Advertisement

Category: ಸರಣಿ

ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ

ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ‌ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಗುರುತರ ಗುರಿಯೆಡೆಗೆ ಓಡಲಿ ಜಮೈಕಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಲಿಂಗಾಯತರು ಮತ್ತು ಲಿಂಗಾಯತ: ರಂಜಾನ್ ದರ್ಗಾ ಸರಣಿ

ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಸ್ಫೋಟಕ್ಕೆ ಬಲಿಯಾದ ಬದುಕು..: ಡಾ. ಎಂ. ವೆಂಕಟಸ್ವಾಮಿ ಕಾದಂಬರಿ

ಸೆಲ್ವಮ್ ದೇಹದ ಹತ್ತಿರ ಕನಕ, ಮಣಿ ಮತ್ತು ಸುಮತಿ ನಿಂತುಕೊಂಡು ರೋದನೆ ಮಾಡುತ್ತಿದ್ದರು. ಸಾರ್ವಜನಿಕರು, ಕಾರ್ಮಿಕರು, ಅಧಿಕಾರಿಗಳು ಎಲ್ಲರೂ ಬಂದು ಸತ್ತವರಿಗೆ ಹೂಮಾಲೆಗಳನ್ನು ಅರ್ಪಿಸಿದರು. ಹೂಮಾಲೆಗಳು ಎತ್ತಿನ ಬಂಡಿಗಳು ತುಂಬುವಷ್ಟು ಬಿದ್ದಿದ್ದವು. ಕೊನೆಗೆ ಐದೂ ಮೃತ ದೇಹಗಳನ್ನು ಮೂರು ವ್ಯಾನ್‌ಗಳಲ್ಲಿ ಹಾಕಿಕೊಂಡು ಕುಪ್ಪಂ ರಸ್ತೆಯಲ್ಲಿ ರೋಜರಸ್ ಕ್ಯಾಂಪ್ ಹತ್ತಿರ ಇರುವ ಗಣಿ ಕಾರ್ಮಿಕರ ಸಮಾಧಿ ಕಡೆಗೆ ಮೆರವಣಿಗೆಯಲ್ಲಿ ಹೋಗಿ ಗೌರವಪೂರ್ವಕವಾಗಿ ಅವರವರ ಕುಟುಂಬಗಳಿದ್ದ ಸಮಾಧಿಗಳ ಮಧ್ಯೆ ಸಮಾಧಿ ಮಾಡಲಾಯಿತು.
ಡಾ. ಎಂ. ವೆಂಕಟಸ್ವಾಮಿ ಬರೆಯುವ “ಒಂದು ಎಳೆ ಬಂಗಾರದ ಕಥೆ” ಕಾದಂಬರಿ

Read More

ವ್ಯಕ್ತಿತ್ವಗಳ ಮುಖವಾಡ ಕಳಚುವ ಅವಳ ಕಣ್ಣಿನ ಕಥೆ: ರಾಮ್‌ಪ್ರಕಾಶ್‌ ರೈ ಸರಣಿ

ಇಲ್ಲಿ ಕ್ರೈಮ್ ಇದ್ದರೂ, ಅನ್ಯಾಯವಿದ್ದರೂ ಸಾಮಾನ್ಯ ಮಹಿಳೆಯೊಬ್ಬಳು ತನ್ನ ಯುಕ್ತಿಯೊಂದರ ಶಕ್ತಿಯಿಂದ ಆರಕ್ಷಕರು, ಕ್ರಮಬದ್ಧ ತನಿಖೆ ಎಲ್ಲವ ಮೀರಿಸಿ ಬೇಧಿಸುವ ಹಾದಿಯೇ ಬಲು ರೋಮಾಂಚಕ. ಕಥನ ಕಟ್ಟುವಿಕೆಯೂ ಈ ದಾರಿಗೆ ಹಾದಿಗಲ್ಲಿನಂತೆ ಪೂರಕವಾಗಿಯೇ ಇದೆ. ಅದು ಮಾತ್ರವಲ್ಲದೆ, ಪ್ರಿಯಾಳನ್ನು ಸೂಪರ್ ಹ್ಯೂಮನ್ ಎಂದೋ, ಅತಿಮಾನುಷ ಶಕ್ತಿ ಉಳ್ಳವಳು ಎಂಬಂತೆ ಬಿಂಬಿಸದೆ ಸಾಮಾನ್ಯ ಮಹಿಳೆಯೊಬ್ಬಳಂತೆ ತೋರಿಸಿದ್ದು, ಕಥನಕ್ಕೆ ಪ್ರಾಮಾಣಿಕ ಸ್ಪರ್ಶವನ್ನು ನೀಡಿದೆ ಮತ್ತು ಅದು ತೀರಾ ನೈಜವಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ