Advertisement

ಮಿತ್ರಾ ವೆಂಕಟ್ರಾಜ

“ಹಯವದನದ ಅತೃಪ್ತ ಆತ್ಮಗಳು”: ಪ್ರಶಾಂತ್ ಬೆಳತೂರು ಬರಹ

ಮನೆ, ಮಕ್ಕಳು, ಸಂಸಾರ ಇತ್ಯಾದಿಗಳಲ್ಲಿ ಕಳೆದು ಹೋಗಿರಬಹುದಾದ ಅವರು ಈಗ ತಮ್ಮನ್ನು ತಾವು ಇಲ್ಲಿ ಈ ಕ್ಷಣ ಹುಡುಕಿಕೊಳ್ಳುತ್ತಿರಬಹುದು, ಅಥವಾ ಇಷ್ಟು ದಿನದ ಸಂತಸದ ಬದುಕನ್ನು ನಾನು ನನ್ನ ಯೌವ್ವನದ ಕಾಲದಲ್ಲಿ ಕಳೆಯಲಾಗಲಿಲ್ಲವೆಂಬ ಹಪಾಹಪಿತನದಿಂದ ಇಲ್ಲಿಗೆ ಬಂದು ನಿತ್ಯ ನರಳುತ್ತಿರಬಹುದು, ಅಥವಾ ಮುಂದಿನ ತಮ್ಮ ಬದುಕು ಹೇಗೆ ಕೊನೆಯಾಗಬಹುದು ಎಂಬ ಆತಂಕವೂ ಕಾಡುತ್ತಿರಬಹುದು. ಒಟ್ಟಿನಲ್ಲಿ ಒಬ್ಬೊಬ್ಬರು ಒಂದೊಂದು ಮುಖವಾಡಗಳ ಬೆನ್ನು ಹತ್ತಿ ತಾವು ಹೊರಟಿರುವ ಹಾದಿಯ ಬಗ್ಗೆ ಗುಮಾನಿ ಶುರುವಾಗಿ ಮಗ್ಗಲು ಬದಲಿಸಲಾಗದೆ, ತಿರುವು ಪಡೆದುಕೊಳ್ಳಲಾಗದೆ ಏನನ್ನೋ ಕಳೆದುಕೊಂಡ ಭಾವದಲ್ಲಿ ಮನಸು ವಿಲವಿಲ ಒದ್ದಾಡುತ್ತಿರಲೂಬಹುದು..!
ಪ್ರಶಾಂತ್‌ ಬೆಳತೂರು ಬರಹ ನಿಮ್ಮ ಓದಿಗೆ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ಬೆಂದು ಬೂದಿಯಾಗಿ ಬಿಡಬೇಕೆಂಬ
ಜಿದ್ದಿಗೆ ಬೀಳದೆ
ನಿನ್ನ ದಿವ್ಯ ನಿರ್ಲಕ್ಷ್ಯಕ್ಕೆ ಒಳಗಾಗಿ
ಕಡುಕಪ್ಪು ಇದ್ದಿಲಿನಂತಾಗುವ
ಕಳಂಕವನ್ನು
ಸುಲಭದಲ್ಲಿ ಕಳಚಿಕೊಳ್ಳಲಾಗದೆ
ಪ್ರೇಮದ ಹೆಸರಲ್ಲಿ
ಸುಮ್ಮನೆ ಉರಿಯುತ್ತೇನೆ..!”-ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More

‘ಗೌರ್ಮೆಂಟ್ ಬ್ರಾಹ್ಮಣ’ನೆಂಬ ಪುಸ್ತಕವೂ ಮತ್ತು ನಾನು ರೂಪುಗೊಂಡ ಬಗೆಯೂ’: ಪ್ರಶಾಂತ್‌ ಬೆಳತೂರು ಬರಹ

ಚೇಳಿನಿಂದಲೇ ಹುಟ್ಟಿದ ಚೇಳಿನಿಂದಲೇ ಸತ್ತ ಎನ್ನುವ ತನ್ನಜ್ಜಿಯ ಮಾತುಗಳೊಂದಿಗೆ ತನ್ನ ತಂದೆಯನ್ನು ನೆನಪಿಸಿಕೊಳ್ಳುವ, ಪಂದ್ರಾ ಆಗಸ್ಟ್‌ನ ಸ್ವಾತಂತ್ರ್ಯ ನಿಜಕ್ಕೂ ಎಂತಹ ಸ್ವಾತಂತ್ರ್ಯ? ಯಾವ ಬಗೆಯ ಸ್ವಾತಂತ್ರ್ಯ? ಒಂದೇ ಒಂದು ಕೊಡದ ನೀರನ್ನು ಬಾವಿಯಲ್ಲಿ ಮೊಗೆಯಲಾರದೆ ಹೋದ ಕೆಳಗೇರಿಯ ಜನ ಅಂದು ಮೊಗೆಮೊಗೆದು ಸೇದಿದರು, ಮತ್ತೆ ಬಾವಿಗೆ ಸುರವಿದರು, ಮರುದಿನ ಆ ಬಾವಿಗಳಲ್ಲಿ ಇನ್ನಾರು ನೀರು ಮೊಗೆಯಬಾರದಂತೆ ಊರ ಜನರೇ ಶಾಶ್ವತವಾಗಿ ಮುಚ್ಚಿದ್ದರು ಎನ್ನುವಾಗ ಕರುಳು ಹಿಂಡಿದಂತಾಗುತ್ತದೆ.
ಪ್ರೊ. ಅರವಿಂದ ಮಾಲಗತ್ತಿ ಆತ್ಮಕತೆ “ಗೌರ್ಮೆಂಟ್ ಬ್ರಾಹ್ಮಣ”, ಹೇಗೆ ತಮ್ಮ ಬದುಕು ಬದಲಾಯಿಸಿತು ಎನ್ನುವುದರ ಕುರಿತು ಪ್ರಶಾಂತ್‌ ಬೆಳತೂರು ಬರಹ ಇಲ್ಲಿದೆ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ಆದರೆ… ಅದೆಂತಹ ವಿಪರ್ಯಾಸ
ಘನಿಸುವ ಪ್ರೇಮಭಾವಗಳ ನಡುವೆಯೂ
ಗಡಿಯ ದಾಟಲಾರದೆ ಹೋದ
ಚಾಂಡಲ ಹಕ್ಕಿಯ ಪಡಿಯಚ್ಚು ನಾನು..!
ಬೆನ್ನಿಗಂಟಿಕೊಂಡೇ ಬಂದಿದೆ
ಮೈಯ ಮೇಲಣ ಬಣ್ಣ
ಗಡಿಗಳ ಕೊರೆದು ನಿಲ್ಲಿಸಿದೆ
ಅಸ್ಪೃಶ್ಯನೆಂಬ ಕಾರಣ..!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More

ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

“ನಾವೋ…
ಮಹಾತಾಯ ಗರ್ಭದಲ್ಲಿ
ಎಂದೋ ಉದುರಿ ಬಿದ್ದು
ಅವಳ ನಿರ್ಲಕ್ಷ್ಯಕ್ಕೆ ಒಳಪಟ್ಟ
ಅಸ್ಪೃಶ್ಯ ಮಕ್ಕಳು
ಮುಟ್ಟಲಾರೆವು
ಅವಳ ಮೊಲೆ ಹಾಲನ್ನು
ಎಲ್ಲರಂತೆ ಆಡಲಾಗದ
ಎಲ್ಲರಂತೆ ಕುಣಿಯಲಾಗದ
ಧರೆಯ ಹೆಳವರು
ಭೂತ ವರ್ತಮಾನದ ಹಾದಿ
ಅನಾದಿಗಳನ್ನು ಕಾಣದೆ
ಭವಿಷ್ಯದ ಹೆಜ್ಜೆ ಗುರುತುಗಳನ್ನು
ಮೂಡಿಸಲು
ಅಜ್ಜ ಬಿಟ್ಟು ಹೋದ
ಊರುಗೋಲನ್ನೇ ನಂಬಿ
ಕುಂತಲ್ಲೇ ಕೂತಿದ್ದೇವೆ…!”- ಪ್ರಶಾಂತ್ ಬೆಳತೂರು ಬರೆದ ಈ ದಿನದ ಕವಿತೆ

Read More
  • 1
  • 2

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ