Advertisement

Category: ದಿನದ ಪುಸ್ತಕ

ಮುಳ್ಳಿನ ಮೇಲಿನ ಹೂವು: ವೇದಾ ಮನೋಹರ ಜೀವನ ಪಯಣದ ಕತೆ

ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು.
ಭಾರತಿ ಹೆಗಡೆ ನಿರೂಪಣೆಯ ವೇದಾ ಮನೋಹರ ಜೀವನ ಪಯಣದ ಕೃತಿ “ಪಂಚಮವೇದ”ದ ಒಂದು ಅಧ್ಯಾಯ ನಿಮ್ಮ ಓದಿಗೆ

Read More

“ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌” ಕಥೆಗಳು….

ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.
ಮುನವ್ವರ್‌ ಜೋಗಿಬೆಟ್ಟು ಕಥಾಸಂಕಲನ”ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ

Read More

ಇಲ್ಲಿ ಬಳ್ಳಿ, ಹೂವು, ಮೋಡ ಕೂಡ ಮಾತನಾಡುತ್ತವೆ: ಡಾ. ವಿಜಯಾ ಬರಹ

‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!
ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ

Read More

ಒಳದನಿಗೆ ಕಿವಿಯಾಗುವ ಕವಿತೆಗಳು: ಆನಂದ ವಿ. ಪಾಟೀಲ ಬರಹ

“ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ/ಪ್ರತಿಯೊಬ್ಬರೂ ಒಂಟಿ!’ ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.
ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಆನಂದ ವಿ. ಪಾಟೀಲ ಬರಹ

Read More

ಮೌಲ್ಯಗಳನ್ನು ಎತ್ತಿ ಹಿಡಿವ ಕಾದಂಬರಿ: ಕೆ.ಆರ್.ಉಮಾದೇವಿ ಉರಾಳ ಬರಹ

ಕೌಟುಂಬಿಕ ಜೀವನದ ಮಹತ್ವ, ಇತರರನ್ನು ಕ್ಷಮಿಸುವಂತೆಯೇ ನಮ್ಮನ್ನೇ ನಾವು ಕ್ಷಮಿಸಿಕೊಳ್ಳುವುದರ ಮಹತ್ವವನ್ನು ಮನಗಾಣಿಸಿದರು, ಗುರುಗಳು. ಸಮಾಜದಲ್ಲಿ ನಮ್ಮಲ್ಲಿರುವ ಭಿನ್ನತೆಗಳನ್ನು ಅನಗತ್ಯವಾಗಿ ಉತ್ಪ್ರೇಕ್ಷಿಸಿ ಶ್ರೀಮಂತ ಬಡವ ಸ್ತ್ರೀ ಪುರುಷ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಬ್ರಾಹ್ಮಣ ದಲಿತ ಎಂದೆಲ್ಲಾ ಅಡ್ಡ ಗೋಡೆಗಳನ್ನು ಕಟ್ಟಿಕೊಳ್ಳುವುದಕ್ಕಿಂತ ಭಿನ್ನತೆ ಪ್ರಭೇದತೆಗಳು ಸಮಾಜದ ಲಕ್ಷಣ ಎಂದರಿತು ನಮ್ಮಲ್ಲಿರುವ ಸಾಮ್ಯತೆಗಳನ್ನು ಗುರುತಿಸುತ್ತಾ ಇಡೀ ಜಗತ್ತೇ ನಮ್ಮ ಕುಟುಂಬ ಎಂಬ ಪ್ರೀತಿ ಬೆಳೆಸಿಕೊಳ್ಳಬೇಕಾದ ಮಹತ್ವವನ್ನು ಮನಗಾಣಿಸುತ್ತಾರೆ.
ದೀಪ್ತಿ ಎಸ್. ರಾವ್ ಬರೆದ “ಸಾವಿನಂಚಿನ ಸಂವಾದ” ಕಾದಂಬರಿಯ ಕುರಿತು ಕೆ.ಆರ್.ಉಮಾದೇವಿ ಉರಾಳ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ