Advertisement

Category: ಪುಸ್ತಕ ಸಂಪಿಗೆ

ಸಂತೆಯೊಳಗಣ ಮೌನಕ್ಕೆ ಶರಣಾಗುತ್ತ…

ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ.
ಚನ್ನಬಸಪ್ಪ ಆಸ್ಪರಿಯವರ “ಸಂತೆಯೊಳಗಣ ಮೌನ” ಕವನ ಸಂಕಲನದ ಕುರಿತು ನಾದ ಮಣಿನಾಲ್ಕೂರು ಬರಹ

Read More

ಇರುವಿಕೆ ಮತ್ತು ಆಗುವಿಕೆ

ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.
ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿ‌ಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ

Read More

ಬಾಳಿನ ಸಂತೆಯಲ್ಲಿ ಗಜಲ್ ಧ್ಯಾನ..

ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.
ಶ್ರೀದೇವಿ ಕೆರೆಮನೆಯವರ ಗಝಲ್‌ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ

Read More

ಇವಾನ್ ಬುನಿನ್: ಭೌತ ವಸ್ತುಗಳ ಭಾವಗೀತಕಾರ

ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್‍ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು…
ರಷ್ಯಾದ ಹೆಸರಾಂತ ಲೇಖಕ ಇವಾನ್‌ ಬುನಿನ್‌ನ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದದ್ದು, ಈ ಸಂಕಲನಕ್ಕೆ ಬುನಿನ್‌ ಕುರಿತಾಗಿ ಬರೆದ ಅವರ ಮಾತುಗಳು ಇಲ್ಲಿವೆ

Read More

ಕೃಷ್ಣ ಸಾಕ್ಷಾತ್ಕಾರ ಮಾಡಿಸುವ ಅಪರೂಪದ ಖಂಡಕಾವ್ಯ

ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ.
ಪ್ರೊ. ಕೆ.ಇ. ರಾಧಾಕೃಷ್ಣ ಅವರ “ಗೋಪಿಕೋನ್ಮಾದ” ಕೃತಿಯ ಕುರಿತು ನಾರಾಯಣ ಯಾಜಿ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ