ಪಾತ್ರಧಾರಿಯ ಗೈರು: ಜಯಶ್ರೀ ವಸಂತ್ ಲಲಿತ ಪ್ರಬಂಧ
ಅವರ ನೆನಪಾಯಿತು…. ಎರಡು ಪಾತ್ರೆಯಲ್ಲಿ ನೀರಿಟ್ಟು… ತೊಳೆದು … ಸಣ್ಣಗೆ …ನಾಜೂಕಾಗಿ ಹೆಚ್ಚಿ… ಮತ್ತೆ ಆ ನೀರು ತೊಳೆದ ನೀರು… ‘ಗಿಡಕ್ಕೆ ಹಾಕ್ರಿ ಜಿ ಕೆ ಜೆ… ಹಾಕ್ತೀರಾ….ಹಾಕಿದ್ರಾ…’ ಇತ್ಯಾದಿ ಪ್ರಶ್ನೆಗಳು. ರೇಗಿ ಹೋಗುತ್ತೆ… ಇವತ್ತು ಏನು ಬೇಡ.. ನೀರಿಲ್ಲೇ ಚೆಲ್ತೀನಿ. ನಾಜೂಕಾಗಿಯೂ ಬೇಡ….ಎಲ್ಲಾ ನಿಯಮಗಳಿಗೂ ರಜೆ… ಆರಾಮ್ ಮಾಡೋಣ ಅಂತ ಹರಡಿಕೊಂಡು ಮಾಡಿದೆ. ಇವತ್ತು ಹಿಟ್ಟು ಉಕ್ಕರಿಸಿದ ರೊಟ್ಟಿ.. ಕಾರಣ ಅದು ಮಾಡಬೇಡ್ರೀ.. ಸುಮ್ಮನೆ ಹಿಟ್ಟೆಲ್ಲಾ ಹರಡಿಕೊಂಡು ರಂಪ ಆಗುತ್ತೆ…. ನಿಮಗೂ ಕಷ್ಟ ಆಗುತ್ತೆ …ಅನ್ನೋ ಕಾಳಜಿ ಮಾಡುವ ಮನುಷ್ಯನ ಗೈರು…
ಜಯಶ್ರೀ ವಸಂತ್ ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

