ಮನೆಯವರ ಮನಗಳಲ್ಲಿ ಸಾಯುವವರ ಕತೆ: ರೂಪಶ್ರೀ ಕಲ್ಲಿಗನೂರ್ ಬರಹ
ಜೊತೆಯಲ್ಲಿ ಯಾರೂ ಇಲ್ಲದ್ದರಿಂದ, ಅವರ ಜೋಬಿನಲ್ಲಿದ್ದ ಮೊಬೈಲ್ ತೆಗೆದುಕೊಂಡು ಅದಕ್ಕೆ ಬಂದ-ಹೋದ ಒಂದಷ್ಟು ನಂಬರ್‌ಗಳಿಗೆ ಕಾಲ್ ಮಾಡಿ ವಿಷಯ ತಿಳಿಸಿದ್ದರು. ನಂತರ ಮೃತದೇಹವನ್ನು ಊರಿಗೆ ತರಿಸಿಕೊಂಡು ಎಲ್ಲ ಕಾರ್ಯಗಳನ್ನು ಮಾಡಿ ಮನೆಗೆ ಹೋಗುವಾಗ ಯಾರ ಕಣ್ಣಲ್ಲೂ ಹನಿ ನೀರುಕಾಣಲಿಲ್ಲ… ಅವರರ್ಯಾರ ಮುಖದಲ್ಲಿ ಅಯ್ಯೋ ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡೆವಲ್ಲ ಎನ್ನುವ ನೋವು ಕಾಣಿಸುತ್ತಿರಲಿಲ್ಲ.. ಬದಲಾಗಿ ಅಕ್ಕ-ತಂಗಿಯರಾಗಿ ಎಲ್ಲರೂ ತಮ್ಮ ಕಾರ್ಯಗಳನ್ನು ಸರಿಯಾಗಿ ಮಾಡಿ-ಮುಗಿಸಿದೆವಲ್ಲ… ದೇವರಿಗೆ ನಮ್ಮ ಮೇಲೆ ಸ್ವಲ್ಪವಾದರೂ ಕರುಣೆ ಇದೆಯಪ್ಪ.. ಎನ್ನಿಸಿತ್ತು. ಅಷ್ಟೇ.
ರೂಪಶ್ರೀ ಕಲ್ಲಿಗನೂರ್ ಬರಹ ನಿಮ್ಮ ಓದಿಗೆ
