Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ.ನಾ.ಮೊಗಸಾಲೆ ಕತೆ

ದಾಸಣ್ಣಚಾರ್ಯರ ಮುಖ ಪೇಲವವಾಯ್ತು. ‘ಛೆ!’ ಎಂದರು. ಆಮೇಲೆ ಮೆತ್ತಗೆ ‘ಇವಳಿಗೆ ಏನಾದರೂ ಈ ವಿಷಯ ತಿಳಿದರೆ, ಬೆಂಕಿ ಇಟ್ಟಾಳು ನನ್ನ ತಲೆಗೆ. ಆಕೆಗೆ ದನಕರು ಅಂದರೆ ದೇವರು. ಗಬ್ಬ ನಿಲ್ಲದಿದ್ದರೆ ಬೇಡ, ಹಟ್ಟಿಯಲ್ಲೇ ಇರಲಿ ಎಂದು ಆಕೆ ಅಮೇರಿಕೆಯಲ್ಲಿರುವಾಗಲೇ ಹೇಳಿದ್ದಳು. ಆದರೆ, ನನಗೆ ಗಬ್ಬ ನಿಲ್ಲದ ಮೇಲೆ ಸಾಕುವುದು ವ್ಯರ್ಥ ಎಂಬ ಭಾವನೆ ಬಂತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಡಾ. ನಾ. ಮೊಗಸಾಲೆ ಬರೆದ ಕತೆ “ನುಗ್ಗೆಗಿಡ”

Read More

ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ…

ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಮೇರಿಯ ಮನೆಗೆ ಹೋಗಿದ್ದ.
ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಅಗೋಚರ

“ಮರಗಿಡಗಳ ಚಿಗುರು ಚಿಗುರಲಿಕೆ ಕಾತರಿಸಿ
ನಳನಳಿಸಲು ಕಾಯುತ್ತಿತ್ತು ಹಗಲ
ಕಾಯಿ ಮಾಗಲು, ಮಾಗಿದವು ತೊಟ್ಟು ಕಳಚಲು
ತವತವಕಿಸುವಂತಿತ್ತು ತೆರೆದು ಮನವ”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ

Read More

ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ: ಮುತ್ತು

“ಸಂಜೆ ಬೇಗನೆ ಬಂದು ಅಂಗಳದಲಿ ನಿಂತು
ನೋಡಿದೆನು ಇವಳು ಹೂ ಕೊಯ್ಯುವುದನು
ಕೊಯ್ಯುತ್ತ ಕೊಯ್ಯುತ್ತ ಬಿಟ್ಟಳು ಒಂದು ಮೊಗ್ಗು
ನಾಳೆ ಅರಳಲಿ ಅದು ನನಗೆ ಎಂದು!”- ಡಾ.ನಾ.ಮೊಗಸಾಲೆ ಬರೆದ ಈ ದಿನದ ಕವಿತೆ

Read More
  • 1
  • 2

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ