ಕೋಗಿಲೆ: ಡಾ. ಎಸ್.ವಿ. ನರಸಿಂಹನ್ ಸರಣಿ
ಯಾವುದೇ ಗೂಡು ಕಟ್ಟುವ ಗೋಜಿಲ್ಲದೆ, ಮೊಟ್ಟೆಗಳಿಗೆ ಕಾವು, ಗುಟುಕು ನೀಡದೇ, ಬೂದುಕಾಗೆ ಮತ್ತು ಕಪ್ಪುಕಾಗೆಗಳ ಗೂಡಿನಲ್ಲಿ ತಮ್ಮ ಮೊಟ್ಟೆಯನಿಟ್ಟು ಕೈತೊಳೆದುಕೊಳ್ಳುವ ಪಕ್ಷಿಗಳು. ಸಾಧಾರಣವಾಗಿ ಹೆಣ್ಣು ಕೋಗಿಲೆ ಒಂದೇ ಮೊಟ್ಟೆಯನ್ನು ಇಡುತ್ತದೆ. ಹಾಗಾಗಿ ಇವುಗಳನ್ನು ಪರಪುಟ್ಟ ಎಂದೂ ಕರೆಯುತ್ತಾರೆ! ಕಾಗೆಯದೇ ಮೊಟ್ಟೆಯ ಆಕಾರ, ಬಣ್ಣ ಆದರೆ, ತುಸು ಸಣ್ಣ ಗಾತ್ರವಿರುವ ಮೊಟ್ಟೆಗಳನ್ನು ತಾನೂ ಇಡುತ್ತದೆ. ಈ ಮೊಟ್ಟೆ, ಕಾಗೆಯ ಮೊಟ್ಟೆಯಂತೆಯೇ ತಿಳಿಹಸಿರು ಬಣ್ಣದ, ಕಂದು ಬಣ್ಣದ ಗೀರುಗಳು ಮತ್ತು ಮಚ್ಚೆಗಳಿರುತ್ತದೆ.
ಡಾ. ಎಸ್.ವಿ. ನರಸಿಂಹನ್ ಬರೆಯುವ “ಹಕ್ಕಿಪಕ್ಷಿ ಚಿತ್ರ ಸಂಪುಟ” ಸರಣಿಯಲ್ಲಿ ಕೋಗಿಲೆಯ ಕುರಿತ ಬರಹ ಇಲ್ಲಿದೆ
