Advertisement

Category: ದಿನದ ಪುಸ್ತಕ

ಹೆಣ್ಣಕಣ್ಣೋಟದ ಉತ್ತರ ಮಹಾಭಾರತ: ಡಾ. ಚಂದ್ರಮತಿ ಸೋಂದಾ ಬರಹ

ಈ ಕೃತಿಯಲ್ಲಿ ಎಲ್ಲರನ್ನೂ ಒಳಗೊಂಡು ಮುನ್ನಡೆಯುವ ಅಗಾಧವಾದ ತಾಳ್ಮೆ ಮತ್ತು ಇವೆಲ್ಲ ನೋವಿಗೆ ಕಾರಣವಾಗಿರುವ ತನ್ನಿನಿಯರನ್ನು ದೂರವೇ ಇಡುವ ಸಶಕ್ತ ಹೆಣ್ಣಾಗಿ ಕಾಣಿಸುತ್ತಾಳೆ. ನೂರು ಮಕ್ಕಳನ್ನು ಕಳೆದುಕೊಂಡ ಗಾಂಧಾರಿ, ಮಗನ ಸಾವಿನಿಂದ ನೊಂದ ಸುಭದ್ರೆ, ಯುದ್ಧದಿಂದ ದೂರವಿದ್ದರೂ ಪಂಚಪಾಂಡವರನ್ನು ನುಂಗಿದ ಯುದ್ಧದ ಭೀಕರತೆಗೆ ಸ್ವತಃ ಬಲಿಯಾದ ದ್ರೌಪದಿ, ಕುಂತಿ, ಭಾನುಮತಿ ಎಲ್ಲರೂ ಯುದ್ಧದಿಂದ ನೊಂದವರೇ. ಅವರನ್ನೆಲ್ಲ ಒಂದೆಡೆ ಇರುವಂತೆ ಮಾಡಿದ ದ್ರೌಪದಿ ಇಲ್ಲಿ ಮಾತಿಗಿಂತ ಕ್ರಿಯಶೀಲತೆಗೆ ಹೆಚ್ಚು ಆದ್ಯತೆ ನೀಡಿದ ಪಾತ್ರವಾಗಿ ಮೂಡಿದ್ದಾಳೆ. ಅವಳ ಕರ್ತೃತ್ವಶಕ್ತಿ ಅಸಾಧಾರಣವಾದುದು ಎನ್ನುವ ಭಾವ ನಮ್ಮನ್ನು ತಟ್ಟುತ್ತದೆ.
ಎಂ.ಎಸ್‌. ವೇದಾ ಕಾದಂಬರಿ ‘ಉತ್ತರ ಮಹಾಭಾರತ’ ಕೃತಿಯ ಕುರಿತು ಡಾ. ಚಂದ್ರಮತಿ ಸೋಂದಾ ಬರಹ

Read More

ಹೆಣದ ಹಣ: ಜಿಮ್ ರವಿ ಜೀವನ ಚರಿತ್ರೆಯ ಅಧ್ಯಾಯ

ಮಣ್ಣು ಮುಚ್ಚಿದ್ದ ನಾಲ್ಕಾಣೆಯನ್ನು ಯಾರಿಗೂ ಕಾಣದಂತೆ ಅತಿ ವೇಗವಾಗಿ ತೆಗೆದುಕೊಳ್ಳುವಾಗ ಕೈ ತುಂಬಾ ಮಣ್ಣಿನ ಸಮೇತ ಜೇಬಿಗೆ ಹಾಕಿಕೊಂಡಿದ್ದರ ಪರಿವೆ ಅವನಿಗಿರಲಿಲ್ಲ. ತಕ್ಷಣವೇ ಎಚ್ಚೆತ್ತುಕೊಂಡು `ಏನಿಲ್ಲ ಕಣಣ್ಣೋ ಅಲ್ಲಿ ಬಿದ್‌ಬಿಟ್ಟೆ ನಿಕ್ಕರ್ ಮಣ್ಣಾಯ್ತು ಅಷ್ಟೆ’ ಅಂದ. ಆದ್ರೆ ಆ ಆಸಾಮಿ `ಲೇ ಕಳ್ ನನ್ಮಗ್ನೆ ಬಿದ್ರೆ ಬರೀ ಜೇಬ್ ಮಾತ್ರಾ ಮಣ್ಣಾಗುತೇನ್ಲಾ ಏನೋ ಕಳ್ಗರ ಬಿಟ್ಟಿಂಗೆ ಕಾಣುತ್ತೆ. ನಿಮ್ಮವ್ವ ಸಿಗ್ಲಿ ಹೇಳ್ತೀನಿ ತಡಿ’ ಅಂದು ಹೋದ.
ಡಾ. ಮಂಜುನಾಥ್‌ ಮಾಗೋದಿ ಜಿಮ್ ರವಿ ಅವರ ಜೀವನ ಚರಿತ್ರೆ ‘ರವಿ ನೀನು ಆಗಸದಲ್ಲಿ’ ಕೃತಿಯ ಒಂದು ಅಧ್ಯಾಯ

Read More

“ತೇರ ನಡುವಿನ ಮೌನ”: ವಿದ್ಯಾ ಭರತನಹಳ್ಳಿ ಕೃತಿಗೆ ಕಮಲಾಕರ ಕಡವೆ ಮುನ್ನುಡಿ

ಆರೋಪಿತ ಮೌನದಿಂದ ಸ್ವಯಂ ಅಭಿವ್ಯಕ್ತಿಗೆ ಹೊರಳುವ ಈ ಚಲನೆ ಸಂಕಲನದ ಕಾವ್ಯಾತ್ಮಕ ಸಾಧನೆಗಳಲ್ಲಿ ಒಂದಾಗಿದೆ. ವಿಶೇಷವೆಂದರೆ, ಪ್ರತಿರೋಧವನ್ನು ನಾಟಕೀಯಗೊಳಿಸುವುದನ್ನು ನಿರಾಕರಿಸಿದರೂ, ಜೋರಾಗಿ ಹೇಳದೆಯೂ, ಜೀವಂತಿಕೆಯ ಸಹಜ ಚಟುವಟಿಕೆಗಳ ಮೂಲಕವೇ ಪ್ರತಿರೋಧವನ್ನು ದಾಖಲಿಸುವ, ಹಾಗೆಯೇ ಸೂಚಿಸುವ ಪರಿ ಇದಾಗಿದೆ.
ವಿದ್ಯಾ ಭರತನಹಳ್ಳಿ ಕವನ ಸಂಕಲನ “ತೇರ ನಡುವಿನ ಮೌನ” ಕೃತಿಗೆ ಕಮಲಾಕರ ಕಡವೆ ಮುನ್ನುಡಿ

Read More

ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್.‌ ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ

ಶಾಂತಿಪುರದಲ್ಲಿ ಒಂದಾನೊಂದು ಕಾಲದಲ್ಲಿ ಎರಡು ಧರ್ಮದವರ ಸಾಮರಸ್ಯ ಸಹಜವಾಗಿ ಇತ್ತು. ಕ್ರಿಸ್ತ ಶಕ 1811 ರಲ್ಲಿ ಬದುಕಿದ್ದ ಇಮಾಮ್ ಸಾಹೇಬರೇ ಸ್ವತಃ ಕುದುರೆ ಏರಿ ಕಡುಬಿನ ಕಾಳಗದ ದಿವಸ ಹಿರೇಮಠದ ಗುರುಲಿಂಗೇಶ್ವರನ ಗದ್ದುಗೆಯವರೆಗೂ ಬಂದು, ಗದ್ದುಗೆಗೆ ಹೂಮಾಲೆ ಹಾಕಿ ಕೈಮುಗಿದು ಹೋಗುತ್ತಿದ್ದರಂತೆ. ಆ ಪ್ರತೀತಿ ಮುಂದುವರೆದುಕೊಂಡು ಬಂದು ತದನಂತರ ಊರಿನ ಜನರು ತಾವೇ ಕಟ್ಟಿಕೊಂಡ ಮತ ಧರ್ಮಗಳ ಗೋಡೆಗಳ ಆಚೆ ಈಚೆ ಪರಸ್ಪರ ಮೂಗು ಮುರಿಯುತ್ತಿದ್ದರೆ, ಹಿರೇಮಠದ ಗರ್ಭಗುಡಿ ಗೋಪುರ ಮತ್ತು ಇಮಾಮ್ ಸಾಹೇಬರ ದರ್ಗಾ ಕಟ್ಟೆಯ ಮೇಲೆ ಬೆಳೆದು ನಿಂತ ಆಕಾಶದೆತ್ತರದ ಬೇವಿನ ಮರಗಳು ಮಾತ್ರ ಅನ್ಯೋನ್ಯತೆಯಿಂದ ಪರಸ್ಪರ ಮುಖ ನೋಡಿ ನಿತ್ಯವು ಶಾಂತಿಪುರದ ಜನರ ಹುಚ್ಚುತನಕ್ಕೆ ನಗೆಯಾಡುವಂತೆ ಕಾಣುತ್ತದೆ.
ವೈ.ಎಸ್.‌ ಹರಗಿ ಕಾದಂಬರಿ “ಇಮಾಮ್ ಸಾಹೇಬರ ಕುದುರೆ” ಕುರಿತು ಸಂಗೀತ ರವಿರಾಜ್, ಚೆಂಬು ಬರಹ

Read More

ಒಲವಿನ ದೀಪ ಎಲ್ಲಿ ಹಚ್ಚಲಿ?: ಮಧು ಬಿರಾದಾರ ಕೃತಿಯ ಕುರಿತು ಶೋಭಾ ನಾಯಕ ಬರಹ

‘ವಿಶಿಷ್ಟ ಪದ ರಚನೆಯೇ ರೀತಿ’ ಎಂದು ವಾಮನ ಅಭಿಮತ ಪಡುವುದನ್ನು ಇಲ್ಲಿ ಉಲ್ಲೇಖಿಸುತ್ತಲೇ ಮಧು ಬಿರಾದಾರ ಅವರ ‘ದೊರೆ ನೆತ್ತಿ ಗರುಡ’ ಕವನ ಸಂಕಲನದಲ್ಲಿನ ವಿಶಿಷ್ಟ ಪದ ರಚನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಉತ್ತರ ಕರ್ನಾಟಕದ ಬಿರುಸಾದ ಭಾಷೆ, ಉಕ್ತಿ ಹಾಗೂ ಶೈಲಿ ಅವರ ಕವನಗಳಲ್ಲಿ ವಿಶಿಷ್ಟವಾಗಿ ಕಾಣುತ್ತೇವೆ. ಪೂರ್ಣ ಪ್ರಮಾಣದಲ್ಲಿ ಅದೇ ಭಾಷೆಯನ್ನು ಬಳಸಿದರೆ ರಾಜ್ಯದ ಉಳಿದ ಭಾಗಗಳಲ್ಲಿ ಅರ್ಥವಾಗದೇ ಹೋಗುವ ಸಾಧ್ಯತೆಗಳ ಎಚ್ಚರಿಕೆಯಲ್ಲಿಯೇ ಮಧು ಹಿತವಾಗಿ-ಮಿತವಾಗಿ ಎಲ್ಲೆಲ್ಲಿ ಅಗತ್ಯವಿದೆಯೋ ಅಲ್ಲಲ್ಲಿ ಮಾತ್ರ ಬಳಸಿ ಕವಿತೆಗಳಿಗೆ ಒಂದು ಹದ ತಂದಿರುವುದನ್ನು ಕಾಣಬಹುದು. ‘ದರಿಯಾಗ್ ಯಾನ್ ನಡ್ಡಾದ್’ ಕವಿತೆಯಂತೂ ಪೂರ್ಣವಾಗಿ ಭಾಷಾ ಪ್ರಯೋಗಕ್ಕೆ ಒಳಗೊಂಡಿರುವುದನ್ನು ನೋಡಬಹುದು.
ಮಧು ಬಿರಾದಾರ ಕವನ ಸಂಕಲನ “ದೊರೆ ನೆತ್ತಿ ಗರುಡ” ಕುರಿತು ಶೋಭಾ ನಾಯಕ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ