Advertisement

Category: ಸಂಪಿಗೆ ಸ್ಪೆಷಲ್

ಕಾವ್ಯಕುತೂಹಲ: ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ

ಕೆಲವು ಸಾಲುಗಳು ಹುಟ್ಟಿಸುವ ಬೆರಗು ಮಾತ್ರ ಸಾಕು ಒಂದೀಡಿ ಕವಿತೆಯನ್ನು ಓದಲು. ಬಿಡಿಬಿಡಿಯಾಗಿ ಎದೆಹೊಕ್ಕುವ ಸಾಲುಗಳು ಮತ್ತೆಂದೋ ಯಾವುದೋ ಅನುಭವದಲ್ಲಿ ಯಾರದ್ದೋ ಸಾನಿಧ್ಯದಲ್ಲಿ ಪೂರ್ಣಗೊಳ್ಳುತ್ತವೆ. ಅವಳಲ್ಲಿ ಬಿಡಿಬಿಡಿಯಾಗಿದ್ದ ಹೂಗಳು ಅವನು ಸಿಕ್ಕಿದಾಗ ಮಾಲೆಯಾಗುವ ಸೋಜಿಗದಂತೆ! ಬಿಡಿಸಲಾಗದ ಅಚ್ಚರಿ ಇದು. ಅಚ್ಚರಿಯೇ ಪ್ರೇಮ. ಅದೇ ಕವಿತೆ.
ಕಾವ್ಯದ ಕುರಿತು ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಬರಹ ನಿಮ್ಮ ಓದಿಗೆ

Read More

ಎಂದೊ ಯಾರಿಗೊ ತೋರಿದ ಮಮತೆ..ವಾತ್ಸಲ್ಯ..: ಗೊರೂರು ಶಿವೇಶ್‌ ಬರಹ

ಎಲ್ಲವನ್ನು ತೊರೆದು ಬಂದ ವ್ಯಕ್ತಿಗೆ ಹುಟ್ಟಿದ ಊರನ್ನು, ಶಿಕ್ಷಕನೊಬ್ಬನಿಗೆ ಬಿಟ್ಟು ಬಂದ ಶಾಲೆಯನ್ನು ಮರು ಭೇಟಿಯಾಗುವ ಕ್ಷಣಗಳು ಬಹಳಷ್ಟು ಸಂದರ್ಭದಲ್ಲಿ ಖುಷಿ ನೀಡುವ ಸಂಗತಿಯಾಗಿರುವುದಿಲ್ಲ. ಮೇಯಳಗನ್ ಚಿತ್ರದ ನಾಯಕನಿಗೂ ಅದೇ ಹೆದರಿಕೆ. ಬದಲಾದ ಸಂದರ್ಭ ಬದಲಾದ ಪರಿಸ್ಥಿತಿ ಅಲ್ಲಿನ ಜನ ಗುರುತಿಸುತ್ತಾರೋ ಇಲ್ಲವೋ? ಎಂಬುದು ನನ್ನನ್ನು ಕಾಡಿದ್ದಿದೆ. ಅಲ್ಲಿನ ಘಟನೆಗಳು, ಊರಿನ, ಗೆಳೆಯರ ಸ್ಥಿತಿ ಮನಸ್ಸಿಗೆ ಅಹಿತವನ್ನು ಇಲ್ಲವೇ ವಿಷಾದದ ಪರಿಸ್ಥಿತಿಗೆ ದೂಡಿದರೆ ಹೀಗೆ ಏನೇನೋ ಯೋಚನೆ ಬರುವುದುಂಟು.
‌ತಮಿಳಿನ “ಮೇಯಳಗನ್” ಚಲನಚಿತ್ರದ ಕುರಿತು ಗೊರೂರು ಶಿವೇಶ್‌ ಬರಹ

Read More

ಮುಂದಿನ ಭಾನುವಾರ: ಡಾ ಖಂಡಿಗೆ ಮಹಾಲಿಂಗ ಭಟ್ ಅನುವಾದಿಸಿದ ಆರ್ ಕೆ ನಾರಾಯಣ್ ಬರಹ

ಅವನಿಗೆ ಬೇಕೆಂದಿದ್ದ ಒಂದು ಮೊಳೆ, ತಂತಿ ಅಥವಾ ಮುಂದೆ ಉಪಯೋಗಿಸಲು ಇರಿಸಿದ್ದ ಸರಿಗೆ ಪ್ರಾಮುಖ್ಯವಾದ ಚಿಲಕ ಅಥವಾ ಇನ್ನೇನಾದರೂ ಸದಾ ಸಿಗದಿರುವುದು ಮತ್ತು ಇದು ಅವನಿಗೆ ಸಿಟ್ಟು ಬರಿಸುತ್ತದೆ. ಅವನಿಗೆ ಹಲವಾರು ಜನ ಮಕ್ಕಳಿದ್ದಾರೆ ಮತ್ತು ನಾಶಗಳು ಅವರ ಅನುಪಾತಕ್ಕೆ (ಪ್ರಮಾಣಕ್ಕೆ) ಸರಿಯಾಗಿ ಇವೆ. ಇದು ಈ ಸಿಟ್ಟುಗೊಳ್ಳುವ ಮನುಷ್ಯನಿಗೆ ಸುಲಭದಲ್ಲಿ ನಿಭಾಯಿಸಲು ಕಷ್ಟವಾಗುತ್ತದೆ.
“ಭಾನುವಾರ”ದ ಕುರಿತು ಆರ್ ಕೆ ನಾರಾಯಣ್ ಬರಹವನ್ನು ಡಾ ಖಂಡಿಗೆ ಮಹಾಲಿಂಗ ಭಟ್ ಕನ್ನಡಕ್ಕೆ ಅನುವಾದಿಸಿದ್ದು, ನಿಮ್ಮ ಓದಿಗೆ ಇಲ್ಲಿದೆ

Read More

‘ನಾವು ಪಟಾಕಿ ಅಂಗಡಿ ಇಟ್ಟಿದ್ದು’: ಗೊರೂರು ಶಿವೇಶ್‌ ಬರಹ

ಸಂಜೆಯಾಗುವಷ್ಟರಲ್ಲಿ ಆಟಂಬಾಂಬ್, ಆನೆ ಪಟಾಕಿ, ಲಕ್ಷ್ಮಿಪಟಾಕಿಯಂಥ ಭಯಂಕರ ಸದ್ದುಮಾಡುವ ಪಟಾಕಿಗಳನ್ನುಳಿದು ಉಳಿದ ಪಟಾಕಿಗಳೆಲ್ಲವೂ ಖಾಲಿಯಾಗಿದ್ದವು. ಸಂಜೆ, ರಾತ್ರಿಗೆ ತಿರುಗುತ್ತಿದ್ದಂತೆ ತಮ್ಮಲ್ಲಿದ್ದ ಪಟಾಕಿ ಹೊಡೆದು ತೃಪ್ತರಾಗದ ಜನ ಹೆಚ್ಚಿನ ಪಟಾಕಿಕೊಳ್ಳಲು ಬಂದು ಇಲ್ಲದೆ ನಿರಾಶರಾಗಿ ಮರಳಿದರು. ಬೆಳಿಗ್ಗೆ ತಾನೇ ‘ಲಾಸಾದ್ರೆ ಏನು ಗತಿ?’ ಎಂದು ಚಿಂತಿರಾಗಿದ್ದ ಅಣ್ಣ ಈಗ ‘ಇನ್ನಷ್ಟು ಪಟಾಕಿ ಇದ್ದಿದ್ರೆ ಒಳ್ಳೆ ವ್ಯಾಪಾರ ಆಗ್ತಿತ್ತು’ ಅನ್ನತೊಡಗಿದರು. ಆಶ್ಚರ್ಯಚಕಿತರಾಗಿ ಅವರ ಮುಖ ನೋಡುತ್ತಿದ್ದಂತೆ ‘ವ್ಯಾಪಾರ ಅಂದ್ರೆ ಹೀಗೆ, ಪ್ರತಿ ದಿನ ಲಾಭ ಸಿಗೋಲ್ಲ, ಯಾವೊತ್ತೊ ಒಂದು ದಿನ ಹೀಗೆ ಕಚ್ಗೊಳ್ಳುತ್ತೆ’ ಎಂದು ವ್ಯಾಪಾರದ ಮರ್ಮ ತೆರೆದಿಟ್ಟರು.
ಗೊರೂರು ಶಿವೇಶ್‌ ಬರಹ ನಿಮ್ಮ ಓದಿಗೆ

Read More

ಹಬ್ಬದ ಮುಖ ತೊಳೆದು ಬಿಂದಿ ಇಡುವ ‘ಅವಳು’: ಸದಾಶಿವ ಸೊರಟೂರು ಬರಹ

ನಾನಿನ್ನು ಎದ್ದು ಆಕಳಿಸುತ್ತಾ ಕೂತಿರುವಾಗ ಈ ಹೆಣ್ಣು ಮಕ್ಕಳಿಗೆ ಏನಾಗಿದೆ? ಈ ಬದುಕು ಎಂದೂ ಕೂಡ ನಮಗೆ ಸುಸ್ತನ್ನೇ ದಯಪಾಲಿಸಿಯೇ ಇಲ್ಲವೇನೊ ಎನ್ನುವಂತೆ ಯಾಕಿಷ್ಟು ಕಳೆಕಳೆಯಾಗಿದ್ದಾರೆ. ಒಬ್ಬೊಬ್ಬರು ಒಂದೊಂದು ಹಬ್ಬದಂತೆ ಓಡಾಡುತ್ತಿದ್ದಾರೆ. ಈ ಹಬ್ಬದ ದಿನ ಒಬ್ಬೊಬ್ಬ ಹೆಣ್ಣು ಮಗಳು ನಡೆದಾಡುವ ಒಂದೊಂದು ತೇರೇನೊ ಅನಿಸುತ್ತದೆ. ಈ ಹಬ್ಬವನ್ನು, ಹಬ್ಬದ ಸಂಭ್ರಮವನ್ನು ಹೆಣ್ಣು ಮಕ್ಕಳು ವಶಪಡಿಸಿಕೊಂಡರಾ?
ಏನೆಲ್ಲದರ ನಡುವೆ ಬದುಕನ್ನೂ, ಆಗಾಗ ಬರುವ ಹಬ್ಬಗಳನ್ನೂ ಸಮನಾಗಿ ತೂಗಿಸಿಕೊಂಡು ಹೋಗುವ ಹೆಣ್ಣುಮಕ್ಕಳ ಕುರಿತು ಸದಾಶಿವ ಸೊರಟೂರು ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ