Advertisement

Month: May 2024

ಬಾಳಿನ ಸಂತೆಯಲ್ಲಿ ಗಜಲ್ ಧ್ಯಾನ..

ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್‌ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ

Read More

ಮೌನೇಶ್ ನವಲಹಳ್ಳಿ ಬರೆದ ಈ ದಿನದ ಕವಿತೆ

“ರಕ್ತದ ಮಳೆ ಬರುತ್ತೈತಣ್ಣ ಕಾಲಜ್ಞಾನಿಯ ಮಾತು
ಮುಕ್ತತೆಯ ಬೆಳೆಯ ನುಂಗಿ ನೀರ ಕುಡಿಯಬಹುದು
ಮಗ್ದತೆಯ ನಗುವ ಬಾಚಿ ಮೋಜು ನೋಡಬಹುದು
ಶಕ್ತತೆಯಲಿ ದುಡಿಯುವವನ ಹೆಣ ತೇಲಬಹುದು
ಅತಂತ್ರವಾಗಬಹದು ಸ್ವಾತಂತ್ರ್ಯ ಹಳದಿ ಮೇಘಗಳ ಹುಚ್ಚಾಟಕೆ”- ಮೌನೇಶ್ ನವಲಹಳ್ಳಿ ಬರೆದ ಈ ದಿನದ ಕವಿತೆ

Read More

ಖಾದಿಯ ಜನನವೂ ಚರಖಾದ ಪ್ರೀತಿಯೂ

ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವಸಂತಗಳು ತುಂಬಿವೆ. ಸ್ವಾತಂತ್ರ್ಯ ಹೋರಾಟದ ಆ ಹಾದಿಯು ಬಹುದೀರ್ಘವಾದುದು. ಸತ್ಯಾಗ್ರಹ, ಸ್ವದೇಶಿ ಚಿಂತನೆ, ಖಾದಿ ಮತ್ತು ಚರಖಾದ ಮೂಲಕ ನಡೆದ ಅಸಹಕಾರ ಚಳವಳಿಗಳು ಹೋರಾಟದ ಹಾದಿಗೆ ಸಾತ್ವಿಕ ಬಲವನ್ನು ತುಂಬಿವೆ. ಇದರಿಂದಾಗಿ ಹೋರಾಟವು ವಿಶ್ವದಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ. ಆದರೆ ಈ ಖಾದಿ ಮತ್ತು ಚರಖಾ ಎಂಬ ಮಾಧ್ಯಮಗಳಿಗೆ ಚಳವಳಿಯೊಂದನ್ನು ಕಟ್ಟುವ ಸಾಮರ್ಥ್ಯವಿದೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಗೆ ಗುರುತಿಸಿದರು ಎಂಬುದನ್ನು ಅವರು ‘ನನ್ನ ಸತ್ಯಾನ್ವೇಷಣೆ’ ಯಲ್ಲಿ ವಿವರಿಸಿದ್ದಾರೆ. ಆ ಎರಡು ಅಧ್ಯಾಯಗಳನ್ನು ನೆನಪಿಸಿಕೊಳ್ಳಲು ಇದೊಂದು ಸುಸಂದರ್ಭ ಅಲ್ಲವೇ..

Read More

ಓ ದೇವರೆ ಈ ಪುಣ್ಯ ಅವನಿಗೆ ಲಭಿಸಲಿ

ನನ್ನ ತಂದೆಗೆ ಆ ತೂತಿನ ದುಡ್ಡು ಕೇಳಿದೆ. ಅವರು ಕೊಡಲಿಲ್ಲ. ಆ ದುಡ್ಡು ನನ್ನದಲ್ಲ ಎಂದರು. ನನಗೆ ಅರ್ಥವಾಗಲಿಲ್ಲ. ಆ ತೂತಿನ ದುಡ್ಡಿಗಾಗಿ ಕೊಂಯಾ ಕೊಂಯಾ ಮಾಡುತ್ತಿದ್ದೆ. ಸೇಂಗಾ ಬೆಲ್ಲ ಕೊಳ್ಳುವವರೆಗೂ ಆ ತೂತಿನ ದುಡ್ಡಿನಲ್ಲಿ ಕಿರುಬೆರಳು ಸೇರಿಸಿ ಆಡುವ ಖುಷಿಯೂ ಇತ್ತು. ಹೀಗೆ ಆ ದುಡ್ಡು ಡಬಲ್ ಧಮಾಕಾ ಇಫೆಕ್ಟ್ ಕೊಡುತ್ತಿತ್ತು. ಅಂದು ಇದೊಂದು ದೊಡ್ಡ ಚಿಂತೆಯಾಯಿತು. ನನ್ನ ತಂದೆ ಇಷ್ಟೇಕೇ ಕಠೋರ ಆಗಿದ್ದಾರೆ ಎಂಬುದು ತಿಳಿಯಲಿಲ್ಲ. ಅಂತೂ ಶನಿದೇವರ ಗುಡಿಯ ಮುಂದೆ ಹೋದೆವು. ತಂದೆ ಆ ಎರಡು ರೂಪಾಯಿ ಚಿಲ್ಲರೆ ದುಡ್ಡನ್ನು ಕುಂಬಳ ಚಾಟಿಯ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ರಂಜಾನ್‌ ದರ್ಗಾ ಬರೆಯುವ ನೆನಪಾದಾಗಲೆಲ್ಲ ಸರಣಿಯ 42ನೇ ಕಂತು ಇಲ್ಲಿದೆ.

Read More

ಡಾ. ಮಲರ್‌ ವಿಳಿ ಅನುವಾದಿಸಿದ ಕತೆ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು”

ತಲೆಯನ್ನು ಸ್ವಲ್ಪ ಮೇಲಕ್ಕೆ ಎತ್ತಿ ಹಿಡಿದು ಸರವನ್ನು ಬಿಚ್ಚಿದನು. ಅರಿಶಿನ ದಾರವನ್ನು ಮಾತ್ರ ಹಾಗೇ ಬಿಟ್ಟುಬಿಟ್ಟು ಬಂಗಾರದ ತಾಳಿ, ಕಾಸನ್ನು ಸೆಳೆದು ತೆಗೆದುಕೊಂಡನು. ಮೂಗುತಿಯನ್ನು ಬಿಚ್ಚಲು ನೋಡಿದ ತಿರುಪು ಎಂಬ ಸೂಕ್ಷ್ಮವನ್ನು ಅಕ್ಕಸಾಲಿಗನು ಒಳಗೆ ಇಟ್ಟಿದ್ದಾನೆ. ಬೆರಳ ತೂರಿಸಿ ಎಷ್ಟು ಪ್ರಯತ್ನಿಸಿದರೂ ಬಿಚ್ಚಲಾಗಲಿಲ್ಲ. ಕಾಡೈಯನ್ ತಾಳ್ಮೆಗೆಟ್ಟನು. ಮೂಗುತಿ ಮುಖ್ಯವೇ ಹೊರತು ಮೂಗು ಯಾತಕ್ಕೆ ಹೆಣಕ್ಕೆ? ಒಂದು ಬಾರಿ ಎಳೆದನು. ಡಾ. ಮಲರ್‌ ವಿಳಿ ಅನುವಾದಿಸಿದ ತಮಿಳಿನ ಕಥೆಗಾರ ಡಾ. ವೈರಮುತ್ತು ಬರೆದ “ಸ್ವಲ್ಪ ಹೊತ್ತು ಮನುಷ್ಯನಾಗಿದ್ದವನು” ಕತೆ, ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ