ಮಹಾದೇವ್ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ”
ಚಳಿಕಾಯಿಸಲೆಂದು ಪಕ್ಕದಲ್ಲೇ ಬಿದ್ದಿದ್ದ ಮರದ ಕೊಂಟಿಗೆ ಉಕ್ಕಡ ಹಾಕಿ, ಏನನ್ನೋ ಯೋಚಿಸುತ್ತ ಒಮ್ಮೆ ಮಲೆ ಮಾದೇಶ್ವರನ ದೇವಸ್ಥಾನದ ರಾಜಗೋಪುರದ ಕಡೆಗೆ ಕಣ್ಣಾಡಿಸಿ ಎದ್ದು ನಿಂತು ಅತ್ತ ತಿರುಗಿ, ಪಾಪ ಎಷ್ಟೋ ವರ್ಷುದ್ ಮೇಲೆ ಎಡ್ತಿ-ಮೊಗೀನ್ ಜೊತೆ ನೆಗ್ನೆಗ್ತಾ ಇದ್ದ, ಸಂಗ್ಡ ಯಾರು ಇಲ್ಲ ಅಂತ ಅವನ್ನ ಈ ಅಡವಿಗೆ ಕರ್ಕುಂಬಂದಿ ಕಿರ್ಬುದ್ಬಾಯಿಗೆ ಆಕ್ಬುಟ್ನಲ್ಲಪ್ಪ ಮಾದಪ್ಪ ಸಣ್ಣಕ್ಕಿನ ನೀನೆ ಕಾಪಾಡಪ್ಪ; ಅವನಿಗೆ ಏನೂ ಆಗ್ದೇ ಇರ್ಲಪ್ಪ! ಎಂದು ಎರಡೂ ಕೈ ಜೋಡಿಸಿ ದುಃಖದಿಂದ ಬೇಡಿಕೊಂಡನು.
ಮಹಾದೇವ್ ಪೊನ್ನಾಚಿ ಬರೆದ ಈ ಭಾನುವಾರದ ಕತೆ “ನಾಳೆ ಇಲ್ಲದ ಬವಣೆ” ನಿಮ್ಮ ಓದಿಗೆ

