Advertisement

Category: ದಿನದ ಪುಸ್ತಕ

ವಿಶಿಷ್ಟ ಶಬ್ದಶಿಲ್ಪ ‘ಆಕಾಶದೇವರು’….

ಶೂನ್ಯತತ್ವ ಒಂದು ಬಹುಮುಖ್ಯ ತಾತ್ವಿಕತೆಯಾಗಿ ಈ ಕತೆಯಲ್ಲಿ ಕಂಡುಬರುತ್ತದೆ. ಶೂನ್ಯತತ್ವದ ಪರಿಕಲ್ಪನೆಯೂ ಭಾರತೀಯ ದಾರ್ಶನಿಕ ಪರಂಪರೆಯಲ್ಲಿ ಬಹುದೊಡ್ಡ ಸಾಧಕ ಪ್ರಮಾಣವಾಗಿದೆ. ಶೂನ್ಯ ಎಂದರೆ ತಟ್ಟನೆ ನೆನಪಾಗುವುದು ಅಲ್ಲಮ ಮತ್ತು ಶರಣರ ಶೂನ್ಯತತ್ವದ ಪರಿಕಲ್ಪನೆ. ಅದೊಂದು ಆನುಭಾವಿಕ ನೆಲೆಯ ಚಿಂತನೆ. ಸೃಷ್ಟಿಯ ಮೂಲತತ್ವವನ್ನು ಕುರಿತು ಆಲೋಚನೆಗೆ, ಚಿಂತನೆಗೆ ಹಚ್ಚುವ ಪರಿಕಲ್ಪನೆಯಾಗಿ ಶೂನ್ಯತತ್ವ ನಮ್ಮ ಮುಂದಿದೆ.
ಬಿ. ಸುಜ್ಞಾನಮೂರ್ತಿ ಅನುವಾದಿಸಿದ “ಆಕಾಶದೇವರು” ವಿಲೋಮಕತೆಯ ಕುರಿತು ಡಾ. ನಂದೀಶ್ವರ ದಂಡೆ ಬರಹ

Read More

ಆಸ್ಕರ್ ವೈಲ್ಡ್ ಕಾದಂಬರಿ: ಗುಂಗು ಹಿಡಿಸುವ ಓದು

ತನ್ನ ಮತ್ತು ವೇನ್ ಳ ಮಾಯೆಗಳನ್ನೆಲ್ಲ ತೋರಿಸಿ ಬೇಸ್ತು ಬೀಳಿಸುವ ಉತ್ಸಾಹ ಗ್ರೇ ಗೆ. ಬೇಸಿಲ್ ಮತ್ತು ಹ್ಯಾರಿಯನ್ನು ಕರೆದುಕೊಂಡು ಹೋಗಿ ಥಿಯೇಟರಿನಲ್ಲಿ ವೇನ್ ಳ ಪ್ರತಿಭಾ ಸೌಂದರ್ಯವನ್ನು ತೋರಿಸುವ ಪ್ರಯತ್ನ ಮಾಡಿದ ಗ್ರೇ. ಆದರೆ ಅಂದು ರಾತ್ರಿ ದೊಡ್ಡ ಆಘಾತ ಕಾದಿತ್ತು. ರೊಸಾಲಿಂಡಳ ಪಾತ್ರ ಮಾಡಿದ್ದ ವೇನ್, ಜೀವಂತಿಕೆಯನ್ನೇ ಕಳೆದುಕೊಂಡ ಆಟದ ಬೊಂಬೆಯಂತೆ ನಟಿಸಿದಳು.
ಆಸ್ಕರ್ ವೈಲ್ಡ್ ಬರೆದ ‘ದಿ ಪಿಕ್ಚ್ ರ್ ಆಫ್ ಡೋರಿಯನ್ ಗ್ರೇ’ ಕಾದಂಬರಿ ಕುರಿತು ನವೀನ ಗಣಪತಿ ಬರಹ

Read More

ಸರ್ ಎಂ. ವಿಶ್ವೇಶ್ವರಯ್ಯ ಕುರಿತ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

“ದಿವಾನರಾದ ಅವಧಿಯಲ್ಲಿ ಮಹಾರಾಜರೊಂದಿಗೆ ಒಮ್ಮೆ ಕೆಮ್ಮಣ್ಣುಗುಂಡಿಗೆ ಹೋಗಿದ್ದಾಗ ಸೂರ್ಯೋದಯಕ್ಕೂ ಮೊದಲೇ ಎದ್ದು ವಾಯುವಿಹಾರ ಕೈಗೊಂಡಿದ್ದ ಸರ್ ಎಂ.ವಿ.ಯವರಿಗೆ ಮಣ್ಣಿನ ರಾಶಿಯಲ್ಲಿನ ಬೆಣಚುಕಲ್ಲುಗಳು ಕಣ್ಣಿಗೆ ಬೀಳುತ್ತವೆ. ಅವನ್ನು ಸೂರ್ಯನ ಬೆಳಕಲ್ಲಿ ಹಿಡಿದು ನೋಡಿದ ಅವರು ಉದ್ಗರಿಸುತ್ತಾರೆ. “ನಾವು ಕಲ್ಲಿದ್ದಲಿಗಾಗಿ ಇನ್ನು ಬರ್ಮಿಂಗ್ ಹ್ಯಾಂ ನತ್ತ ನೋಡಬೇಕಿಲ್ಲ!” ಮುಂದೆ ಅದಿರಿನ ನಿಕ್ಷೇಪಗಳನ್ನು ಗಮನಿಸುತ್ತಾರೆ.”
ಜಿ.ವಿ.ಸಂಗಮೇಶ್ವರ ಬರೆದ ‘ಕಬ್ಬಿಣದ ಕಥೆ ವ್ಯಥೆ’ ಪುಸ್ತಕದ ಬಗ್ಗೆ ಕೆ.ಆರ್.ಉಮಾದೇವಿ ಉರಾಳ ಬರಹ

Read More

ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ರಂಗಾಂತರಂಗ…

“ಕಥನದ ಉತ್ತರಾರ್ಧದಲ್ಲಿ ಲಕ್ಷ್ಮೀಶರು ತನ್ನ ರಂಗಾನುಭವಾಧಾರಿತ ರಂಗ ಚಿಂತನೆಗಳನ್ನು ಸರಳವಾದ ಭಾಷೆಯಲ್ಲಿ ಮಂಡಿಸಿದ್ದು, ಚರ್ಚಿಸಬೇಕಾದ, ಚಿಂತನೀಯವಾದ ಅನೇಕ ವಿಚಾರಗಳು ಅಲ್ಲಿ ಬಂದಿವೆ. ಇಡಿಯ ಆಟಕ್ಕೆ ಆಧಾರವಾಗಿ ನಿರ್ವಹಣೆ, ಹಾಡು, ಕುಣಿತಗಳನ್ನು ನಡೆಸುವ ಮೆರೆಸುವ ಹಿಮ್ಮೇಳದ ಮಹತ್ವ ಸಾಮಾನ್ಯ ಪ್ರೇಕ್ಷಕನಿಗೆ ಅರಿವಿಗೆ ಬರದಿರುವ ಸಂಗತಿ, ಹಲವು ವಾದಕರ ವಾಣಿಯಾಗಿ ಇಲ್ಲಿ ಪ್ರಸ್ತಾವಿತವಾಗಿದೆ. ಅದು ನಿಜ ಕೂಡ.”
ಲಕ್ಷ್ಮಿ ಮಚ್ಚಿನ ಬರೆದ ಮದ್ಲೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ರಂಗಾಂತರಂಗಕ್ಕೆ ಡಾ. ಎಂ.ಪ್ರಭಾಕರ ಜೋಷಿ ಬರೆದ ಮುನ್ನುಡಿ

Read More

ಜಯಂತ ಕಾಯ್ಕಿಣಿ ಕಥಾಸಂಕಲನದ ಕುರಿತು ಸ್ಮಿತಾ ರಾಘವೇಂದ್ರ ಬರಹ

“ಅದೆಷ್ಟು ಮಾತಿನ ಮಲ್ಲ ! ಮಾತೇ ಮರೆತು ಮುಂಬೈ ಗಲ್ಲಿ ಗಲ್ಲಿ ಸುತ್ತುತ್ತಾನೆ. ಪಿಟ್ಸ್‌ ಬಂದ ವ್ಯಕ್ತಿಯ ಮುಷ್ಟಿಯೊಳಗಿನ ಮುದ್ದೆಯಾದ ಹಾಳೆಯಲ್ಲಿ ಪುಟ್ಟ ಮಗುವಿನ ಪಾದದ ಗುರುತನ್ನು ಪತ್ತೆ ಹಚ್ಚಿ ಆಗುವ ಅನಾಹುತ ತಪ್ಪಿಸುತ್ತಿದ್ದರೆ, ಸುಮ್ಮನೇ ಕಣ್ಣಾಲಿಗಳನ್ನು ತೇವವಾಗುತ್ತದೆ. ಹಾಗೆ ಮುಂಬೈ ಸುತ್ತಿಸಿ ಮತ್ತೆ ಸೀದಾ ನಮ್ಮ ಮಲೆನಾಡಿನ ಸೀಮೆಗೆ ಹಾಜರಾದ ಕಾಯ್ಕಿಣಿಯವರು ಇಡೀ ಕುಮಟಾ, ಅಂಕೋಲಾ, ಕಾರವಾರ, ಯಲ್ಲಾಪುರ, ಶಿರಸಿಗಳನ್ನು ಸುತ್ತಿಸುತ್ತ ಕಥೆ ಹೇಳುತ್ತ ಹೋಗುತ್ತಾರೆ.”
ಜಯಂತ ಕಾಯ್ಕಿಣಿ ಕಥಾ ಸಂಕನಲ “ಬಣ್ಣದ ಕಾಲು” ಕುರಿತು ಸ್ಮಿತಾ ರಾಘವೇಂದ್ರ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ