Advertisement

Month: May 2024

ಚುಕ್ಕೆ ರಾಟುವಾಳ, ನಾನು ಮತ್ತು ನಂಬಿಕೆ

ಬಹುಶಃ ಒಂದು ತಿಂಗಳಲ್ಲಿ ಅವುಗಳ ಗೂಡು ತಯಾರಾಗಿತ್ತು. ಅದಾದ ಕೆಲವೇ ದಿನಗಳಲ್ಲಿ ೧೨-೧೩ ದಿನಗಳಲ್ಲಿ ಆ ಎರಡು ಲವ್ ಬರ್ಡ್ಸ್ ತಮ್ಮ ಗೂಡಿಗೆ ನಾಲ್ಕು ಹೊಸ ಅತಿಥಿಗಳ ಕೊಡುಗೆಯನ್ನು ಜಗತ್ತಿಗೆ ನೀಡಿದವು. ಕಿಟಗಿ ಹಿಂಭಾಗದಲ್ಲಿ ಅರೆ ಪಾರದರ್ಶಕ ಗಾಜಿನೊಳಗಿಂದ ಅವುಗಳನ್ನು ನೋಡುತ್ತಾ ಬಹಳ ಖುಷಿಯಾದೆ. ಅವುಗಳನ್ನು ಕಂಡು ಮಕ್ಕಳಂತೂ ಹಿಗ್ಗಿ ಕುಣಿದಾಡಿದರು. ಬೆಳಿಗ್ಗೆ ಎದ್ದೊಡನೆ ಅವುಗಳ ದರ್ಶನ..
ಚುಕ್ಕೆ ರಾಟುವಾಳ ಹಕ್ಕಿಯೊಂದಿಗಿನ ಪ್ರಸಂಗವನ್ನು ಬರೆದಿದ್ದಾರೆ ಮಹಮ್ಮದ್‌ ರಫೀಕ್‌ ಕೊಟ್ಟೂರು

Read More

ಲೇಖಕರ ಮತ್ತು ಓದುಗರ ನಡುವಿನ ಕೊಂಡಿ ಹೊಸೆಯುತ್ತಾ…

ಪ್ರಕಾಶಕರು, ಲೇಖಕರ ಮತ್ತು ಓದುಗರ ನಡುವಿನ ಬಹುಮುಖ್ಯ ಕೊಂಡಿ. ಅವರ ಸಹಾಯವಿಲ್ಲದೇ ಯಾವುದೇ ಲೇಖಕರ ಕೃತಿಯು ಓದುಗರನ್ನು ತಲುಪಲು ಸಾಧ್ಯವಿಲ್ಲ. ನಮ್ಮ ಭಾಷೆಯಲ್ಲಿ ಯಾವೆಲ್ಲ ತರಹದ ಸಾಹಿತ್ಯ ಕೃಷಿ ನಡೆಯುತ್ತಿದೆ ಅನ್ನುವುದನ್ನು ಓದಿ, ಓದುಗರ ಮುಂದಿಟ್ಟಾಗಲೇ ಒಬ್ಬ ಓದುಗನಿಂದ ಮತ್ತೊಂದು ಓದುಗ ಹುಟ್ಟಿಕೊಳ್ಳುವುದು. ಅದರ ಜೊತೆಗೇ ಎಂಥ ಪ್ರಕಾರದ ಪುಸ್ತಕವನ್ನು ಓದುಗರ ಕೈಗಿಡಬೇಕು, ಮತ್ತೆ ಓದುಗನಿಗೆ ಪುಸ್ತಕ ತಲುಪಿಸುವ ಮಾರ್ಗಗಳೇನು ಎಂಬುದೂ ಈ ಹೊತ್ತಿನಲ್ಲಿ ಚರ್ಚಿಸಬೇಕಾದ ವಿಷಯ. ರೂಪಶ್ರೀ ಕಲ್ಲಿಗನೂರ್‌ ಬರಹ ಇಲ್ಲಿದೆ

Read More

ದಂಡಕಾರಣ್ಯದ ಆದಿವಾಸಿಗಳ ದೇವ-ದೇವಿಯರು

ಶಿವ ಶಕ್ತಿಯ ಸಂಗಮವು ನಾನಾರೀತಿಯಲ್ಲಿ ನಮ್ಮ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿದೆ ಮತ್ತು ವಿಸ್ಮಯವೆನಿಸುವ ರೀತಿಗಳಲ್ಲಿ ಅದು ಅಭಿವ್ಯಕ್ತಿ ಹೊಂದಿದೆ. ಬುಡಕಟ್ಟಿನವರ ದೇವಲೋಕವೂ ಇದಕ್ಕೆ ಹೊರತಾಗಿಲ್ಲ. ನದಿಯ ನಡುವೆ ಒಂದು ಕಲ್ಲಿದೆ. ಅಲ್ಲಿ ತ್ರಿಶೂಲದ ಹಾಗೂ ಒಂದು ಪಾದದ ಗುರುತಿದೆ. ದಂತೇಶ್ವರಿ ಮತ್ತು ಭೈರವರು ಕಣ್ಣಾಮುಚ್ಚಾಲೆ ಆಟ ಆಡುತ್ತಿದ್ದಾಗ ದೇವಿಯು ಶಿವ ಮೋಸ ಮಾಡಿದ ಎಂದು ಕೋಪದಿಂದ ಅವನ ಮೇಲೆ ಎಸೆದ ತ್ರಿಶೂಲ ಅಲ್ಲಿ ಸಿಕ್ಕಿಕೊಂಡಿದೆ ಎನ್ನುವುದು ನಂಬಿಕೆ. ಅದಕ್ಕೇ ತಪ್ಪಿಸಿಕೊಂಡು ಹೋದ ಭೈರವನ ದೇವಾಲಯ ನದಿಯ ಆಚೆ ದಡದಲ್ಲಿದೆ.
ಗಿರಿಜಾ ರೈಕ್ವ ಬರೆಯುವ ಅಂಕಣ ‘ದೇವಸನ್ನಿಧಿ’

Read More

ರವಿ ಶಿವರಾಯಗೊಳ ಬರೆದ ಈ ದಿನದ ಕವಿತೆ

“ಹೈಸ್ಕೂಲೂ ಓದದ ಚಾಯ್ ಹುಡುಗನಿಗೆ
ವಿಜ್ಞಾನಕಿಂತ ಲೋಕಜ್ಞಾನ ಬಲು ರುಚಿಸುತ್ತದೆ
ಒಮ್ಮೊಮ್ಮೆ ಯಾರಿಗೋ ಅವನು ಓಶೋ ಆಗುತ್ತಾನೆ
ದಾರಿ ತಪ್ಪಿ ಬಂದವರ ಕೈಗೊಂದು ಚಾ ಇಟ್ಟು
ದಿಕ್ಕು ತೋರಿಸುತ್ತಾನೆ…
ಚಾದ ಮೇಲಿನ ಹೊಗೆಯಂತೆಯೇ ಬಂದವರು
ಇವನ ಕೈ ಬೆರಳಿನ ನೇರಕ್ಕೆ ಹೋಗಿ ಎತ್ತಲೋ ತಿರುಗಿ ಮರೆಯಾಗುತ್ತಾರೆ
ಒಳಗೊಳಗೇ ಇವನಿಗೆ ಎಂಥದೋ ಖುಷಿ…”- ರವಿ ಶಿವರಾಯಗೊಳ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ