Advertisement

Month: April 2024

ಸುಖ ಸಂಸಾರಕ್ಕೆ ಸಾವಿರ ಸೂತ್ರ ಮತ್ತಷ್ಟು ಖಾಲಿ ಹಾಳೆಗಳು

ನೀ ಬಿಡು, ಅತ್ತೂ ಕರೆದೋ, ಪೆಚ್ಚು ಮೋರೆ ಹಾಕಿ ಕುಳಿತುಕೊಂಡೋ, ಸಲ್ಲದ ವರ ಬಂದಾಗ ಅಪ್ಪನ ಮುಂದೆ ಸೊಲ್ಲೆತ್ತದೆ, ಅವ್ವನ ಕಿವಿಯೂದಿ ನಿನ್ನಿಚ್ಛೆಯ ಹುಡುಗ ಸಿಕ್ಕಾಗ ಗ್ರೀನ್ ಸಿಗ್ನಲ್ ತೋರಿದವಳು. ಇದು ಬಲ್ಲಿದರ ಕಾರು ದಾರಿಯ ರಸ್ತೆಯಲ್ಲ, ಬಡವರ ಬಂಡೀ ರಸ್ತೆ ಎಂದರಿತರೂ ಬಂಡೀ ನಡೆಸುವವನ ಯೋಗ್ಯತೆ ಅರಿತು ಹತ್ತಿ ಕುಳಿತವಳು. ಹಾಗಾಗಿ ಉರುಳುವ ಬಂಡಿಯ ಗಾಲಿಗೆ ಕೀಲದ ಕಡೆಗೇ ನಿನ್ನ ಗಮನವಿತ್ತು. ಎಂಥ ತಗ್ಗು ದಿಣ್ಣೆಗಳು ಬಂದರೂ, ಏರು ಇಳುವುಗಳು ಬಂದರೂ ನಿನ್ನವನ ತೋಳಿನ ಶಕ್ತಿಯಾಗಿ ಸಾಗಿದೆ.
ಡಾ. ನಿಂಗು ಸೊಲಗಿ ಬರೆದ “ನನ್ನಿನ್ನ ನಗಿ ನೋಡಿ” ಪುಸ್ತಕದ ಒಂದು ಪತ್ರ ನಿಮ್ಮ ಓದಿಗೆ

Read More

ಬುಕ್‌ ಬ್ರಹ್ಮ ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ: ಪ್ರಥಮ ಬಹುಮಾನ ರೂ.50,000

ಭಾರತದ 75ನೇ ಸ್ವಾತಂತ್ರ್ಯೋತ್ಸವ ಮತ್ತು ಸಂಸ್ಥೆಯ ಮೂರನೇ ವಾರ್ಷಿಕೋತ್ಸವದ ಹಿನ್ನಲೆಯಲ್ಲಿ ’ಬುಕ್ ಬ್ರಹ್ಮ...

Read More

ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

“ಒಳಗೊಳಗೇ ಉರಿಸಿದ
ವಿರಹದ ಬೇಗುದಿ
ಮನದ ಹೊಸ್ತಿಲಲ್ಲಿ ಒಬ್ಬಂಟಿಯಾಗಿ
ಕುಳಿತು ಬಿಟ್ಟ ನಿಟ್ಟುಸಿರು
ಅಂಗಳ ದಾಟಿ ಹೊರಹೋಗದ ಬಿಕ್ಕಳಿಕೆ”- ಡಾ. ಪ್ರೀತಿ ಕೆ.ಎ. ಬರೆದ ಹೊಸ ಕವಿತೆ

Read More

ಬೆಂಕಿಯಲ್ಲಿ ಅರಳಿದ `ಹೂ’ “ಗೋದಾವರಿ ಗಂಟಿಚೋರ”

ಗಂಟಿಚೋರ ಸಮುದಾಯವನ್ನು ಬ್ರಿಟೀಶ್ ಆಡಳಿತದಲ್ಲಿ ಕ್ರಿಮಿನಲ್ ಟ್ರೈಬ್ಸ್ ಪಟ್ಟಿಗೆ ಸೇರಿಸಿ ಇವರನ್ನು ನಿಯಂತ್ರಿಸಲು `ಸೆಟ್ಲಮೆಂಟ್’ ಎಂಬ ದೊಡ್ಡ ಜೈಲಲ್ಲಿ ಬಂಧಿಸಿದ್ದರು. ಇವರನ್ನು ಹದ್ದಿನ ಕಣ್ಣಿನಲ್ಲಿ ಕಾವಲು ಕಾಯುತ್ತಾ ಚಿತ್ರ ಹಿಂಸೆಗೆ ಒಳಗುಮಾಡಿದ್ದರು. ಪೌಜುದಾರ, ಪೋಲಿಸರಿಂದ ನಿರಂತರ ಹಿಂಸೆಗೆ ಒಳಗಾದ ಈ ಪುಟ್ಟ ಗಂಟಿಚೋರ ಸಮುದಾಯ ಕಾಲಾನಂತರದಲ್ಲಿ ಯಾರೇ ಕಳ್ಳತನ ಮಾಡಿದರೂ ಇವರನ್ನೇ ಹಿಂಸಿಸುತ್ತಿದ್ದ ಪೋಲಿಸರ ದಬ್ಬಾಳಿಕೆಗೆ ನಲುಗಿತು. ಡಾ. ಅರುಣ್ ಜೋಳದಕೂಡ್ಲಿಗಿ ಬರೆಯುವ ಸರಣಿ

Read More

ಆನೆ ಸಾಕಲು ಹೊರಟವಳ ಕಥೆ

ಸುಲಲಿತವಾದ ಪ್ರಬಂಧಗಳಿಗೆ ಅವರು ಆಯ್ದುಕೊಳ್ಳುವ ವಿಷಯಗಳೇನೂ ಅಸಾಮಾನ್ಯವಾದುದಲ್ಲ. ಹೆಚ್ಚಿನವು ದಿನನಿತ್ಯ ಜರುಗುವ ಸಂಗತಿಗಳೇ. ಆದರೆ ಅದನ್ನು ಹೇಳುವ ಶೈಲಿ ಇದೆಯಲ್ಲಾ, ಅದು ಮಾತ್ರ ನಿಜಕ್ಕೂ ಅದ್ಭುತ. ಅತ್ಯಂತ ಚಿಕ್ಕದಾಗಿ, ಚೊಕ್ಕದಾಗಿ ಮತ್ತು ಸರಳವಾಗಿ ನಿರೂಪಣೆ‌ ಮಾಡುತ್ತಾರೆ. ಮಧ್ಯಾಹ್ನ ಮಾಡುವ ಅಡುಗೆಗೆ ಸಂಬಂಧಿತ ಲಹರಿ ಬಂದರೆ ಅದುವೇ ಒಂದು ಪ್ರಬಂಧವಾಗುತ್ತದೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ