Advertisement
ಬಾಲದಂಡೆ ಹಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ಬಾಲದಂಡೆ ಹಕ್ಕಿ: ಡಾ. ಎಸ್.ವಿ. ನರಸಿಂಹನ್‌‌ ಸರಣಿ

ನಿಮಗೆ ಆಶ್ಚರ್ಯವಾಗಬಹುದು, ಗಂಡು-ಹೆಣ್ಣು ಬಾಲದಂಡೆ ಹಕ್ಕಿಗಳು ಜೀವನಪರ್ಯಂತ ಏಕಪತ್ನಿತ್ವವನ್ನು ಅನುಸರಿಸುತ್ತವೆ. ಬಾಳಸಂಗಾತಿಯೊಂದಿಗೆ ಗೂಡುಕಟ್ಟುವ, ಮೊಟ್ಟೆಗಳಿಗೆ ಕಾವು ಹಾಗೂ ಗುಟುಕು ಕೊಡುವ ಎಲ್ಲಾ ಕಾರ್ಯಗಳಲ್ಲಿಯೂ ಸೇರಿ ಒಟ್ಟಿಗೆ ಭಾಗವಹಿಸುತ್ತವೆ. ಇವುಗಳ ಪ್ರಜನನ ಸಮಯ, ಮೇ-ಜುಲೈ ತಿಂಗಳು. ಕಾಜಾಣ ಪಕ್ಷಿಯ ಗೂಡಿನ ಆಸುಪಾಸಿನಲ್ಲಿ, ಮರದ ಕೆಳಕೊಂಬೆಯ ತುದಿಯಲ್ಲಿ, ರೆಂಬೆಗಳ ಕವಲುಗಳಲ್ಲಿ, ಹುಲ್ಲು-ನಾರುಗಳನ್ನು ಜೇಡರ ಬಲೆಯಲ್ಲಿ ಅಂಟಿಸಿ ತಯಾರಾದ ಅಚ್ಚುಕಟ್ಟಾದ ಪುಟ್ಟ ಗೂಡು. ಇದರಲ್ಲಿ ಹೆಣ್ಣು ಹಕ್ಕಿ ನಾಲ್ಕು ಮೊಟ್ಟೆಗಳನ್ನಿಡುತ್ತದೆ. ಮೂರು ವಾರಗಳ ಕಾಲ ಕಾವು ನೀಡಿದ ನಂತರ ಮರಿಗಳು ಮೊಟ್ಟೆಯಿಂದ ಹೊರ ಬರುತ್ತವೆ.
ಡಾ.
ಎಸ್.ವಿ. ನರಸಿಂಹನ್‌ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ “ಬಾಲದಂಡೆ” ಹಕ್ಕಿಯ ಕುರಿತ ಬರಹ ಇಲ್ಲಿದೆ

ಹಕ್ಕಿಗಳ ಕುರಿತಾದ ಈ ಸರಣಿಯಲ್ಲಿ ಇಂದಿನ ಪಕ್ಷಿ, ಬಾಲದಂಡೆ ಹಕ್ಕಿ. ಇದು ಮೊನಾರ್ಕಿಡೆ ಕುಟುಂಬಕ್ಕೆ ಸೇರಿದೆ. ಇದನ್ನು ಇಂಗ್ಲೀಷಿನಲ್ಲಿ Indian Paradise Flycatcher, ಇಂಡಿಯನ್ ಪ್ಯಾರಾಡೈಸ್ ಫ್ಲೈಕ್ಯಾಚರ್, ಎಂದೂ ವೈಜ್ಞಾನಿಕ ಪರಿಭಾಷೆಯಲ್ಲಿ ಟರ್ಪ್ಸಿಫೋನ್ ಪ್ಯಾರಾಡಿಸಿ ಎಂದೂ ಕರೆಯುತ್ತಾರೆ. ಇದರ ವಾಸಸ್ಥಾನ, ದಕ್ಷಿಣ ಭಾರತ, ಮ್ಯಾನ್ಮಾರ್, ಬಾಂಗ್ಲಾದೇಶ ಮತ್ತು ಶ್ರೀಲಂಕಾ ದೇಶಗಳಲ್ಲಿ ಹರಡಿದೆ. ದಕ್ಷಿಣ ಭಾರತದಿಂದ ಬಾಲದಂಡೆ ಹಕ್ಕಿಯು ಏಷ್ಯಾದ ಅನೇಕ ಉಷ್ಣವಲಯದ ದೇಶಗಳಿಗೆ ವಲಸೆ ಹೋಗುತ್ತದೆ. ಅಲ್ಲದೆ, ಬಾಲದಂಡೆ ಹಕ್ಕಿಯಲ್ಲಿ ಸ್ಥಳೀಯ ವಲಸೆಯನ್ನೂ ಕಾಣುತ್ತೇವೆ.

ಬಾಲದಂಡೆ ಹಕ್ಕಿ, ಭಾರತದ ಅತ್ಯಂತ ಸುಂದರವಾದ ಹಕ್ಕಿಗಳಲ್ಲಿ ಒಂದು. ಇದು 20 ಸೆಂಮೀ. ದೇಹದ ಪುಟ್ಟ, ಚಿತ್ತಾಕರ್ಷಕ, ಕೀಟಭಕ್ಷಕ ಹಕ್ಕಿ. ಗಂಡು-ಹೆಣ್ಣು ನೋಡಲು ವಿಭಿನ್ನವಾಗಿರುತ್ತವೆ. ಗಂಡಿಗೆ, ಕಡು ನೀಲಿಗಪ್ಪು ತಲೆ, ಜುಟ್ಟು, ಗಲ್ಲ; ಉಳಿದಂತೆ ಇಡೀ ದೇಹ ಹೊಳೆಯುವ ಅಚ್ಚಬಿಳಿ! ರೆಕ್ಕೆಯಲ್ಲಿ, ಕಪ್ಪು; ಎಲ್ಲಕ್ಕಿಂತ ಮಿಗಿಲಾಗಿ, ಪ್ರಜನನ ಋತುವಿನಲ್ಲಿ, ಗಂಡುಹಕ್ಕಿಗೆ 50 ಸೆಂಮೀ. ಉದ್ದನಾದ ಬಾಲದ ಎರಡು ಬಿಳಿ ಗರಿಗಳು. ಹೆಣ್ಣಿಗೆ ಮತ್ತು ಎಳೆವಯಸ್ಸಿನ ಗಂಡು ಹಕ್ಕಿಗಳಿಗೆ, ಕೆಂಗಂದು ಮೇಲ್ಮೈ; ಕಪ್ಪು ತಲೆ; ಬಿಳಿ ಕೆಳಮೈ. ಎಳೆವಯಸ್ಸಿನ ಗಂಡು ಹಕ್ಕಿಗೆ ಕೆಂಗಂದು ಬಾಲವಿದ್ದರೆ, ಹೆಣ್ಣಿಗೆ ಬಾಲದ ಗರಿಗಳಿಲ್ಲ. ಒಂದು ಒಳಜಾತಿಯ ಬಾಲದಂಡೆ ಹಕ್ಕಿ, ಬಿಳಿ ದೇಹವನ್ನು ಹೊಂದುವುದೇ ಇಲ್ಲ.

ಜೋಡಿಯಾಗಿ, ಉದುರೆಲೆ, ಬಿದಿರುಕಾಡುಗಳಲ್ಲಿ, ತೋಟ, ಹಣ್ಣಿನ ತೋಪುಗಳು, ಜನವಸತಿ ಪ್ರದೇಶಗಳಲ್ಲಿ, ಮರ, ಪೊದೆ ಹಾಗೂ ಬಿದಿರುಮೆಳೆಗಳ ನಡುವೆ ಕಾಣಬಹುದು. ಚಾಕಚಕ್ಯತೆಯಿಂದ ಅತ್ತಿಂದಿತ್ತ ನಲಿಯುತ್ತ ಹಾರಾಡುವಾಗ, ಗಂಡುಹಕ್ಕಿಯ ರಿಬ್ಬನ್ನಿನಂತಹ ಬಾಲಗಳು ಮನಮೋಹಕ! ಗಂಡು ಬಾಲದಂಡೆ ಹಕ್ಕಿಯು ಕೇವಲ ಕಪ್ಪು-ಬಿಳಿ ಬಣ್ಣದ ಹಕ್ಕಿಯಾದರೂ, ಬಿಸಿಲಿನ ಬೆಳಕು ಅದರ ಮೈಮೇಲೆ ಬಿದ್ದಾಗ, ಅದರ ಅಚ್ಚಕಪ್ಪು ತಲೆ ಮತ್ತು ಶುಭ್ರ ಬಿಳಿ ದೇಹ ಮತ್ತು ಬಾಲಗಳು ಪ್ರತಿಫಲಿಸುವ ಕಿರಣಗಳು, ಬಣ್ಣಬಣ್ಣದ ಛಾಯೆಗಳನ್ನು ಮೂಡಿಸುತ್ತವೆ. ಅದರಲ್ಲೂ ಈ ಹಕ್ಕಿ ಗಿಡ-ಮರಗಳ ಎಲೆಗಳ ನಡುವೆ, ಚಾಕಚಕ್ಯತೆಯಿಂದ ಅತ್ತಿಂದಿತ್ತ ಹಾರಾಡುವಾಗ, ಅದರ ಹಿಂದೆಯೇ ಓಡಾಡುವ, ಒಂದು ಅಡಿಗೂ ಉದ್ದನಾದ ಬಾಲಗಳು ಅತ್ಯಂತ ಆಕರ್ಷಕವಾಗಿ ಬಣ್ಣಬಣ್ಣದ ರಂಗೋಲಿ ಚಿತ್ರಗಳನ್ನು ಮೂಡಿಸುತ್ತವೆ! ಈ ದೃಶ್ಯ ಅವರ್ಣನೀಯ!

ಹೆಚ್ಚು ಗದ್ದಲವಿಲ್ಲದ ಚ್.ಚ್ಯು.. ಕೂಗು. ಆದರೆ ಸಂತಾನೋತ್ಪತ್ತಿಯ ಋತುವಿನಲ್ಲಿ ಗಂಡು ಹಕ್ಕಿಯು ಸಂಗಾತಿಯನ್ನು ಆಕರ್ಷಿಸಲು ಇಂಪಾದ ಸಿಳ್ಳೆಯ ಧ್ವನಿಯಿಂದ ಕೂಗುತ್ತದೆ.

ಕೀಟನಿಯಂತ್ರಣದಲ್ಲಿ ಬಾಲದಂಡೆ ಹಕ್ಕಿಗಳು ಸಮರ್ಥವಾಗಿ ಕಾರ್ಯವಹಿಸುತ್ತವೆ. ನೊಣ, ದ್ವಿಪತ್ರಕ ಕೀಟಗಳು, ಜೀರುಂಡೆ ಮುಂತಾದ ಚಿಕ್ಕ-ಪುಟ್ಟ ಜೀವಿಗಳೇ ಇವುಗಳ ಆಹಾರ. ಇಡೀ ಹಗಲು ಮರಗಳಲ್ಲಿರುವ ಹಾಗೂ ಹಾರುತ್ತಿರುವ ಕೀಟಗಳನ್ನೂ ಹಿಡಿದು ತಿನ್ನುತ್ತವೆ.

ನಿಮಗೆ ಆಶ್ಚರ್ಯವಾಗಬಹುದು, ಗಂಡು-ಹೆಣ್ಣು ಬಾಲದಂಡೆ ಹಕ್ಕಿಗಳು ಜೀವನಪರ್ಯಂತ ಏಕಪತ್ನಿತ್ವವನ್ನು ಅನುಸರಿಸುತ್ತವೆ. ಬಾಳಸಂಗಾತಿಯೊಂದಿಗೆ ಗೂಡುಕಟ್ಟುವ, ಮೊಟ್ಟೆಗಳಿಗೆ ಕಾವು ಹಾಗೂ ಗುಟುಕು ಕೊಡುವ ಎಲ್ಲಾ ಕಾರ್ಯಗಳಲ್ಲಿಯೂ ಸೇರಿ ಒಟ್ಟಿಗೆ ಭಾಗವಹಿಸುತ್ತವೆ. ಇವುಗಳ ಪ್ರಜನನ ಸಮಯ, ಮೇ-ಜುಲೈ ತಿಂಗಳು. ಕಾಜಾಣ ಪಕ್ಷಿಯ ಗೂಡಿನ ಆಸುಪಾಸಿನಲ್ಲಿ, ಮರದ ಕೆಳಕೊಂಬೆಯ ತುದಿಯಲ್ಲಿ, ರೆಂಬೆಗಳ ಕವಲುಗಳಲ್ಲಿ, ಹುಲ್ಲು-ನಾರುಗಳನ್ನು ಜೇಡರ ಬಲೆಯಲ್ಲಿ ಅಂಟಿಸಿ ತಯಾರಾದ ಅಚ್ಚುಕಟ್ಟಾದ ಪುಟ್ಟ ಗೂಡು. ಇದರಲ್ಲಿ ಹೆಣ್ಣು ಹಕ್ಕಿ ನಾಲ್ಕು ಮೊಟ್ಟೆಗಳನ್ನಿಡುತ್ತದೆ. ಮೂರು ವಾರಗಳ ಕಾಲ ಕಾವು ನೀಡಿದ ನಂತರ ಮರಿಗಳು ಮೊಟ್ಟೆಯಿಂದ ಹೊರ ಬರುತ್ತವೆ.

About The Author

ಡಾ. ಎಸ್‌. ವಿ. ನರಸಿಂಹನ್

ಡಾ. ಎಸ್‌.ವಿ. ನರಸಿಂಹನ್ ವೈದ್ಯರು. ಕೊಡಗಿನ ವಿರಾಜಪೇಟೆಯಲ್ಲಿ ನೆಲೆಸಿದ್ದಾರೆ. ಆರೋಗ್ಯ ರಕ್ಷಣೆಯೊಂದಿಗೆ ಪರಿಸರ ರಕ್ಷಣೆಯ ಬಗೆಗೂ ಅಪಾರ ಕಾಳಜಿ ಹೊಂದಿದ್ದಾರೆ. ಕಳೆದ ನಲವತ್ತೊಂದು ವರ್ಷಗಳಿಂದ ಡಾ. ನರಸಿಂಹನ್‌ರವರು ಕೈಯಿಂದ ಕುಂಚಿಸಿದ ಸುಮಾರು ಎಂಭತ್ತೆರಡು  ಸಾವಿರ ‘ವನ್ಯಜೀವಿ ಸಂದೇಶ ಪತ್ರ’ಗಳು ಪ್ರಪಂಚದಾದ್ಯಂತ ತಲುಪಿವೆ. ಇದೊಂದು ಲಿಮ್ಕಾ ದಾಖಲೆ. ವಿಜ್ಞಾನ ಬರವಣಿಗೆಯಲ್ಲೂ ಆಸಕ್ತಿ ಹೊಂದಿರುವ ಇವರು, ಕನ್ನಡ ಭಾಷೆ, ಸಂಗೀತ-ಸಾಹಿತ್ಯ, ಖಗೋಳ, ಪರಿಸರ ಮುಂತಾದ ವಿಷಯಗಳಲ್ಲಿ ಶಾಲಾ-ಕಾಲೇಜುಗಳಲ್ಲಿ, ರೇಡಿಯೋ, ಟಿವಿ ಮತ್ತು ಪತ್ರಿಕಾ ಮಾಧ್ಯಮಗಳ ಮೂಲಕ ವಿದ್ಯಾರ್ಥಿಗಳಲ್ಲಿ ಆಸಕ್ತಿ ಬೆಳೆಸಿದ್ದಾರೆ. ಕೊಡಗಿನ ಸಂಪೂರ್ಣ ಪಕ್ಷಿಸಂಕುಲದ ನಿಖರ ಮಾಹಿತಿಯುಳ್ಳ ‘ಕೊಡಗಿನ ಖಗರತ್ನಗಳು’ ಪುಸ್ತಕದಲ್ಲಿ ತಾವೇ ಎಲ್ಲ ಹಕ್ಕಿಗಳ ಚಿತ್ರಗಳನ್ನೂ ಬರೆದದ್ದು ಮತ್ತೊಂದು ಲಿಮ್ಕಾ ದಾಖಲೆ.  ‘2013ರ ಕೊಡಗಿನ ವರ್ಷದ ವ್ಯಕ್ತಿ’ಪುರಸ್ಕೃತರು

Leave a comment

Your email address will not be published. Required fields are marked *


ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ