Advertisement

Month: May 2024

ನಾ ಕಾಣದ ನನ್ನಜ್ಜಿಯರು

ಹೆಣ್ಣುಲೋಕದ ಎಲ್ಲ ತಲ್ಲಣಗಳನ್ನು ನನ್ನೊಳಗೆ ಬೀಜರೂಪಿಯಾಗಿ ಮೊಳೆಯಿಸಿದ್ದಾರೆ. ಆದರೂ ನನ್ನನ್ನು ಅಜ್ಜಿಯ ವಾತ್ಸಲ್ಯದಿಂದ ಪೊರೆದಿದ್ದು ಮಾತ್ರ ನಮ್ಮೂರಿನ ಬಡ್ಕಜ್ಜಿ. ತನ್ನ ಐದನೆಯ ವಯಸ್ಸಿಗೆ ಗಂಡನನ್ನು ಕಳಕೊಂಡು ಜೀವನಪೂರ್ತಿ ಒಂಟಿಯಾಗಿಯೇ ಬದುಕಿದ ಅವಳಿಗೆ ನನ್ನನ್ನೂ ಸೇರಿಸಿದಂತೆ ನೂರಾರು ಮೊಮ್ಮಕ್ಕಳು. ಅರವತ್ತು ದಾಟಿದ ತನ್ನ ಗಂಡ ಮೂರನೆಯಹೆಂಡತಿಯಾದ ತನ್ನನ್ನು ಹೆಗಲಮೇಲೆ ಕೂರಿಸಿಕೊಂಡು ಹೊಳೆದಾಟಿಸಿದ ನೆನಪು ಮಾತ್ರ ಅವಳಿಗಿತ್ತು, ಅವಳ ಮದುವೆಯ ಕಥೆಯನ್ನೂ ಹಾಸ್ಯವಾಗಿ ಹೇಳಿ ನಗಿಸಬಲ್ಲಷ್ಟು ಸ್ಥಿತಪ್ರಜ್ಞತೆ ಅವಳಿಗೆ ಅದೆಲ್ಲಿಂದ ಬಂದಿತ್ತೋ. ಅಜ್ಜಿಯರ ಲೋಕದ ಸಂವೇದನೆಗಳನ್ನು ಸೂಕ್ಷ್ಮವಾಗಿ ಹೆಣೆದಿದ್ದಾರೆ ಸುಧಾ ಆಡುಕಳ

Read More

ಸ್ವಭಾವ ಕೋಳಗುಂದ ಬರೆದ ಈ ದಿನದ ಕವಿತೆ

“ನೆಟ್ಟ ಮರ ಬಳ್ಳಿ
ಹಣ್ಣು ಕಾಯಿಗಳ ಸಿಹಿಯೊಗರು
ಹದವಾಗಿ ಬೆಂದ ಅಗುಳು
ನೈವೇದ್ಯಕ್ಕೆ ನಡೆದು
ಮೋಕ್ಷದ ಸುಖ”- ಸ್ವಭಾವ ಕೋಳಗುಂದ ಬರೆದ ಈ ದಿನದ ಕವಿತೆ

Read More

ಒಳಗುದಿಯ ದೀಪ ಉರಿಯುತಿತ್ತು

ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎನ್ನುತ್ತಿದ್ದೆ. ನನ್ನ ಅಳಲನ್ನು ಈ ಸಂಗೀತಗಾರರು ಅದೆಷ್ಟು ಸಲ ಸಂತೈಸಿದ್ದಾರೊ ಏನೊ..ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ 33ನೇ ಕಂತು

Read More

ಪ್ರಕೃತಿಯ ರಮ್ಯವಾದ ಮಾಯಾತಾಣ ಮಾರೀಷಿಯಸ್

ಅಲ್ಲಿನ ಶಾಲಾ ಕಾಲೇಜಿನ ಮಕ್ಕಳೆದುರು ಪ್ರಧಾನಮಂತ್ರಿಯೂ ರಸ್ತೆ ಕಾಯುವವನೇ. ಮಾತು ಮಾತಿಗೂ ಪರದೇಶದ ಸಂಸ್ಕೃತಿಯನ್ನು ಹಳಿದೇ ನನ್ನ ಸಂಸ್ಕೃತಿಯ ಹಿರಿಮೆಯನ್ನು ಮೆರೆಯುವ ಮನಸ್ಸಿನೊಳಗೊಂದು ಗಂಟಾನಾದ. ಅಂದಹಾಗೆ ಮಾರೀಷಿಯಸ್ಸಿನ ಅಳತೆ ನೋಡಿ ದಾರಿ ಕ್ರಮಿಸಲು ಕಡಿಮೆ ಸಮಯ ಸಾಕೆಂದು ಅಂದಾಜು ಹಾಕಿದರೆ ತಪ್ಪಾದೀತು. ಕಿರಿದಾದ ದಾರಿಗಳಲ್ಲಿ 45 ಕಿಲೋಮೀಟರ್ ಕ್ರಮಿಸಲು ಬೇಕಾದ ಸಮಯ 90 ನಿಮಿಷಗಳು!  ಅಲ್ಲಿಗೆ ಹೋಗುವ ಪ್ರವಾಸ ಖಚಿತವಾಗುವವರೆಗೂ ಮಾರಿಷಿಯಸ್ ಆಫ಼್ರಿಕಾ ಖಂಡಕ್ಕೆ ಸೇರಿದ ದ್ವೀಪ ಎನ್ನುವ ಸಾಮಾನ್ಯಜ್ಞಾನ ನನಗಿರಲಿಲ್ಲ. ʼಕಂಡಷ್ಟೂ ಪ್ರಪಂಚʼ ಅಂಕಣದಲ್ಲಿ ಅಂಜಲಿ ರಾಮಣ್ಣ ಲೇಖನ.

Read More

ಸರಕು ಮತ್ತು ಸಂಪ್ರದಾಯ

ಎಲ್ಲವೂ ಸರಕಾಗುತ್ತಿರುವ ಸಮಾಜದಲ್ಲಿ ನಾವಿರುವಾಗ ಸಂಪ್ರದಾಯದ ಮೇಲೆ ಅದರ ಪರಿಣಾಮಗಳೇನು? ಸರ್ವವ್ಯಾಪಿಯಾದ ವ್ಯವಸ್ಥೆ ಸಂಪ್ರದಾಯವನ್ನು ಮುಟ್ಟದೇ ಇರುತ್ತದೆಯೇ? ಸಂಪ್ರದಾಯದ ಪ್ರತಿಕ್ರಿಯೆಯ ಸಮಸ್ಯೆಗಳೇನು ಎನ್ನುವುದನ್ನು ನೋಡೋಣ. ಸಂಪ್ರದಾಯವೆನ್ನುವುದು ಸರಳವಾಗಿ ಹೇಳುವುದಾದರೆ ನಮ್ಮ ಹಿರಿಯರಿಂದ ಬಂದಿದ್ದು. ಪೀಳಿಗೆಯಿಂದ ಪೀಳಿಗೆಗೆ ಬರುವಂತದ್ದು. ಹಿರಿಯರು, ಪೀಳಿಗೆ ಅಂದಾಗ ಅದು ಸಮುದಾಯವನ್ನು, ಕುಟುಂಬವನ್ನು ಒಳಗೊಂಡಿದೆ ಎನ್ನುವುದನ್ನು ಸೂಚಿಸುತ್ತದೆ. ಕೃತಿ ಪುರಪ್ಪೇಮನೆ ಬರೆಯುವ “ಯಕ್ಷಾರ್ಥ ಚಿಂತಾಮಣಿ” ಅಂಕಣದಲ್ಲಿ ಹೊಸ ಬರಹ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ