Advertisement
ವಸಂತಕುಮಾರ್‌ ಕಲ್ಯಾಣಿ

ವಸಂತಕುಮಾರ್‌ ಕಲ್ಯಾಣಿ ಹವ್ಯಾಸಿ ಬರಹಗಾರರು. ಕಥನ ಇವರ ಇಷ್ಟದ ಪ್ರಕಾರ. ಕನ್ನಡ ಪರ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದವರು, ಗೋಕಾಕ್ ಚಳುವಳಿಯಲ್ಲಿ ಸಕ್ರಿಯರಾಗಿದ್ದರು, ಹಲವು ಕಿರುತೆರೆ, ಚಲನಚಿತ್ರಗಳಲ್ಲಿ ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರ ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ 'ಬಾಲರಾಜನೂ ಕ್ರಿಕೆಟ್ಟಾಟವೂ' ಕಥೆಗೆ ಮೇವುಂಡಿ ಮಲ್ಲಾರಿ ಕಥಾ ಪುರಸ್ಕಾರ ಪ್ರಶಸ್ತಿ ದೊರಕಿದೆ. 'ಕಾಂಚನ ಮಿಣಮಿಣ'  (ಸಣ್ಣಕಥಾ ಸಂಕಲನ) ‘ಪರ್ಯಾಪ್ತ’ ಪ್ರಕಟಿತ ಕಥಾ ಸಂಕಲನಗಳು.

ಇರುವಿಕೆ ಮತ್ತು ಆಗುವಿಕೆ

ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿ‌ಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ

Read More

ಬಾಳಿನ ಸಂತೆಯಲ್ಲಿ ಗಜಲ್ ಧ್ಯಾನ..

ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್‌ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ

Read More

ಮೌನೇಶ್ ನವಲಹಳ್ಳಿ ಬರೆದ ಈ ದಿನದ ಕವಿತೆ

“ರಕ್ತದ ಮಳೆ ಬರುತ್ತೈತಣ್ಣ ಕಾಲಜ್ಞಾನಿಯ ಮಾತು
ಮುಕ್ತತೆಯ ಬೆಳೆಯ ನುಂಗಿ ನೀರ ಕುಡಿಯಬಹುದು
ಮಗ್ದತೆಯ ನಗುವ ಬಾಚಿ ಮೋಜು ನೋಡಬಹುದು
ಶಕ್ತತೆಯಲಿ ದುಡಿಯುವವನ ಹೆಣ ತೇಲಬಹುದು
ಅತಂತ್ರವಾಗಬಹದು ಸ್ವಾತಂತ್ರ್ಯ ಹಳದಿ ಮೇಘಗಳ ಹುಚ್ಚಾಟಕೆ”- ಮೌನೇಶ್ ನವಲಹಳ್ಳಿ ಬರೆದ ಈ ದಿನದ ಕವಿತೆ

Read More

ಖಾದಿಯ ಜನನವೂ ಚರಖಾದ ಪ್ರೀತಿಯೂ

ಬ್ರಿಟಿಷರಿಂದ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಎಪ್ಪತ್ತೈದು ವಸಂತಗಳು ತುಂಬಿವೆ. ಸ್ವಾತಂತ್ರ್ಯ ಹೋರಾಟದ ಆ ಹಾದಿಯು ಬಹುದೀರ್ಘವಾದುದು. ಸತ್ಯಾಗ್ರಹ, ಸ್ವದೇಶಿ ಚಿಂತನೆ, ಖಾದಿ ಮತ್ತು ಚರಖಾದ ಮೂಲಕ ನಡೆದ ಅಸಹಕಾರ ಚಳವಳಿಗಳು ಹೋರಾಟದ ಹಾದಿಗೆ ಸಾತ್ವಿಕ ಬಲವನ್ನು ತುಂಬಿವೆ. ಇದರಿಂದಾಗಿ ಹೋರಾಟವು ವಿಶ್ವದಲ್ಲಿಯೇ ವಿಭಿನ್ನವಾಗಿ ಗುರುತಿಸಿಕೊಳ್ಳುವುದು ಸಾಧ್ಯವಾಗಿದೆ. ಆದರೆ ಈ ಖಾದಿ ಮತ್ತು ಚರಖಾ ಎಂಬ ಮಾಧ್ಯಮಗಳಿಗೆ ಚಳವಳಿಯೊಂದನ್ನು ಕಟ್ಟುವ ಸಾಮರ್ಥ್ಯವಿದೆ ಎಂದು ಮಹಾತ್ಮಾ ಗಾಂಧೀಜಿಯವರು ಹೇಗೆ ಗುರುತಿಸಿದರು ಎಂಬುದನ್ನು ಅವರು ‘ನನ್ನ ಸತ್ಯಾನ್ವೇಷಣೆ’ ಯಲ್ಲಿ ವಿವರಿಸಿದ್ದಾರೆ. ಆ ಎರಡು ಅಧ್ಯಾಯಗಳನ್ನು ನೆನಪಿಸಿಕೊಳ್ಳಲು ಇದೊಂದು ಸುಸಂದರ್ಭ ಅಲ್ಲವೇ..

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ