Advertisement

Category: ಸರಣಿ

ಮೀನಿನ ರುಚಿ ಹಿಡಿದು ಅಲೆದಾಡಿದವರು

ಒಂದು ಪ್ರವಾಸ ಕಥನ ಹೇಗಿರಬೇಕು ಅನ್ನೋದಕ್ಕೆ ಬೆಂಚ್‌ಮಾರ್ಕ್ ಆಗಿ ನಿಲ್ಲುತ್ತದೆ ಈ ಪುಸ್ತಕ. ಆದರೆ ಇದನ್ನು ಪ್ರವಾಸ ಕಥನವೆನ್ನಲು ಸಾಧ್ಯವೇ ಅಥವಾ ಬೇರೆ ಏನಾದರೂ ಹೆಸರು ಕೊಡಬೇಕೆ ಅನ್ನುವುದು ನನಗೆ ತಿಳಿದಿಲ್ಲ. ಯಾಕೆಂದರೆ ಮೀನಿನ ಖಾದ್ಯಗಳ ಸವಿಯುವ ನೆಪದಲ್ಲಿ ಭಾರತದ ಪ್ರತಿ ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಭೇಟಿಕೊಟ್ಟು, ಆಯಾ ರಾಜ್ಯಗಳಲ್ಲಿ ಮೀನು ಅಲ್ಲಿನ ಸಂಸ್ಕೃತಿಯಲ್ಲಿ ವಹಿಸಿದ ಪಾತ್ರದ ಬಗ್ಗೆ ಲೇಖಕರು ಬಹಳ ಆಳವಾಗಿ ವಿಶ್ಲೇಷಣೆ ಮಾಡುತ್ತಾ ಸಾಗುತ್ತಾರೆ. ‘ಓದುವ ಸುಖ’ ಅಂಕಣದಲ್ಲಿ ಗಿರಿಧರ್‌ ಗುಂಜಗೋಡು ಬರಹ

Read More

ಲಂಡನ್ನನ್ನು ಪ್ರಧಾನ ಪಾತ್ರವಾಗಿಸಿದ ಕಾದಂಬರಿಕಾರ

ಕಿರಿಯ ಓದುಗರಿಂದ ಹಿಡಿದು ಹಿರಿಯ ಪುಸ್ತಕಪ್ರಿಯರ ತನಕ ಜನಪ್ರಿಯವಾದ “ಆಲಿವರ್ ಟ್ವಿಸ್ಟ್” ಹುಟ್ಟಿದ್ದು ಲಂಡನ್ ನ ಬೀದಿಗಳಿಂದಲೇ. ಲಂಡನ್ ನ ಬಡತನ ಕ್ರೌರ್ಯ ಅಪರಾಧಗಳೇ ಪ್ರಧಾನ ಭೂಮಿಕೆಯಲ್ಲಿರುವ ಕಥೆ. ಸಾಲವನ್ನು ತೀರಿಸಲಾಗದೇ ತಂದೆ ಜೈಲಿನಲ್ಲಿ ದಿನಕಳೆಯುವುದನ್ನು, ನಿರಾಶ್ರಿತ ವಸತಿಗಳಲ್ಲಿ ಅನಾಥ ಮಕ್ಕಳ ಹತಾಶೆಯನ್ನು ಬಾಲ್ಯದಲ್ಲಿ ಡಿಕನ್ಸ್ ಕಂಡವನು. ಖ್ಯಾತ ಕಾದಂಬರಿಕಾರ ಡಿಕನ್ಸ್‌ನ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

Read More

ನೆತ್ತರ ಒಗಟುಗಳ ಬಿಡಿಸುವುದು ಕಷ್ಟ

ಆ ಹಂದಿಗಳಿಗೆ ತಿಂಗಳಿಗಾಗುವಷ್ಟು ಆಹಾರವನ್ನು ಅಪ್ಪ ಹಿತ್ತಿಲ ಸೌದೆ ಮನೆಯಲ್ಲಿ ತರಿಸಿಇಟ್ಟಿರುತ್ತಿದ್ದ. ಅಷ್ಟೇ ಅವನ ಕೆಲಸ. ಆಗಾಗ ನಾನೇ ಅವುಗಳ ಎಲ್ಲ ಕೆಲಸ ಮಾಡುತ್ತಿದ್ದುದು. ಅಪ್ಪ ಬಂದು ನೋಡಿದ ಕೂಡಲೆ ಗಕ್ಕನೆ ಎದ್ದು ಮೂಲೆ ಸೇರಿ ಭಯದಿಂದ ನೋಡುತ್ತಿದ್ದವು. ಯಾಕೆ ಇವು ನನ್ನಂತೆಯೇ ಬೆದರಿ ನನ್ನ ಬಳಿ ಬಂದು ಗಾಬರಿಯಾಗುತ್ತವಲ್ಲಾ… ಹೇಗೆ ಗೊತ್ತಾಯಿತು ಈ ಹಂದಿಗಳಿಗೆ ಅಪ್ಪನ ಅವತಾರಗಳು ಎಂದು ಅಚ್ಚರಿಯಾಗುತ್ತಿತ್ತು. ಮೊಗಳ್ಳಿ ಗಣೇಶ್‍ ಬರೆಯುವ  ನನ್ನ ಅನಂತ ಅಸ್ಪೃಶ್ಯ ಆಕಾಶ ಸರಣಿಯ ಹೊಸ ಕಂತು ನಿಮ್ಮ ಓದಿಗಾಗಿ. 

Read More

‘ಯಕ್ಷಗಾನೀಯವಲ್ಲದ್ದು ಔಚಿತ್ಯವೂ ಅಲ್ಲ’

ಯಕ್ಷಗಾನದ ಆವರಣದಲ್ಲೇ ಹುಟ್ಟಿ ಬೆಳೆದ ಜಿ ಎಸ್ ಭಟ್ಟರು, ಗುಂಡುಬಾಳದ ಆಟ ನೋಡುತ್ತಲೇ ಬೆಳೆದವರು. ಅವರ ಯೌವನ ಕಾಲದಲ್ಲಿ ನಾಟಕದ ಬಗ್ಗೆಯು ಆಸಕ್ತಿ ವಹಿಸಿದ್ದರು. ಗುಂಡುಬಾಳದ ಹರಕೆ ಆಟವು ಯಕ್ಷಗಾನ ಕಲಾ ಪ್ರಕಾರದಲ್ಲೇ ವಿಶಿಷ್ಟವಾದ ಮಾದರಿ. ಅಲ್ಲಿ ದೇವರೇ ಪ್ರೇಕ್ಷಕರು. ಹಾಗಾದ್ದರಿಂದಲೇ ಅದು ಹೊಸ ನಡೆಯ ಪ್ರಯೋಗಗಳಿಗೆ…
“ಯಕ್ಷಾರ್ಥ ಚಿಂತಾಮಣಿ”ಯಲ್ಲಿ ಜಿ ಎಸ್ ಭಟ್ಟರ ಜೊತೆಗೆ ತಾವು ನಡೆಸಿದ ಸಂದರ್ಶನವನ್ನು ಬರೆದಿದ್ದಾರೆ ಕೃತಿ ಆರ್‌ ಪುರಪ್ಪೇಮನೆ

Read More

ಗಣಿತವೊಂದು ಭಾಷೆಯೆಂಬ ಹೊಸ ದೃಷ್ಟಿ

ನಾವು ಬಳಸುವ ಸಂಖ್ಯೆಗಳು, ವಿಜ್ಞಾನದಲ್ಲಿ ಬರುವ ಅಳತೆಯ ಮಾನಗಳು, ಇತಿಹಾಸದ ಇಸವಿಗಳು, ಸಮಯ, ಕಾಲಗಣನೆ ಮೊದಲಾದ ಯಾವುದೇ ಸಂದರ್ಭವನ್ನು ತೆಗೆದುಕೊಳ್ಳಿ. ಅಲ್ಲಿ ಗಣಿತ ಎಂಬ ಭಾಷೆಯನ್ನು ಬಳಸದೇ ಇದ್ದರೆ ಸಂದರ್ಭವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಗಣಿತ ಎಂಬ ಭಾಷೆಗೆ ಅಂಕೆಗಳೇ ಅಕ್ಷರಗಳು. ಕೂಡುವುದು, ಕಳೆಯುವುದು, ಗುಣಿಸುವುದು, ಭಾಗಿಸುವುದು ಅದರ ವ್ಯಾಕರಣ ಎಂದು ಒಮ್ಮೆ ಯೋಚಿಸಿ ನೋಡು ಆಗ ನೀನು ಗಣಿತ ವಿಷಯವನ್ನು ನೋಡುವ ದಿಕ್ಕೇ ಬದಲಾಗುತ್ತದೆ.
‘ಗಣಿತ ಮೇಷ್ಟರ ಶಾಲಾ ಡೈರಿ’ಯಲ್ಲಿ ಅರವಿಂದ ಕುಡ್ಲ ಇಂದಿನ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ