“ಗೇದುಣ್ಣುವವರೇ ಬದುಕದ ಕಾಲದಲ್ಲಿ ಹುಟ್ಟುವ ಕತೆಗಳಾದರೂ ಉಳಿಯುತ್ತವೆ”: ಹೃದಯ ಶಿವ ಕಥಾಸಂಕಲನಕ್ಕೆ ಸ್ವಾಮಿ ಪೊನ್ನಾಚಿ ಬರಹ
ಹೃದಯಶಿವ ಅವರ ಕಥೆಗಳನ್ನು ಓದುವ ಕುತೂಹಲದ ಮಜವೇ ಬೇರೆ. ಕನಕಪುರದ ಕೆಬ್ಬರೆ ಗ್ರಾಮದಲ್ಲಿ ಶುರುವಾದ ಕಥೆ ಬೆಂಗಳೂರಿನ ಸಿನಿಮಾರಂಗದಲ್ಲಿ ಬಂದು ನಿಲ್ಲುತ್ತದೆ. ವೈಯಕ್ತಿಕ ದನಿಯ ಆಚೆಗೆ ಕತೆಗಳು ವಿಸ್ತಾರಗೊಳ್ಳುತ್ತಾ ಸಮಷ್ಟಿಯೆಡೆಗೆ ಹೋಗುತ್ತವೆ. ಬದುಕಿನ ಪರಸ್ಪರ ವೈರುಧ್ಯಗಳೇ ಹೆಚ್ಚು ಕಥೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕಥೆ ಓದುವಾಗ ಶುರುವಾಗುವ ನೆಗೆಟಿವ್ ಕಾಂಪ್ಲೆಕ್ಸ್ ಕೊನೆಯಲ್ಲಿ ಪಾಸಿಟಿವ್ ಆಗಿರುತ್ತದೆ. ಭರವಸೆ, ಆಶಾಭಾವ ಕಥೆಗಳಲ್ಲಿ ವ್ಯಕ್ತವಾಗುತ್ತವೆ.
ಹೃದಯ ಶಿವ ಹೊಸ ಕಥಾಸಂಕಲನ “ಸೂಪರ್ ಗಾಡ್ ಸಣ್ಣಯ್ಯ” ಕೃತಿಗೆ ಸ್ವಾಮಿ ಪೊನ್ನಾಚಿ ಮುನ್ನುಡಿ
