Advertisement
ಎಸ್. ಜಯಶ್ರೀನಿವಾಸ ರಾವ್

ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು" (ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.

‘ಆದಿಮ’ದ ಸನ್ನಿಧಿಯಲ್ಲಿ: ಸತೀಶ್‌ ತಿಪಟೂರು ಬರಹ

ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು.
ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ

Read More

ಕಲ್ಲಹಳ್ಳದ ಕಾಡುತೋಟ: ಸತೀಶ್‌ ತಿಪಟೂರು ಬರಹ

ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು.
ರಂಗಕರ್ಮಿ ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಕೆಲವು ಅಧ್ಯಾಯಗಳು ಪ್ರತಿ ಶನಿವಾರ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟಗೊಳ್ಳಲಿವೆ

Read More

ಖಂಡವಿದೆಕೋ.. ಮಾಂಸವಿದೆಕೋ…: ಶ್ರೀಧರ ಪತ್ತಾರ ಬರಹ

ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು.
ಶ್ರೀಧರ ಪತ್ತಾರ ಅನುಭವ ಕಥನ “ಕಾಟಿಹಳ್ಳದ ತಿರುವು” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಪಿ. ನಂದಕುಮಾರ್ ಬರೆದ ಈ ದಿನದ ಕವಿತೆ

“ಒಳಗೂ ನೀನೇ
ಹೊರಗೂ ನೀನೇ
ನಡುವೆಲ್ಲೊಂದು ರೂಪ ತೆವಳಾಡಿದೆ
ಅಂಗೈ ರಹದಾರಿಗಳು ತಾವ ಹುಡುಕಿವೆ
ಹೆಣೆಗುಂಟ ಗೆಣೆ ಸದ್ದು ಜಿಕಿಜಿಕಿದಂತೆ
ಜೀವಾತ್ಮ ಮಗ್ಗಲು ಬದಲಾಯಿಸಿದೆ”-

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಕತೆ

ಅವನ ಮಾತುಗಳು ನನ್ನೋಳಗೆ ನಡುಕ ತಂದವು, ತಲೆ ಗಿಮ್ಮೆಂದಿತು. “ಇಲ್ಲ ಇಲ್ಲ…. ನನ್ನ ಮಗನನ್ನು ನಾನು ಕೊಲ್ಲುವುದಿಲ್ಲ” ನೆಲದಲ್ಲಿ ಬಿದ್ದು ಹೊರಳಡಿದೆ. “ರೀಟಾ ಸಮಾಧಾನ ಮಾಡಿಕೊ. ನೀನು ಹೀಗೆ ವೃಥಾ ಭಾವುಕಳಾದರೆ ನಾನೇನೂ ಮಾಡಲು ಸಾಧ್ಯವಿಲ್ಲ. ಆದರೆ… ಮುಂದಾಗಬಹುದಾದ ಭೀಕರ ಪರಿಣಾಮವನ್ನು ಎದುರಿಸಲು ಸಿದ್ಧಳಾಗು” “ಅವನ ಬದಲು ನಾನೇ ಸಾಯುತ್ತೇನೆ, ಅವನನ್ನು ಮಾತ್ರ ಕೊಲ್ಲುವುದಿಲ್ಲ” ಅತ್ತು ರಂಪ ಮಾಡಿದೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮೀನಾ ಮೈಸೂರು ಬರೆದ ಕತೆ “ಇತಿ ವೃತ್ತಾಂತ” ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ