Advertisement
ಲಕ್ಷ್ಮಣ ಶರೆಗಾರ ಬರೆದ ಗಝಲ್

ಲಕ್ಷ್ಮಣ ಶರೆಗಾರ ಬರೆದ ಗಝಲ್

ನನ್ನ ಬಾಹುಗಳಿಲ್ಲದೆ ರಿವಾಜಿನೊಂದಿಗೆ ನೀ ನರ್ತಿಸುವ ಆಟ ನನ್ನ ದಣಿಸಿದೆ
ಮೈ ಇಲ್ಲವಾಗಿ ಹೋದ ನನ್ನದೇ ನೆರಳ ಮುಟ್ಟುವ ಆಟ ನನ್ನ ದಣಿಸಿದೆ

ವಸಂತ ಋತುವಿನಲ್ಲಿ ಜುದಾಯಿಯ ನೆನಪು ಉಮ್ರಭರ್ ಬಹಳ ಕಾಡುವುದು
ಬಯಲಿನ ಬತ್ತಲು ಕತ್ತಲ ಸರಗಿನಲ್ಲಿ ಮುಚ್ಚಿಕೊಳ್ಳುವ ಆಟ ನನ್ನ ದಣಿಸಿದೆ

ಸಫರ್ ನಲ್ಲಿ ದೂರದ ತನಕ ನಡೆದು ನಡುವೆಯೇ ಇಳಿದು ಅದೆಲ್ಲಿ ಹೋಗುವೆ
ನಶ್ವರವೆಂದು ಉಸಿರು ದೇಹವನ್ನು ನಿರಾಕರಿಸುವ ಆಟ ನನ್ನ ದಣಿಸಿದೆ

ಒಡೆದ ಚೂರುಗಳನ್ನು ಎಷ್ಟು ಜೋಡಿಸಿದರೂ ದರಿದ್ರದ ಬಿರುಕು ಹಾಗೆಯೇ ಉಳಿದಿರುವುದು
ಸೋಲಿಲ್ಲದೆ ಅಲೆಗಳ ನಿರಂತರ ದಡ ಮುಳುಗಿಸುವ ಆಟ ನನ್ನ ದಣಿಸಿದೆ

ಹ್ಹೇ.. ಖುದಾ, ಎಂಥದು ನಿನ್ನ ಲೀಲೆ, ನಶೆಗಾರ ಹೊದ್ದ ಶವವಸ್ತ್ರ ಶುಭ್ರವಾಗಿದೆ
ಮನಸೊಳಗೊಂದು ಮೈಯಿದೆ ಎಂದು ಒಪ್ಪಿಸುವ ಆಟ ನನ್ನ ದಣಿಸಿದೆ

 

About The Author

ಲಕ್ಷ್ಮಣ ಶರೆಗಾರ

ಲಕ್ಷ್ಮಣ ಶರೆಗಾರ ವಕೀಲ ವೃತ್ತಿ, ಗೋಕಾಕದಲ್ಲಿ ವಾಸ, ಮೂರು ಕಥಾಸಂಕಲನಗಳು ಪ್ರಕಟ ಆಗಿವೆ, ಗಝಲ್ ಸಂಕಲನ ಪ್ರಕಟಿಸುವುದಿದೆ.. ಬಿಡುಗಡೆ ಕತೆಗೆ, ಸುರಭಿ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಬಂದಿದೆ.

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ�‌ ಗೋಪಾಲ�‌ ಬರೆದ ಈ ಭಾನ�ವಾರದ ಕತೆ “ಆಟ�
https://tinyurl.com/5575hs6r

ಮದ�ವೆ ಮದ�ವೆ ಆ ಸಿಹಿ ಪದವೆ
ಲಾಸ�‌ ವೇಗಸ�‌ನ ‘ಲಿಟಲ� ವೈಟ� ವೆಡ�ಡಿಂಗ� ಚಾಪೆಲ�’ ಕ�ರಿತ� ಅಚಲ ಸೇತ� ಬರಹ
https://tinyurl.com/2v28abrv

ಭಾರತಕ�ಕೆ ಹತ�ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜ� ಅಂಕಣ “ಅನೇಕ ಅಮೆರಿಕಾ� ನಿಮ�ಮ ಓದಿಗೆ
https://tinyurl.com/35mrwwsn

ಭವ�ಯ ಟಿ.ಎಸ�. ಬರೆದ ಈ ದಿನದ ಕವಿತೆ

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ