Advertisement

Category: ಸರಣಿ

ಕನಸು ಬಿತ್ತಿ ನನಸಾಗಿಸಿದ ಕುಸುಮಕ್ಕ: ರಂಜಾನ್‌ ದರ್ಗಾ ಸರಣಿ

ಅವರು ಉತ್ತರ ಕನ್ನಡದ ಎಲ್ಲೆಂದರಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಒಂದು ಕಡೆ ಮಹಿಳೆಯರ ಸಂಘಟನೆ. ಇನ್ನೊಂದು ಕಡೆ ಸಾಕ್ಷರತಾ ಸಭೆ, ಮತ್ತೊಂದು ಕಡೆ ದೇಶೀಯ ಔಷಧಿಗಳ ಮಹತ್ವದ ಕುರಿತು ಮಾತನಾಡುವುದು, ಇನ್ನೊಂದು ಕಡೆ ಸರಳ ಜೀವನ ವಿಧಾನದ ಬಗ್ಗೆ ತಿಳಿ ಹೇಳುವುದು. ಹೀಗೆ ನಮ್ಮ ಕುಸುಮಕ್ಕನ ಅವತಾರಗಳು ಬಹಳವಾಗಿದ್ದವು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 91ನೇ ಕಂತು ನಿಮ್ಮ ಓದಿಗೆ

Read More

ದೊಡ್ಡಬೊಮ್ಮಸಂದ್ರ ಪುರ ಪ್ರವೇಶ: ಎಚ್. ಗೋಪಾಲಕೃಷ್ಣ ಸರಣಿ

ಅಲ್ಲೊಂದು ಮೂಲೆಯಲ್ಲಿ ತೆಂಗಿನ ತಡಿಕೆ, ಸೊಂಟದಷ್ಟು ಎತ್ತರ. ಒಳಗಡೆ ಒಂದು ಗಂಡಸು. ಉರಿಯುತ್ತಿರುವ ಸೀಮೆ ಎಣ್ಣೆ ಸ್ಟೋವು. ಆಗ ಒಂದು ಕಡೆ ಸೀಮೆ ಎಣ್ಣೆ ತುಂಬಲು ಒಂದು ಸಿಲಿಂಡರ್ ಆಕಾರದ ಡಬ್ಬ ಮತ್ತು ಅದಕ್ಕೆ ಅಂಟಿದ ಹಾಗೆ ಸೀಮೆ ಎಣ್ಣೆ ಉರಿಯ ಬರ್ನರ್ ಇರುವ ಒಲೆ ತುಂಬಾ ಪಾಪ್ಯುಲರ್. ಅದರ ಮೇಲೆ ಒಂದು ಬಾಂಡಲಿ ಮತ್ತು ಕುದಿ ಎಣ್ಣೆ ಒಳಗೆ ಬೋಂಡಾ. ಒಬ್ಬ ಸ್ಟೋವಿನ ಆಕಡೆ ಕೂತು ಕೈಯಲ್ಲಿ ಪುಟ್ಟ ಜಾಲರಿ ಸೌಟು ಹಿಡಿದು ಕೂತು ಬೋಂಡಾ ಕರೀತಾ ಕೂತಿದ್ದಾನೆ!
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆಂಟನೆಯ ಕಂತು ನಿಮ್ಮ ಓದಿಗೆ

Read More

ಫ್ರೂಟ್ ಕಟರ್ ಕರುಣಿಸಿದ ದಾನಿ ಪಟ್ಟ!: ಪೂರ್ಣೇಶ್‌ ಮತ್ತಾವರ ಸರಣಿ

ಕೆಲವರು ಕಬ್ಬಿಣದ ರಾಡ್‌ನ ಒಂದು‌ ತುದಿಗೆ ವೈರ್ ಕಟ್ಟಿ ಮತ್ತೊಂದು ತುದಿಯನ್ನು ನೀರಲ್ಲಿ ಬಿಟ್ಟು ಪರ್ಯಾಯ ವಾಟರ್ ಹೀಟರ್ ಮಾಡಿಕೊಂಡರೆ ಮತ್ತೆ ಕೆಲವರು ಪೆನ್ಸಿಲ್‌ನ ತುದಿಗೆ ಸೂಪರ್ ಮ್ಯಾಕ್ಸ್ ಬ್ಲೇಡ್ ಸಿಕ್ಕಿಸಿ ಪರ್ಯಾಯ ರೆಡಿ ಶೇವರ್ ಮಾಡಿಕೊಂಡು ಬಿಡುತ್ತಿದ್ದರು. ಮುಂದುವರೆದು, ಐರನ್ ಬಾಕ್ಸನ್ನು ಕಾಯಿಸಿ ಅದರ ಮೇಲೆ ಮೊಟ್ಟೆ ಹೊಯ್ದು ಅದನ್ನು ಪರ್ಯಾಯ ಆಮ್ಲೆಟ್ ಪ್ಯಾನ್ ಮಾಡ ಹೊರಟ ಮಹನೀಯರೂ ಇದ್ದರು.
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಏಳನೆಯ ಬರಹ

Read More

ನಾಲ್ಗೆ ಚಪ್ಲ ತೀರಿಸ್ತಿದ್ದ ತಿಂಡಿಗ್ಳು: ಸುಮಾ ಸತೀಶ್ ಸರಣಿ

ಹಬ್ದಾಗೆ ಒಬ್ಬಟ್ಟು‌ ಮಾಡ್ದಾಗೆಲ್ಲಾ‌ ಒಬ್ಬಟ್ಟಿನ್ ಸಾರೂ ಮಾಡ್ತಿದ್ರು. ಒಬ್ಬಟ್ ಎಂಗೆ ಪಿರೂತೀನೋ ಆ ಸಾರೂ ಆಟೇಯಾ. ಒಬ್ಬಟ್ಟು ಸೀಗಿರ್ತಿತ್ತಲ್ಲ, ಅದುಕ್ಕೆ ನಮ್ಮನ್ಯಾಗೆ ಎಲ್ರೂವೇ ಸಾರು ಹಾಕ್ಕಂಡು ತಿನ್ನಾರು.‌ ನಂಗೇ ಮಾತ್ರ ಅದು‌ ಹಿಡುಸ್ತಿರ್ಲಿಲ್ಲ. ನಾನು ಹಾಲೂ ತುಪ್ಪ ಹಾಕ್ಕಂಡೇ ತಿಂಬ್ತಿದ್ದೆ.‌‌
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಆಗಿನ ಕಾಲದ ತಿಂಡಿಗಳ ಕುರಿತ ಬರಹ ನಿಮ್ಮ ಓದಿಗೆ

Read More

ವಿಭಜನೆ, ಅಸ್ತಿತ್ವವಾದ ಮತ್ತು ಪೋಲಂಡ್: ಡಾ. ವಿಶ್ವನಾಥ ಎನ್ ನೇರಳಕಟ್ಟೆ ಸರಣಿ

ಈಗಿನ ಕಾಲಘಟ್ಟದಲ್ಲಿ ಪೋಲಂಡ್‌ನ ಸಾಂಸ್ಕೃತಿಕ ಬಹುತ್ವ ಕ್ಷೀಣಿಸತೊಡಗಿದೆ. ನಗರಕೇಂದ್ರಿತವಾದ ಸಂಸ್ಕೃತಿಯೇ ಪ್ರಾಬಲ್ಯ ಮೆರೆಯುತ್ತಾ, ಎಲ್ಲರ ಜೀವನ ವಿಧಾನವನ್ನು ಅದೇ ಬಗೆಯಲ್ಲಿ ರೂಪಿಸತೊಡಗಿದೆ. ಪೋಲಂಡ್‌ನ ಆಧುನಿಕ ಮಾಧ್ಯಮಗಳೂ ಸಹ ಏಕರೂಪದ ಸಂಸ್ಕೃತಿಯೆಡೆಗೆ ಒತ್ತು ನೀಡುತ್ತಿವೆ. ಪೋಲಂಡ್‌ನ ಪರಂಪರೆಯನ್ನು ಸಂರಕ್ಷಿಸಬೇಕೆಂಬ ಮನೋಭಾವದ ಕೆಲವರು ಜಾನಪದ ಸಂಸ್ಕೃತಿಯಲ್ಲಿ ಕಂಡುಬರುವ ಧಾರ್ಮಿಕ ಸಂಗತಿಗಳ ಕಡೆಗೆ ಗಮನಹರಿಸುತ್ತಿದ್ದಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ ಪೋಲಂಡ್‌ ದೇಶದ ಕುರಿತ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ