Advertisement

Category: ಪ್ರವಾಸ

ಮೌಂಟ್‌ಅಬುವಿನ ಒಳಹೊರಗೆಲ್ಲ ಸುತ್ತುತ್ತಾ…

ಬೆಟ್ಟದ ದಾರಿ. ಸಂಜೆಯಾಗುವ ಮೊದಲೇ ಮೇಲೇರಬೇಕು ಎನ್ನುವ ಧಾವಂತದಲ್ಲೇ ಹೊರಟೆ. ಇಕ್ಕೆಲಗಳಲ್ಲೂ ಅರಾವಳಿ ಪರ್ವತಶ್ರೇಣಿಯ ಸ್ನಿಗ್ಧ ಸೌಂದರ್ಯಾಸ್ವಾದನೆ. ಸ್ವಪ್ನಲೋಕದ ದಾರಿಯಲ್ಲಿ ಪಯಣಿಸಿ ಸೂರ್ಯಾಸ್ತದ ವೇಳೆಗೆ ತಲುಪಿದ್ದು ಸಮುದ್ರಮಟ್ಟದಿಂದ 1200 ಮೀಟರುಗಳಷ್ಟು ಮೇಲಿರುವ, ಬೇಸಿಗೆ ಅರಮನೆಗಳ ನಗರ ಮೌಂಟಬುವನ್ನು. ಥಾರ್ ಮರುಭೂಮಿಯ ಈ ನಾಡಿಗೆ ಉಣ್ಣೆ ಬಟ್ಟೆಯನ್ನು ಹೊತ್ತಿ ಹೋಗುವ ಕಲ್ಪನೆಯೂ ನನಗಿರಲ್ಲಿಲ್ಲ. ಆದರೆ ಕಾಲಿಟ್ಟೊಡನೆ ಮೈನಡುಗಿಸಿತ್ತು ಅಲ್ಲಿನ ಹವೆ.
‘ಕಂಡಷ್ಟೂ ಪ್ರಪಂಚʼ ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ

Read More

ಕಾಟ್ಸ್ ವೋಲ್ಡ್ಸ್: ಸಿಂಹದ ಒನಪಿರುವ ಕುರಿಗಳ ಸಾಮ್ರಾಜ್ಯ

ಕುರಿಯು ಸಿಂಹ ಎನಿಸಿಕೊಳ್ಳುವ ಏಕೈಕ ಜಾಗ ಕಾಟ್ಸ್ ವೋಲ್ಡ್ಸ್, ಹದಿನಾರು, ಹದಿನೇಳನೆಯ ಶತಮಾನದಿಂದಲೋ ಕುರಿ ಸಂತೆಗೆ ಪ್ರಖ್ಯಾತವಾಗಿರುವ ಜಾಗ. ಈ ರಾಜ್ಯದಂತಹಾ ಸಂಸ್ಥಾನದಲ್ಲಿ ಮೊನ್ನೆಮೊನ್ನೆಯವರೆಗೂ ಒಂದೇ ದಿನದಲ್ಲಿ ಇಪ್ಪತ್ತು ಸಾವಿರ ಕುರಿಗಳು ಮಾರಾಟವಾದ ಹೆಗ್ಗಳಿಕೆ. ಇಲ್ಲಿನ ಕುರಿಗಳು ಸಹಜವಾಗಿಯೇ ಒಮ್ಮೆಲೆ ಇನ್ನೂರು ಕಿಲೋಗ್ರಾಮ್ಗಳಷ್ಟು ಬೆಳೆಯಬಲ್ಲವು. ತಮ್ಮ ಮೈಮೇಲೆಲ್ಲಾ ಹೊನ್ನ ಬಣ್ಣದ ಕೂದಲನ್ನು ಬೆಳೆಸಿಕೊಂಡು ವಿಶ್ವದ ಗಮನವನ್ನು ತಮ್ಮೆಡೆಗೆ ಸೆಳೆದುಕೊಂಡವು ಇಲ್ಲಿನ ಕುರಿಗಳು. ‘ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಇಂಗ್ಲೆಂಡ್ ನ ಕುರಿ ಸಂಸ್ಥಾನದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ನೆತ್ತರ ಇತಿಹಾಸ ಕೇಳಿ, ಕೈಬಿಟ್ಟ ಬಳೆಗಳು

ಜಯದ್ವಾರದಿಂದ ಒಳಹೊಕ್ಕು ಲೋಹದ್ವಾರದಿಂದ ಹೊರಬರುವ ವ್ಯವಸ್ಥೆಯಿರುವ ಈ ಕೋಟೆ ಅನ್ನೋ ಮತ್ತೊಂದು ಜಗತ್ತನ್ನು ಅನುಭವಿಸೋದಕ್ಕೆ ಅದೆಷ್ಟು ಪುನರ್ಭೇಟಿಗಳು ಬೇಕೋ ಅಂದುಕೊಳ್ಳುತ್ತಾ, ಇತಿಹಾಸದೊಳಗಿನ ಯಾನದಾನಂದದಿಂದ ಹಗುರವಾಗಿದ್ದ ಮೈಮನಸು ಹೊತ್ತು ಕಲ್ಲು ಹಾಸಿನ ಗುಂಟ ಹೆಜ್ಜೆಯಿಡುತ್ತಾ ಹೊರ ಬರುತ್ತಿದ್ದೆ. ತಕ್ಷಣ ನನ್ನ ಬಲಗೈ ತುದಿಗಣ್ಣಿಗೆ ಕಂಡದ್ದು ಅಚ್ಚಕೆಂಪಿನ ಹದಿನೈದು ಜೊತೆ ಹಸ್ತಗಳ ಗುರುತು ಗೋಡೆಯ ಮೇಲೆ!
‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಜೋಧ್‌ಪುರ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಶ್ರದ್ಧೆಯ ಮೂಲ ಎಲ್ಲಿದೆ?

ಆತ ಮೇಲೆ ಹೋಗಿ ಗಂಧದ ಕಡ್ಡಿ ಹಚ್ಚಿ ಅಷ್ಟೂ ದಿಕ್ಕಿಗೆ ಭಕ್ತಿಯಿಂದ ಪೂಜೆ ಮಾಡಿದ. ಆಮೇಲೆ ನಮಸ್ಕರಿಸಿದ. ಹೊರಡುವ ಮುಂಚೆ ಕೇಳಿದೆ. ಏನಿದು ಅಂತ. ಆತ “ಸುತ್ತ ದೇವರುಗಳಿದ್ದಾರೆ, ಪೂಜೆ ಮಾಡದಿದ್ದರೆ ಆಗುತ್ತಾ? ದಿನ ಬೆಳಿಗ್ಗೆ ಸಾಯಂಕಾಲ ನಾವು ಯಾರೇ ಶಿಫ್ಟ್‌ ನಲ್ಲಿರಲಿ ಪೂಜೆ ಮಾತ್ರ ತಪ್ಪಿಸಲ್ಲ” ಎಂದ. ಅವರು ಅದ್ಯಾವುದೂ ಮಾಡದಿದ್ದರೂ ನಡೆಯುತ್ತೆ. ಆರ್ಕಿಯಾಲಜಿಯವರ ಪ್ರಕಾರ ಅದೊಂದು ಸ್ಮಾರಕ. ಪೂಜೆಗೆ ದುಡ್ಡು ಕೊಡೋಲ್ಲ. ಅದು ನಿತ್ಯಪೂಜೆ ನಡೆಯುವ ದೇವಾಲಯವಲ್ಲ. ಆದರೆ ಇದು ಅಲ್ಲಿರುವ ಸೆಕ್ಯುರಿಟಿಗಳು ನಡೆಸಿಕೊಂಡು ಬಂದಿರುವ ಪರಿಪಾಠ.
ಗಿರಿಜಾ ರೈಕ್ವ ಬರೆಯುವ ಪ್ರವಾಸ ಅಂಕಣ

Read More

ಬಂಗಾಳಕೊಲ್ಲಿಯ ಮೂಗುತಿ ವಜ್ರ ಅಂಡಮಾನ್‌

ಸಮುದ್ರದೆದುರು ನಾವೆಲ್ಲರೂ ಗುಬ್ಬಚ್ಚಿಗಳಂತೆ ಹಾರಾಡೋ ಹಕ್ಕಿಗಳು, ಒಮ್ಮೆ ನೀಲಿ ಮತ್ತೊಮ್ಮೆ ಕೆಂಪಾದ ಆಕಾಶ, ಕನಸಿನಲೋಕಕ್ಕೆ ಜಾರುಬಂಡಿಯಾಗೋ ನುಣುಪು ಪಾಚಿ ಕಟ್ಟೆಗಳು, ಎಲ್ಲಿಯೂ ಕಾಣದ ಆದಿವಾಸಿಗಳು, ಹೂವು ಮುಡಿದು ಓಡಾಡೋ ತಮಿಳು-ಬೆಂಗಾಳಿ ಹೆಣ್ಮಕ್ಕಳು, ಎಂದಿನಂತೆ ಏನೇನೋ ಧಾವಂತಹೊತ್ತ ಚಡಪಡಿಸೋ ಗಂಡಸರು, ಬೆರಳುಗಳು ಬೆಸಗೊಂಡಂತೆ ಇಷ್ಟಿಷ್ಟೇ ದೂರದಲ್ಲಿ ಅಂಟಿಕೊಂಡಿರೋ ಚಿಕ್ಕ ಚಿಕ್ಕ ದ್ವೀಪಗಳು, ಭೂಮಿಯೊಂದಿಗಿನ ರೋಮ್ಯಾನ್ಸ್‌ಗಾಗಿಯೇ ಹುಟ್ಟೋ ಸೂರ್ಯ ಇದು ಅಂಡಮಾನ್!
ಅಂಡಮಾನ್‌ ಪ್ರವಾಸದ ಕುರಿತು ಬರೆದಿದ್ದಾರೆ ಅಂಜಲಿ ರಾಮಣ್ಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ