Advertisement

Month: May 2024

ಬದುಕಿಗೆ ಸಾವಿರ ತಿರುವುಗಳು

ಹೊಸದಾಗಿ ಬಂದ ಕೃಷ್ಣಾ ಜಾಣನೂ ಮೃದು ಸ್ವಭಾವದವನೂ ಆಗಿದ್ದ. ಹೆಣ್ಣು ಧ್ವನಿಯ ಆತ ‘ಬ್ಯೂಟಿಫುಲ್’ ಆಗಿದ್ದ. ಆತ ಬಂದ ಹೊಸದರಲ್ಲಿ ಜಗ್ಗು ಒಂದು ಸಲ ಕೃಷ್ಣಾಗೆ ಮತ್ತು ನನಗೆ ಐಸ್ಕ್ರೀಮ್ ತಿನ್ನಲು ಪಾರ್ಲರ್‌ಗೆ ಕರೆದುಕೊಂಡು ಹೋದ. ವಿಜಾಪುರದಲ್ಲಿ ಇದ್ದುದರಲ್ಲೇ ಅದು ಬಹಳ ಪಾಶ್ ಆಗಿತ್ತು. ಒಳಗೆ ಕ್ಯಾಬಿನ್‌ಗಳಿದ್ದವು. ಒಂದು ಕ್ಯಾಬಿನ್‌ನಲ್ಲಿ ಹೋಗಿ ಕುಳಿತೆವು. ನನಗೆ ಅಂಥ ಅನುಭವ ಮೊದಲನೆಯದಾಗಿತ್ತು. ಒಂದು ಪೆಗ್ ತುಂಬ ಐಸ್ಕ್ರೀಮ್ ಕೂಡ ಮೊದಲ ಬಾರಿಗೆ ತಿಂದದ್ದು. ಕೃಷ್ಣಾ ಬಹಳ ಮುಜುಗರದಿಂದ ತಿನ್ನುತ್ತಿದ್ದ.
ರಂಜಾನ್ ದರ್ಗಾ ಬರೆಯುವ “ನೆನಪಾದಾಗಲೆಲ್ಲ” ಸರಣಿಯ ಇಪ್ಪತ್ತೆಂಟನೆಯ ಕಂತು

Read More

ಕನ್ನಡದ ಕಣ್ಣಲ್ಲಿ ಅಮೆರಿಕನ್ ‘ಶೈಶವ’

ಅನುವಾದವೆಂದರೆ ಪದಗಳ ಅದಲಿ ಬದಲಿಯಲ್ಲ;  ಪದಶಃ  ಬದಲಾವಣೆಯಲ್ಲ ಕವಿತೆಯ ಬಾವವನ್ನು ಮುಕ್ಕಾಗಿಸದೆ ಅತ್ಯಂತ ಸೂಕ್ಷ್ಮವಾಗಿ  ಅಂದುಕೊಂಡ ಭಾಷೆಯಲ್ಲಿ ಹೇಳುವ ರೀತಿಯಾಗಿದೆ.   ಮೂಲ ಆಶಯಕ್ಕೆ ಧಕ್ಕೆಯಾಗದಂತೆ ಅನುವಾದಿಸುವುದು ನಿಜಕ್ಕೂ ಸವಾಲಿನ ಕೆಲಸ.  ಕನ್ನಡ ಸಾಹಿತ್ಯ ಲೋಕಕ್ಕೆ ಇಂತಹ ಅನೇಕ ಕೃತಿಗಳು ಪ್ರವೇಶ ಪಡೆದಿವೆ.  ಇತ್ತೀಚೆಗೆ  ಅಮೆರಿಕನ್ ಕವಯತ್ರಿ ಎಮಿಲಿ ರಾಲ್ಫ್ ಗ್ರೋಶೆಲ್ಸ್ ಅವರ  ‘ಚೈಲ್ಡ್ ಹುಡ್’  ಎಂಬ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಮೈ. ಶ್ರೀ. ನಟರಾಜ್.  ‘ಶೈಶವ’ ಎನ್ನುವ  ಶೀರ್ಷಿಕೆಯ ಈ  ಕವನಸಂಕಲನದ ವಿಭಿನ್ನತೆಯನ್ನು ಗುರುತಿಸಿದ್ದಾರೆ ಲೇಖಕಿ ಸುಮಾವೀಣಾ.  ಮಕ್ಕಳ ಬಾಲ್ಯವನ್ನೇ ವಸ್ತುವಾಗಿಸಿಕೊಂಡು ಒಡಮೂಡಿದ ಕೃತಿಯ ಕುರಿತು ಅವರು ಬರೆದ ಪುಟ್ಟ ಬರಹವೊಂದು ಇಲ್ಲಿದೆ.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಕತೆ: ನಕ್ಕ ನಗು

ಅವಳು ಹೀಗೆ ನಗಲು ಪ್ರಾರಂಬಿಸಿದಳೆಂದರೆ ಉಳಿದವರಿಗೆ ಗಾಬರಿಯಾಗುತ್ತಿತ್ತು. ನಕ್ಕು ಸುಸ್ತಾಗಿ ಕಣ್ಣ ತುದಿಯಿಂದ ಹರಿವ ನೀರನ್ನು ಸೆರಗಿನಿಂದ ಒರೆಸಿಕೊಳ್ಳುತ್ತಾ, ಮುಖ ಕೆಂಪಗೆ ಮಾಡಿಕೊಂಡು, ನೂರರ ವೇಗದಲ್ಲಿ ಓಡುತ್ತಿರುವ ಗಾಡಿ ಸಡನ್ ಬ್ರೇಕ್ ಹಾಕಿದಂತೆ ಸುಮ್ಮನಾಗುತ್ತಿದ್ದಳು. ನಲವತ್ತೈದು ವರುಷದ ಅವಳ ದಾಂಪತ್ಯಕ್ಕೆ ವ್ಯಾಖ್ಯೆ ಬರೆದಂತೆ ಬಂಡೆಕಲ್ಲಿನಂತೆ ಕುಳಿತು ಬಿಡುತ್ತಿದ್ದಳು. ‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಗಿರಿಜಾ ಶಾಸ್ತ್ರಿ ಬರೆದ ಕತೆ ‘ನಕ್ಕ ನಗು!

Read More

ಸಿಸಿಲಿಯನ್ ಡೈರೀಸ್: ಯುರೇಕಾ ನಗರಿ ಸಿರಕುಸಾ

ಸಿಸಿಲಿಯ ಹತ್ತು ದಿನದ ಪ್ರವಾಸದಲ್ಲಿ ಮೊದಲು ಭೇಟಿ ಕೊಟ್ಟಿದ್ದು “ಸಿರಕುಸಾ”ಗೆ. ಹೌದು! ಇದು ಆರ್ಕಿಮಿಡಿಸ್ ನ ಜನ್ಮಸ್ಥಳ ಹಾಗೂ ವಾಸಸ್ಥಳವಾಗಿತ್ತು. ಆರ್ಕಿಮಿಡಿಸ್ ಎಂದಾಕ್ಷಣ ಯುರೇಕಾ ಎಂದು ಮಾತ್ರ ತಿಳಿದಿದ್ದ ನನಗೆ, ಈ ಪ್ರವಾಸ ಬೇರೆಯ ಪ್ರಪಂಚವನ್ನೇ ತೆರೆದಿಟ್ಟಿತು.  ಆರ್ಕಿಮಿಡಿಸ್  ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ  ರಾಜ್ಯವು ಭದ್ರವಾಗಿರಲು ಬೇಕಾದ ಅನೇಕ ಸಲಹೆಗಳನ್ನು ಕೊಡುತ್ತಿದ್ದ. ಅವನ ರಾಜ್ಯ ಸಿರಕುಸಾದಲ್ಲಿ ಓಡಾಡಿದ ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಪ್ರಸ್ತುತಪಡಿಸಲಿದ್ದಾರೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ