Advertisement

ಕೃಷ್ಣಮೂರ್ತಿ ಹನೂರು

ನರೇಂದ್ರ ಅ ಭಟ್ ತೆಗೆದ ಈ ದಿನದ ಫೋಟೋ

ಈ ದಿನದ ಫೋಟೋ ತೆಗೆದವರು ನರೇಂದ್ರ ಅ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಒಂದು ಹಳ್ಳಿ, ಕಾನಗೋಡು. ಸಧ್ಯ ನಾಗಪುರದ ಲಾರ್ಸನ್ ಎಂಡ್ ಟೂಬ್ರೊ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಕನ್ನಡ ಕೃತಿಗಳ ಓದು, ಹಿಂದುಸ್ಥಾನಿ ಸಂಗೀತ, ಪುರಾತನ ದೇವಾಲಯಗಳ ಹುಡುಕಾಟ ಹಾಗು ಛಾಯಾಗ್ರಹಣ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

 ಕಾಯಗುಡ್ಡ ಬರೀ ಕಥೆಯಲ್ಲ; ಇದೊಂದು ಚಲನಶೀಲ ಬದುಕಿನ ಪ್ರತಿಬಿಂಬ: ನಾಗಣ್ಣ ಕಿಲಾರಿ ಕಾದಂಬರಿಗೆ ಕಪಿಲ ಪಿ. ಹುಮನಾಬಾದೆ ಮುನ್ನುಡಿ

ಕಾಯಗುಡ್ಡ ಎಂದರೆ ಕಾಯುವ ಗುಡ್ಡ. ಕುರಿ ಮತ್ತು ಆಡು ಕಾಯುವ ಗುಡ್ಡ ಅಷ್ಟೇ ಅಲ್ಲ. ಬದುಕನ್ನು ನಳನಳಿಸುವ, ಹೊಸತನದ ಗಾಳಿ ಬೀಸುವ, ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಂತಹ ಎಲ್ಲ ಬಂಧಗಳಿಂದ ಬಿಡುಗಡೆಗೊಳಿಸುವ, ಸಹಜತನ ಮತ್ತು ಕೂತೂಹಲ ಹೃದಯಲ್ಲಿ ಸೃಷ್ಟಿಸುವ ಗುಡ್ಡವೆ ಕಾಯಗುಡ್ಡ. ಬಯಲಿನಂತಹ ಊರಿಂದ ಶುರುವಾಗುವ ಕಥೆ ಕುರಿ-ಆಡುಗಳೊಟ್ಟಿಗೆ ಗುಡ್ಡ ಹತ್ತಿಳಿಸಿ, ಅಲ್ಲಲ್ಲಿ ನಗಿಸಿ, ಬಾವಿಗಳ ಆಳದಿಂದ ಏನನ್ನೋ ಹೊಮ್ಮಿಸಿ, ದವಾಖಾನಿಗಳ ನೋವಿನಲ್ಲೂ ಬಿಸ್ಕತ್‌ ನೆನಪಿಸಿ, ಕತ್ತಲು ಮತ್ತು ಹಲವು ಹಾದಿಗಳ ಮಾತುಗಳು ಕೇಳಿಸಿ, ಓದುಗರಿಗೆ ಒಂದು ದಿಕ್ಕಿನಿಂದ ಮತ್ತೊಂದು ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ ಕಾಯಗುಡ್ಡ.
ನಾಗಣ್ಣ ಕಿಲಾರಿ ಕಾದಂಬರಿ “ಕಾಯಗುಡ್ಡ” ಕೃತಿಗೆ ಕಪಿಲ ಪಿ. ಹುಮನಾಬಾದೆ ಬರೆದ ಮುನ್ನುಡಿ

Read More

ಭಿನ್ನ ನೋಟದ ಪ್ರವಾಸ ಕಥನ: ಡಾ. ಪ್ರೇಮಲತ ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

ನಮ್ಮ ಲೇಖಕರಲ್ಲಿ ವಿ.ಕೃ. ಗೋಕಾಕರು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದಿ ಫಸ್ಟ್ ರ್ಯಾಂಕ್ ಗಳಿಸಿದರಷ್ಟೆ. ಯು.ಆರ್. ಅನಂತಮೂರ್ತಿಯವರೂ ಕವಿ ರಾಮಚಂದ್ರ ಶರ್ಮರೂ ಕೆಲವು ವರ್ಷ ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿದ್ದುಂಟು. ತರುಣ ಲೇಖಕರಲ್ಲಿ ಮುಖ್ಯವಾಗಿ ವಿವೇಕ ಶಾನಭಾಗರು ಉದ್ಯೋಗನಿಮಿತ್ತ ನಾಲ್ಕಾರು ವರ್ಷ ಲಂಡನ್ನಿನಲ್ಲಿದ್ದರು. ಇವರು ಯಾರೂ ಅಪ್ಪಿತಪ್ಪಿ ಕೂಡ ಯುನೈಟೆಡ್ ಕಿಂಗ್ಡಮ್ಮನ್ನು ಭಾರತದೊಡನೆ ತುಲನೆ ಮಾಡಲಿಲ್ಲವೆನ್ನುವುದು ಗಮನಾರ್ಹ. ಆದರೂ ಹಾಗೆ ತುಲನೆ ಮಾಡಿ ಬರೆಯುವುದರಿಂದ ಕೆಲವರು ಓದುಗರಾದರೂ ನಮ್ಮ ದೇಶದ ಹೀನಾಯ ಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಯೋಚಿಸಬಹುದು. ಅವರಲ್ಲಿ ಇದಕ್ಕೇನು ಪರಿಹಾರವಿದ್ದೀತು ಎಂಬೊಂದು ಜಿಜ್ಞಾಸೆಯೇ ಉಂಟಾಗಬಹುದು. ಒಟ್ಟಿನಲ್ಲಿ ಅದೊಂದು ಒಳ್ಳೆಯ ಆಶಯವೇ.
ಡಾ. ಪ್ರೇಮಲತ ಬಿ. ಬರೆದ “ವಿದೇಶ ಪ್ರಯಾಣ… ಕೈತುಂಬ ಕಾಂಚಾಣ” ಕೃತಿಗೆ ಎಸ್‌. ದಿವಾಕರ್‌ ಬರೆದ ಮುನ್ನುಡಿ

Read More

ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

“ಅರೆ ಏನಿದು? ನೊಡಿದೆ ಕನ್ನಡಕ ಸರಿಪಡಿಸಿ!
ಹರಿದಾಡುತ್ತಿದ್ದವು ಒಂದಿಷ್ಟು ಇರುವೆಗಳು
ಅರಿವಿನ ಅಕ್ಷರಗಳೇ ಮೈಪಡೆದು ಚಲಿಸಿದಂತೆ!

ಕಿಲಕಿಲನೆ ನಕ್ಕಳು ನಕ್ಷತ್ರ ಹೊಳೆದಂತೆ
ಬೆನ್ನ ಹಿಂದೆ ನಿಂತ ಪುಟ್ಟ ಮೊಮ್ಮಗಳು
ಸಕ್ಕರೆ ಹಿಡಿದ ಅಕ್ಕರೆಯ ಚಿಕ್ಕ ಕೈಗಳಿಂದ
ಪಟಪಟನೆ ಚಪ್ಪಾಳೆ ತಟ್ಟುತ್ತ!” -ವೈ ಬಿ ಹಾಲಬಾವಿ ಬರೆದ ಈ ದಿನದ ಕವಿತೆ

Read More

ಸುಮುಖ ಭಾರದ್ವಾಜ ಜಿ.ವಿ. ಬರೆದ ಈ ದಿನದ ಕವಿತೆ

“ಗಾಢ ನಿದ್ರೆಯ ಕನಸಲಿ ಸಿಕ್ಕ ಪಾತ್ರದಂತೆ,
ಆಪ್ತನೆನಿಸಿದರೂ ಅಪರಿಚಿತ —
ನೆನೆದಷ್ಟು ಮಬ್ಬು ಮಬ್ಬು.

ಮನೆಯವರನ್ನು ಕೇಳಿದರೆ
“ನೀನೇ” ಎಂದು ನಗುತ್ತಾರೆ,
“ಎಷ್ಟು ಚೆಂದ ಇದೆ ಇದು” ಎಂದು ಹೊಗಳುತ್ತಾರೆ.” -ಸುಮುಖ ಭಾರದ್ವಾಜ ಜಿ.ವಿ. ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ