Advertisement

Month: May 2024

ಉಪದ್ರವಿ ಸಾಹಿತಿಗಳು ಬೇಕಾಗಿದ್ದಾರೆ: ಕುಂ. ವೀರಭದ್ರಪ್ಪ

ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.

Read More

ಕಾಡುವ ನಿನ್ನೆಗಳು ಕಾಣದ ನಾಳೆಗಳ ನಡುವೆ…!

ಕನಸಿನಲ್ಲಿ ಬುದ್ಧನ ಬದುಕಿನಲ್ಲಿ ನಡೆದ ಘಟನೆ ತೆರೆದುಕೊಂಡಿತು. ಸಿದ್ಧಾರ್ಥನು ಶಾಕ್ಯರ ಸಂಘದಲ್ಲಿ ಎಂಟು ವರ್ಷಗಳ ಕಾಲ ನಿಷ್ಠಾವಂತ ಸದಸ್ಯನಾಗಿದ್ದನು. ತನ್ನ ವೈಯಕ್ತಿಕ ವಿಷಯಗಳಿಗೆ ತೋರಿಸುತ್ತಿದ್ದಷ್ಟೆ ಆಸಕ್ತಿಯನ್ನು ಅವನು ಸಂಘದ ವಿಷಯಗಳಲ್ಲೂ ತೋರಿಸುತ್ತಿದ್ದ. ಸಂಘದ ಸದಸ್ಯನಾಗಿ ಅವನ ನಡೆವಳಿಕೆಗಳು ಉಳಿದ ಸದಸ್ಯರಿಗೆ ಮಾದರಿಯಾಗಿ, ಸಂಘದ ಎಲ್ಲಾ ಸದಸ್ಯರ ಪ್ರೀತಿ ಮತ್ತು ಗೌರವಕ್ಕೆ ಪಾತ್ರನಾಗಿದ್ದನು. ಅವನು ಸದಸ್ಯತ್ವ ಪಡೆದ ಎಂಟನೆಯ ವರ್ಷದಲ್ಲಿ ಅನಿರೀಕ್ಷಿತವಾಗಿ ನಡೆದ ಘಟನೆಯೊಂದು ಶುದ್ಧೋಧನನ ಕುಟುಂಬದ ಪಾಲಿಗೆ ದುರಂತವಾಗಿ ಪರಿಣಮಿಸಿತು.
ಪ್ರೊ.ಎಚ್.ಟಿ. ಪೋತೆಯವರ ಹೊಸ ಕಾದಂಬರಿ “ಮಹಾಬಿಂದು” ಇಂದ ಕೆಲವು ಪುಟಗಳು

Read More

ಸಮುದಾಯ ಸಂಘಟನೆ

ಶಿರಹಟ್ಟಿ ತಾಲೂಕು ಬಾಲೆಹೊಸೂರಲ್ಲಿ ಸವರ್ಣೀಯರ ಗಲಬೆಯಲ್ಲಿ ಮಹಾಂತಪ್ಪ ಹನುಮಂತಪ್ಪ ಗುಡಗೇರಿ ಎನ್ನುವವರು ಕೊಲೆಯಾದರು. ಈ ಘಟನೆಯು ಇಡೀ ಗಂಟಿಚೋರ್ ಸಮುದಾಯವನ್ನು ಎಚ್ಚರಿಸಿತು. ನಾವು ಮೌನವಾಗಿದ್ದರೆ ಮೇಲುಜಾತಿಗಳ ದಬ್ಬಾಳಿಕೆ ಮತ್ತೆ ಮತ್ತೆ ನಡೆಯುತ್ತದೆ ಎಂದು ಎಲ್ಲರೂ ಒಟ್ಟಾದರು. ಮೊದಲ ಬಾರಿಗೆ ಉತ್ತರ ಕರ್ನಾಟಕದಲ್ಲಿರುವ ಎಲ್ಲಾ ಗಂಟಿಚೋರರು ಒಂದಾದರು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಗಂಟಿಚೋರರ ಕಥನ ಸರಣಿಯಲ್ಲಿ ಹೊಸ ಬರಹ

Read More

ಮೀನಿನ ರುಚಿ ಹಿಡಿದು ಅಲೆದಾಡಿದವರು

ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಲಂಡನ್ನನ್ನು ಪ್ರಧಾನ ಪಾತ್ರವಾಗಿಸಿದ ಕಾದಂಬರಿಕಾರ

ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಖ್ಯಾತ ಕಾದಂಬರಿಕಾರ ಡಿಕನ್ಸ್‌ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ನಮ್ಮನ್ನೂ ಮನುಷ್ಯರಂತೆ ಕಾಣಿ: ಈರಣ್ಣ ಬೆಂಗಾಲಿ ಕಾದಂಬರಿಯ ಪುಟಗಳು

“ನಾವೂ ಮನುಷ್ಯರೇ, ದಯಮಾಡಿ ನೀವು ನಮ್ಮನ್ನು ಮನುಷ್ಯರಂತೆ ಕಾಣಿ” ಎಂದು ಕೇಳಿಕೊಳ್ಳುತ್ತಾನೆ. ಇದನ್ನು ಕೇಳಿದ ಯಜಮಾನನಿಗೆ ತೀವ್ರ ಮುಜುಗರವಾಗುತ್ತದೆ. ಒಳ್ಳೆಯವರು, ಕೆಟ್ಟವರು ಎಂಬುದು ಅವರ ಜಾತಿಯಿಂದಲ್ಲ, ಬದಲಾಗಿ…

Read More

ಬರಹ ಭಂಡಾರ