ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು
“ಪ್ರೇಮದ ಮತ್ತಿನಲ್ಲಿದ್ದ ಅವಳ ಕಂಗಳ
ಚುಂಬಕ ನೋಟಕ್ಕೆ ಕಂಪಿಸುವ ಮರದ
ಗೊಂಚಲಿಂದ ಒಂದೊಂದೇ
ಹಳದಿ ಹೂಗಳುದುರಿ
ಅವಳ ನೆತ್ತಿ ಹಣೆ ಗಲ್ಲ ಕೊರಳ
ತಡವಿ ಮುದ್ದಿಸುತ್ತಾ
ಮರದ ನೆರಳಿನ ತೋಳತೆಕ್ಕೆಯಲ್ಲಿ
ಅರಳುತ್ತಿದೆ ಹೀಗೆ… ಹೊಸ ಕವಿತೆ
ಎಲ್ಲೋ ಹೇಗೋ ತಂಪಾಗಿ ಕುಳಿತೇ
ಬೇಸಿಗೆಯ ಬಿರುಬಿಸಿಲಲೂ
ಆತ ಬರೆಯುತ್ತಿರಬಹುದೇ
ಅಪರೂಪದ ಪ್ರೇಮ ಕಥೆ?”- ಕೆ.ಎನ್.ಲಾವಣ್ಯ ಪ್ರಭಾ ಬರೆದ ನಾಲ್ಕು ಕವಿತೆಗಳು