸಂಚಿಯನ್ನು ಇವನ ಕೈಗೆ ವರ್ಗಾಯಿಸಿದರು. ಇವನು ಅವರ ಕೈ ಕುಲುಕಿದ. ನಾವು ಎಲ್ಲವೂ ಅಯೋಮಯವಾದಂತೆ ನೋಡುತ್ತ ಪಿಳಿಪಿಳಿ ಕಣ್ಣು ಬಿಡುತ್ತಾ ನಿಂತೇ ಇದ್ದೆವು. ಇಬ್ಬರ ಮುಖದಲ್ಲೂ ಹುಸಿನಗೆಯೊಂದು ಕಾಣುತ್ತಲೇ ಇತ್ತಾಗಿ ಧೈರ್ಯ. ಮತ್ತಾವುದೇ ಕಿರಿಕ್ ನಡೆಯದೆಂಬ ಸಮಾಧಾನ. ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ