Advertisement

Month: May 2024

ಪರಕೀಯತೆಯ ಪ್ರಜ್ಞೆ ಬಿಂಬಿಸುವ ತಿರುಮಲೇಶರ ಕತೆಗಳು

ಕವಿತೆ ಮತ್ತು ಕಾದಂಬರಿಗಳಲ್ಲಿ ನಡೆಸಿದ ವಾಸ್ತವ ನೆಲೆಯ ಹುಡುಕಾಟವನ್ನು ಅವರು ಇಲ್ಲೂ ನಡೆಸಿದ್ದಾರೆ. ‘ಜಾಗುವಾ ಮತ್ತು ಇತರರು’ ಕತೆಗಳಲ್ಲಿರುವಷ್ಟು ನವ್ಯದ ಪ್ರಖರತೆ ‘ಕೆಲವು ಕಥಾನಕಗಳ’ಲ್ಲಿ ಇಲ್ಲದಿದ್ದರೂ ಮುಖ್ಯ ಕಾಳಜಿಗಳು ಮಾತ್ರ ಮೊದಲಿನವೇ. ಜೀವನದ ಇರುವಿಕೆಯ ರೀತಿ, ರಹಸ್ಯಗಳ ಶೋಧನೆಗಳು ಮತ್ತು ಪರಕೀಯ ಪ್ರಜ್ಞೆಯ ಆಧಾರದಲ್ಲಿ ಮೂಡುವ ದಾರ್ಶನಿಕ ಒಳನೋಟಗಳು ಮುಖ್ಯವಾಗುತ್ತವೆ.
ಕೆ.ವಿ. ತಿರುಮಲೇಶರ ಕತೆಗಳ ಕುರಿತು ಬರೆದಿದ್ದಾರೆ ಡಾ. ಸುಭಾಷ್‌ ಪಟ್ಟಾಜೆ

Read More

ಕಾದಂಬರಿಗಳಲ್ಲಿ ತಿರುಮಲೇಶರ ಅನನ್ಯತೆ

ಕಾದಂಬರಿಯ ನಿಜ ಸತ್ವ ಅಡಗಿರುವುದು ಕಾದಂಬರಿಯ ಮೂವತ್ತಮೂರನೆ ಅಧ್ಯಾಯದಲ್ಲಿಯೇ. ಕಾದಂಬರಿಯ ಆರಂಭಕ್ಕೆ ಬಂದ ಕಮಲ ಕಡೆಗೂ ಬರುತ್ತಾಳೆ. ಬೀಡಿ ಹೊಸೆದೂ ಹೊಸೆದೂ ಕುಟುಂಬ ನಿಭಾಯಿಸಿದಷ್ಟೂ ತನ್ನ ಖುಷಿಗಳನ್ನು ಹೊಸಕಿ ಹಾಕುತ್ತಿರುತ್ತಾಳೆ. ಕೈಯಲ್ಲಿ ಕೆಲವೇ ರುಪಾಯಿಗಳನ್ನು ಹಿಡಿದು ಪೇಟೆಗೆ ಹೋಗುವ ಆಕೆ ರಿಸ್ಟ್ ವಾಚನ್ನು ನೋಡುತ್ತಾಳೆ. ತೆಗೆದುಕೊಳ್ಳುವುದಿಲ್ಲ. ಬಣ್ಣ ಬಣ್ಣದ ಸೀರೆಯನ್ನು ನೋಡುತ್ತಾಳೆ ಅದಕ್ಕೆ ಹೊಂದಿಕೆಯಾಗುವ ರವಿಕೆಯನ್ನೂ ನೋಡುತ್ತಾಳೆ. ಇನ್ನೊಮ್ಮೆ ಇನ್ನೊಮ್ಮೆ ಎಂದು ತನ್ನ ಬಯಕೆಗಳನ್ನು ಮುಂದೆ ಹಾಕುತ್ತಲೇ ಅಂಗಡಿಯವನು ಬೇರೆ ಗಿರಾಕಿಗಳ ಕಡೆ ಗಮನ ಕೊಟ್ಟಾಗ ತಾನು ಸದ್ದಿಲ್ಲದೆ ಅಂಗಡಿಯಿಂದ ಹೊರಬರುತ್ತಾಳೆ.
ಕೆ.ವಿ. ತಿರುಮಲೇಶರ “ಆರೋಪ” ಕಾದಂಬರಿಯ ಕುರಿತು ಸುಮಾವೀಣಾ ಬರಹ

Read More

ಕೆ.ವಿ. ತಿರುಮಲೇಶರು ಇನ್ನಿಲ್ಲ…

ಮನುಷ್ಯ ಸಮಾಜಕ್ಕೆ ಐಡೆಂಟಿಟಿಯನ್ನು ನೀಡುವುದು ಭಾಷೆಯೊಂದೇ ಅಲ್ಲ, ಸಾಮೂಹಿಕವಾದ ಧರ್ಮ, ಜಾತಿ, ಆಚಾರ ವಿಚಾರಗಳು, ಸಂಸ್ಕಾರಗಳು, ಕಲೆಗಳು, ನಿಷೇಧಗಳು, ನಂಬಿಕೆಗಳು, ದೇವಳಗಳು, ಮಠಗಳು, ನಿತ್ಯಕರ್ಮಗಳು, ಸ್ತ್ರೀಯರ ಸ್ಥಾನ ಮಾನ ಇತ್ಯಾದಿ ಹಲವಾರು ವಿಷಯಗಳು ಸಮಾಜದ ಗುರುತನ್ನು ರೂಪಿಸುತ್ತವೆ. ಕಾಸರಗೋಡಿನಲ್ಲಿ ಗುಡಿಗಳು, ದೇವಸ್ಥಾನಗಳು, ಭೂತಸ್ಥಾನಗಳು, ಮಸೀದಿಗಳು, ಇಗರ್ಜಿಗಳು ನಿಬಿಡವಾಗಿವೆ. ಇವೆಲ್ಲವೂ ಸುಖಶಾಂತಿಯಿಂದ, ಆದರ್ಶಕರವಾಗಿ ಯಾವತ್ತೂ ಸಹಬಾಳ್ವೆ ನಡೆಸುತ್ತಿವೆ ಎನ್ನಲಾರೆ.
ಇಂದು ಮುಂಜಾನೆ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾದ ಕೆ.ವಿ. ತಿರುಮಲೇಶರು ತೀರಿಹೋದರು. ಕೆಂಡಸಂಪಿಗೆಯೊಡನೆ ಅವರ ನಂಟು ಅನನ್ಯ. ನಮ್ಮ ಓದುಗರಿಗಾಗಿ ಅವರು ಬರೆದ ಕೆಲವು ಬರಹಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ…

Read More

ಶಿವಕುಮಾರ ಚನ್ನಪ್ಪನವರ ಬರೆದ ಈ ಭಾನುವಾರದ ಕಥೆ

ಪೀರ್ಯಾಗ ಮತ್ತ ಹುರುಪೆದ್ದು ಯೋಳ್ನೆ ಪತ್ರ ಬರದಾಕಿದ್ದ. ಮ್ಯಾಲ ಒಂದ್ಲೈನು ಸರ್ಕಾರಿ ಕೇಲ್ಸ ದೇವ್ರ ಕೇಲ್ಸ ಅಂತಾ ಬರ್ದು ಕೆಳ್ಗ ತಮ್ಮ ಕಂಪ್ನಿ ಮಂಚಪ್ಪ ಮತ್ತ ಸರ್ಕಾರಿ ಲಂಚಪ್ಪನ ಇತಿಹಾಸನ ಬರ್ದಿದ್ದ. ಜೊತಿಗಿ ಅದ್ಕ ಸಂಭಂದಪಟ್ಟಂಗ ಎಕ್ಸೇಲ್ ಸಿಟ್ ಅಟ್ಯಾಚ್ ಮಾಡಿದ್ದ. ನಿನ್ನೆ ಅದು ಕಮೀಷನರ್ರ ಕೈಗಿ ಸಿಕ್ಕು ಲಂಚ್ಮಂಚ್ಚಪ್ಪರ್ನ ಸಿಕ್ಕ ಸಿಕ್ಕಾಂಗ ಉಗದಿದ್ರನ್ನಾದು ಸಹ ಗೊಣೇಶ ತುಂಬು ಹೃದಯದಿಂದ್ಲೇ ವಿವರ್ಸಿ, ಕುಷಿ ಪಟ್ಟಿದ್ದ. ಅಂವ್ಗ ಲೆರ್ಟ ಬರಿತಾರಂತ ಗೊತ್ತು ಆದ್ರ ಇವ್ನ ಬರಿತಾನಂತ ಮಾತ್ರ ಗೊತ್ತಿರ್ಲಿಲ್ಲ. ಪೀರ್ಯಾನೂ ಹೇಳಿದ್ದಿಲ್ಲ.
ಶಿವಕುಮಾರ ಚನ್ನಪ್ಪನವರ ಬರೆದ ಕಥೆ “ಲಂಚಪ್ಗೀರಿ ಲಂಚ್ಮಂಚ್ಚಪ್ಪೋರ ಕತಿ..”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

“ಚದುರಂಗ”ದ ಕುರಿತು ತೇಜಸ್ವಿನಿ ಹೆಗಡೆ ಬರಹ

ಹೀಗೇ ಎಲ್ಲವನ್ನೂ ಓದುತ್ತಾ, ಮಥಿಸುತ್ತಾ ಹೋದರೆ, ಆ ಕಾಲಕ್ಕೆ ಹುಟ್ಟಿದ್ದ ಉತ್ತಮ ಗುರಿಯುಳ್ಳ ಸಿದ್ಧಾಂತಗಳು ಕ್ರಮೇಣ ಅಧಿಕಾರದ ಲಾಲಸೆ ಹೇಗೆ ಬದಲಾದವು, ಹೋರಾಟವೇ ಬದುಕಾಗಿದ್ದ ಒಂದು ಪರ್ವ…

Read More

ಬರಹ ಭಂಡಾರ