Advertisement
ರವಿ ಮಡೋಡಿ

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ರವಿ ಮಡೋಡಿ ಅವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿಟ್ಟೂರು ಬಳಿಯ ಮಡೋಡಿ ಗ್ರಾಮದವರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಕಳೆದ 15 ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ 500ಕ್ಕೂ ಹೆಚ್ಚು ಪ್ರದರ್ಶನಗಳನ್ನು ತಮ್ಮ ತಂಡದೊಂದಿಗೆ ನೀಡಿದ್ದಾರೆ. ‌‘ಯಕ್ಷಸಿಂಚನ’ ಎನ್ನುವ ಹವ್ಯಾಸಿ ಯಕ್ಷಗಾನ ಸಂಸ್ಥೆಯ ಸ್ಥಾಪಕರಲ್ಲಿ ಒಬ್ಬರಾದ ಅವರು ಸಂಸ್ಥೆಯ ಈಗಿನ ಅಧ್ಯಕ್ಷರೂ ಹೌದು.  ಯಕ್ಷಗಾನ ಕ್ಷೇತ್ರಕ್ಕೆ ತಂತ್ರಜ್ಞಾನದ ಲಾಭ ದೊರಕಿಸಿಕೊಡುವಲ್ಲಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿಯೂ ಕೆಲಸ ಮಾಡುತ್ತಿರುವ ಇವರು ಮಲೆನಾಡಿನ ಒಂದು ಶತಮಾನದ ಯಕ್ಷಗಾನ ಇತಿಹಾಸವನ್ನು ತಿಳಿಸುವ  ‘ಮಲೆನಾಡಿನ ಯಕ್ಷಚೇತನಗಳು’  ಎಂಬ ಪುಸ್ತಕವನ್ನು ಹೊರತಂದಿದ್ದಾರೆ. ಇದರ ಜೊತೆಗೆ ʼನಮ್ಮಲ್ಲೇ ಮೊದಲು’, ’ಪ್ರಸಂಗಕರ್ತ ಶ್ರೀಧರ ಡಿ.ಎಸ್’ ಇವರ ಇತರ ಕೃತಿಗಳು. ಅವರ ಹಲವಾರು ಕಥೆ, ಲೇಖನ, ಲಲಿತ ಪ್ರಬಂಧಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕತೆ

ಅಲಾ.. ಒಂದ್ ಜಾಕೀಟ್ ಬಟ್ಟೆ ಅರ‍್ಸಕ್ಕೆ ವರ್ಸ ಪೂರ‍್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ‍್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ!
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕಥೆ “ತಲೆ ಮ್ಯಾಕೆ ವೂದ ನೀರು” ನಿಮ್ಮ ಈ ಭಾನುವಾರದ ಓದಿಗೆ

Read More

ಶಾಂತಾಕುಮಾರಿ ಬರೆದ ಈ ದಿನದ ಕವಿತೆ

“ಅಲ್ಲೇ ಕುಳಿತೆ ಕಲ್ಲುಬೆಂಚಿನ ಮೇಲೆ
ಕಟ್ಟೆಯ ಬದಿಯಲ್ಲಿ ಚ್ವಾರಟೆ ಹುಳುಗಳೆರಡು
ಸಮಾಗಮದಲ್ಲಿ ಬಂಧಿಯಾಗಿದ್ದವು
ಕಡ್ಡಿಯಿಂದ ಕಿತ್ತೆಸೆದೆ ಮಕ್ಕಳು ಮರಿಗಳಾಗಿ
ಸಂತತಿ ಅನಂತವಾದರೆ ರಗಳೆ
ಕಣ್ಣು ಹಾಯಿಸಿದೆ ಸುಂದರ ಹೂಬಿಟ್ಟ
ಗಿಡಗಳ ಮೇಲೆ ಹಾಗೇ ಪಾಟಿನ ಬುಡಕ್ಕೆ
ಬರೀ ಸಿಂಬಳದ ಹುಳಗಳ ಸಾಲು”- ಶಾಂತಾಕುಮಾರಿ ಬರೆದ ಈ ದಿನದ ಕವಿತೆ

Read More

ಆರ್ಥರ್ ಮಿಲ್ಲರ್‌ನ “ಡೆತ್ ಆಫ್ ಎ ಸೇಲ್ಸ್‌ಮನ್” ನಾಟಕ

ಪ್ರವೀಣ್ ಕುಮಾರ್ ಎಡಮಂಗಲ ನಿರ್ದೇಶನದಲ್ಲಿ, ನೀನಾಸಂ ವಿದ್ಯಾರ್ಥಿಗಳಿಂದ ಆರ್ಥರ್ ಮಿಲ್ಲರ್‌ನ “ಡೆತ್ ಆಫ್ ಎ ಸೇಲ್ಸ್‌ಮನ್” ನಾಟಕ

ಕೃಪೆ: ಸಂಚಿ ಫೌಂಡೇಷನ್

Read More

ಉಷಾ ನರಸಿಂಹನ್ ಬರೆದ ಈ ದಿನದ ಕವಿತೆ

“ಇರುಳೆಲ್ಲ ಬಿರಿದ ಮಲ್ಲಿಗೆಯೆದೆಗೆ
ಬೆಳಗಾಗ ಇಬ್ಬನಿ ಸುರಿದಂತೆ
ತಬ್ಬಿಕೊಳ್ಳುವ ಹೊಂಗಿರಣ ಕನಸುತಿರೆ
ಶೈತ್ಯಖಡ್ಗವ ಹಿರಿದು ಇರಿದೆಯಲ್ಲ!
ಹೂವಿನೆದೆ ಕನಸುಗಳ ತರಿದೆಯಲ್ಲ!”-

Read More

ಪೂರ್ಣೇಶ್ ಮತ್ತಾವರ ತೆಗೆದ ಈ ದಿನದ ಫೋಟೋ

ಚಿಕ್ಕಮಗಳೂರಿನವರಾದ ಪೂರ್ಣೇಶ್ ಮತ್ತಾವರ ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ದೇವರಿದ್ದಾನೆ! ಎಚ್ಚರಿಕೆ!!” ಪ್ರಕಟಿತ ಕಥಾ ಸಂಕಲನ. ಪರಿಸರದ ಒಡನಾಟದಲ್ಲಿ ಆಸಕ್ತಿಯಿದ್ದು ಪಕ್ಷಿ ಛಾಯಾಗ್ರಹಣ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಫೋಟೋ ಕೂಡ. ಫೋಟೋ ದೊಡ್ಡ ಗಾತ್ರದಲ್ಲಿ ಕಾಣಲು ಫೋಟೋದ ಮೇಲೆ ಕ್ಲಿಕ್ಕಿಸಿ.

ನಮ್ಮ ಈ ಮೇಲ್‌ ವಿಳಾಸ: ks.kendasampige@gmail.com

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ