Advertisement
ಲತಾ ಶ್ರೀನಿವಾಸ್

ಲತಾ ಶ್ರೀನಿವಾಸ್‌ ಮೂಲತಃ ತುಮಕೂರಿನವರು. ಮೈಸೂರು ವಿಶ್ವವಿದ್ಯಾಲಯದಿಂದ ಕನ್ನಡ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಚಿತ್ರಕಲೆ ಹಾಗೂ ಪ್ರವಾಸ ಇವರ ಹವ್ಯಾಸಗಳು. ಮುದ್ದುಮಗಳೇ ಇವರ ಪ್ರಕಟಿತ ಕೃತಿ.

ಅಮ್ಮ , ಆಸ್ಪತ್ರೆ ಮತ್ತು ಮೇಟ್ರಾನ್

ಆಸ್ಪತ್ರೆಗೆ ಬಂದ ಕೆಲವು ರೋಗಿಗಳ ಸಂಬಂಧಿಕರು ಮಾತ್ರ ಇಲ್ಲಿ ನಿಂತು ತಮ್ಮ ಕಡೆಯವರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರಾದರೂ ಶಿವ ಮಾತ್ರ ಕಿವುಡನಂತೆ ನಿಮೀಲನೇತ್ರನಾಗಿ ನಿಂತಿರುತ್ತಿದ್ದ. ಶಿವನನ್ನು ಸುತ್ತುವರಿದು ಬೆಳೆದಿದ್ದ ಹಸಿರ ಬಳ್ಳಿಗಳು ಆಗ ಶಿವನ ಹಿನ್ನಲೆಯ ಸೊಬಗನ್ನು ಇಮ್ಮಡಿಸಿದ್ದವು. ಈಗ ಅಲ್ಲಿ ಬಳ್ಳಿಯ ಬದಲು ಗೋಡೆಯ ದೇವಸ್ಥಾನ ತಲೆಯೆತ್ತಿದೆ. ಆಗಿನ ಹಸಿರ ವೈಭವವಿಲ್ಲದ ಶಿವ ಮತ್ತು ಅವನ ತಲೆಯ ಮೇಲಿನ ಗಂಗೆಯರು ಬಳಲಿದವರಂತೆ ಕಾಣುತ್ತಾರೆ. ಯಾರೋ ಕಲಾವಿದ ಶಿವನಿಗೆ ಪೊಲೀಸ್ ಮೀಸೆ ಮಾಡಿದ್ದು ಮಾತ್ರ ಆಗಿನಂತೆ ಈಗಲೂ ತಮಾಷೆಯಾಗಿ ಕಾಣುತ್ತದೆ.
ಡಾ. ಎಚ್.ಎಸ್. ಸತ್ಯನಾರಾಯಣ ಅವರ ಹೊಸ ಪ್ರಬಂಧ ಸಂಕಲನ “ಪನ್ನೇರಳೆ” ಯಿಂದ ಒಂದು ಬರಹ ನಿಮ್ಮ ಓದಿಗೆ

Read More

ಕೊಳ್ಳೆಗಾಲ್ ಮೆಮೋರಿಯಲ್

ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಯುದ್ಧದಲ್ಲಿ ಮಡಿದವರಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ ಸ್ಮಾರಕಗಳಿಗೆ ಕೊಳ್ಳೇಗಾಲದ ‘ವೆರಿಸ್ಪೆಷಲ್’  ಕಲ್ಲುಚಪ್ಪಡಿಗಳನ್ನು ಅಂದರೆ ಗ್ರಾನೈಟನ್ನು ಬಳಸಲಾಗಿದೆ. ಈ ಕಲ್ಲುಚಪ್ಪಡಿಗಳನ್ನು ರೂಪಿಸಲು ಜೀವತೆತ್ತವರಿಗೆ ಸ್ಮಾರಕ ಬೇಡವೇ…
ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಒಂದು ಅಧ್ಯಾಯ ಇಂದಿನ ಓದಿಗೆ. 

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಟಿ.ಎಸ್.‌ ಗೊರವರ ಬರೆದ ಕತೆ

ಪದ್ಮಾಳ ಅತ್ತೆ, ಮಾವನಿಗೂ ಚಿಂತೆ ಮನೆ ಮಾಡಿತು. ತಮ್ಮ ವಂಶ ಬೆಳೆಸುವ ಕುಡಿ ಪಡೆಯಲು ಅದೇನು ಮಾಡಬೇಕೋ ತಿಳಿಯದಾಯಿತು. ದೇವರಾಜನಿಗೆ ಮತ್ತೊಂದು ಮದುವೆ ಮಾಡಿದರೆ ಹ್ಯಾಗೆ ಎನ್ನುವ ಆಲೋಚನೆ ಅವರಲ್ಲಿ ಮೊಳೆಯಿತು. ಕೆಲ ಸಂಬಂಧಿಕರು ಮದುವೆ ಮಾಡುವುದೇ ಸರಿಯೆಂದು ಸಲಹೆ ನೀಡಿದರು. ಇದು ಪದ್ಮಾಳ ಕಿವಿ ತಲುಪಿ ವಿಚಿತ್ರ ಸಂಕಟದಲ್ಲಿ ಮುಳುಗಿದಳು. ದಿನಪೂರ್ತಿ ಮಾತಿಲ್ಲದೆ ಚಿಂತೆಯಲ್ಲೇ ಮುಳುಗಿದಳು. ಲೋಕದ ಪರಿವೆಯನ್ನೇ ಮರೆಯತೊಡಗಿದಳು. ಟಿ.ಎಸ್. ಗೊರವರ ಬರೆದ ಕತೆ “ಕತ್ತಲಿನಾಚೆ”

Read More

‘ಅರೆಬೈಲು ಘಟ್ಟಗಳಲ್ಲಿʼ ಕವಿತೆ ಇಂದಿನ ಕಾವ್ಯ ಕುಸುಮ

“ಹಿಂಡುಗಟ್ಟಿ ಬಂದ ಮೋಡ
ಮುಂದೆ ಹೋಗಲಾರೆವೆಂದು
ಬಾನ ತೊಟ್ಟಿಲಲ್ಲಿ ತಾವೆ
ತೂಗಿಕೊಂಡವು.”- ಗಿರಡ್ಡಿ ಗೋವಿಂದರಾಜರು ಬರೆದ ಅರೆಬೈಲು ಘಟ್ಟಗಳಲ್ಲಿ ಕವಿತೆ ‘ಕಾವ್ಯ ಮಾಲೆಯ ಕಾಣದ ಕುಸುಮಗಳು’ ಸರಣಿಯಲ್ಲಿ ನಿಮ್ಮ ಓದಿಗಾಗಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ