Advertisement

Category: ಸಾಹಿತ್ಯ

ನನ್ನ ನೆಲೆಯಾದರೂ ಯಾವುದು?

ಸುಕನ್ಯಾಳಿಗೆ ಅರವಿಂದನ ಇಂಥ ಮಾತುಗಳು, ನಿರ್ಲಿಪ್ತ ಸ್ಥಿತಿ ಕೆಲವೊಮ್ಮೆ ಬಹಳ ರೇಜಿಗೆ ತರಿಸಿಬಿಡುತ್ತಿತ್ತು. ಸಮಸ್ಯೆಗಳು ಬರುವಾಗಲೇ ಪರಿಹಾರವನ್ನೂ ತಮ್ಮ ಜತೆಗೇ ತಂದಿರುತ್ತವೆ ಎಂಬುದು ಅವನ ಯಾವತ್ತಿನ ನಂಬಿಕೆ. ಪರಿಹಾರ ಅನ್ನೋದು ಇಲ್ಲದಿದ್ದರೆ ಅದನ್ನು ಸಮಸ್ಯೆಯೇ ಅಲ್ಲ ಅನ್ನುತ್ತಿದ್ದ, ಆತ. ‘ಅನ್ನ ಮಾಡೊಕೆ ಅಕ್ಕಿ ಇಲ್ಲ ಅಂದರೆ ಅಂಗಡೀಗೆ ಹೋಗಿ ಅಕ್ಕಿ ತರಬೇಕು. ಅಕ್ಕಿಯೇ ಸಿಗದೇ ಇರೋ ಸಂದರ್ಭ ಬಂದಲ್ಲಿ ಅನ್ನ ಮಾಡುವ ಯೋಚನೆಯನ್ನೇ ಬಿಟ್ಟುಬಿಡಬೇಕು. ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ನಾಲ್ಕನೆಯ ಕಂತು ನಿಮ್ಮ ಓದಿಗಾಗಿ

Read More

ಡಾ. ಸುಭಾಷ್ ಪಟ್ಟಾಜೆ ಬರೆದ ಈ ಭಾನುವಾರದ ಕತೆ

ತುಸು ಹೊತ್ತಿನ ಬಳಿಕ ರಾತ್ರಿಯ ನೀರವವನ್ನು ಭೇದಿಸಿಕೊಂಡು ‘ಧಡ್’ ಎಂದು ಏನೋ ಬಿದ್ದ ಸದ್ದು. ಬೆನ್ನಿಗೇ ಕ್ಷೀಣವಾಗಿ, ಎದೆಯನ್ನೇ ಕೊರೆಯುವಂಥ ಬಿಕ್ಕಳಿಕೆ ಕೇಳಿಸಿದಾಗ ದಡಕ್ಕನೆ ಎದ್ದು ಕುಳಿತೆ. ಏನೂ ಅರ್ಥವಾಗಲಿಲ್ಲ. ಕಾಲುಗಳನ್ನು ನೆಲಕ್ಕಪ್ಪಳಿಸುತ್ತಾ ಹೊರಗಿಳಿದು ನಡೆಯುತ್ತಿರುವ ಅಣ್ಣನನ್ನು ಕಂಡಾಗ ಮನೆಯಲ್ಲಿ ಬೀಡುಬಿಟ್ಟಿದ್ದ ವಿಷಣ್ಣ ಭಾವ ನನ್ನೊಳಗೂ ತುಂಬತೊಡಗಿತು. ಹೊಸ ರವಿಕೆಯನ್ನು ಕಂಡ ಅಣ್ಣ ‘ಯಾರು ತಂದ್ಕೊಟ್ಟದ್ದು?’ ಎಂದು ಕೇಳಿರಬೇಕು. ಡಾ. ಸುಭಾಷ್‌ ಪಟ್ಟಾಜೆ ಬರೆದ ಕತೆ “ಗತಿ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಹೌದು.. ಇಡೀ ಜಗತ್ತೇ ಸ್ಮಾರ್ಟಾಗ್ತಾ ಇದೆ!

ಸೂರ್ಯ ಕೆಂಪಗಾಗುತ್ತಿದ್ದ. ಹಿಂದಿನ ಸುಮಾರು ಎರಡೂವರೆಕೆರೆ ಜಾಗದಲ್ಲಿ ಸಪಾಟಾಗಿಸಿದ ಹುಲ್ಲು. ಋತುಮಾನಕ್ಕನುಗುಣವಾಗಿ ತನ್ನ ಬಣ್ಣವನ್ನು ಕಳೆದುಕೊಳ್ಳುತ್ತಿತ್ತು. ಅದರ ಹಿಂದೆ ನಿಂತ ನೂರೈವತ್ತು ಮೇಪಲ್ ಮರಗಳು. ಎಲ್ಲವೂ ಎಲೆಗಳನ್ನು ಕಳಕೊಳ್ಳುತ್ತಾ ಮುಂಬರುವ ಹಿಮವನ್ನು ಎದುರಿಸಲು ಬತ್ತಲಾಗುತ್ತಿದ್ದವು. ಕೆಳಗೆ ಬಿದ್ದ ಹಣ್ಣೆಲೆಗಳ ಮೇಲಿನ ಸಂಜೆಯ ತೇವ ವಾತಾವರಣಕ್ಕೆ ಕೊಟ್ಟಿದ್ದ ಒಂದು ಸಿಹಿಯಾದ, ಒಗರಾದ ವಾಸನೆ ಸನ್‌ರೂಮಿನ ಕಿಟಕಿಯ ಸೀಲುಗಳ ಮೂಲಕ ಮನೆಯೊಳಗೆ ಹಣಿಕಿಹಾಕಿತ್ತು.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್‌ ಕುಂಬಾರ್ ಬರೆದ ಕತೆ

ಪೂಜೇರಿ ಸಂಗಪ್ಪನ ಸಾವಿನಿಂದಾಗಿ ಕಂಗೆಟ್ಟಿದ್ದ ಕಪಿಲೆ, ಚಪ್ಪರದಿಂದ ಎದ್ದು ಹೋಗಿ ಆತನ ಮನೆಯ ಮುಂದೆ ನಿಂತಿತು. ಆಗ, ಹೊರಗೆ ಮನೆ ಮುಂದೆ ಗದಕಟ್ಟು ಕಟ್ಟಿ ಕೂಡ್ರಿಸಿದ್ದ ಪೂಜೇರಿ ಸಂಗಪ್ಪನ ಹೆಣವನ್ನು ಕಂಡು, ದುಃಖ ತಡೆಯಲಾಗದೆ ನೆರೆದ ಜನರ ನಡುಕ ತೂರಿಕೊಂಡು ಮುಂದೆ ಹೋಗಿ ಆತನನ್ನು ಮೂಸಿ ನೋಡಿ ತನ್ನ ಮರುಕ ವ್ಯಕ್ತಪಡಿಸಿತು. ಆಮೇಲೆ, ಅದು ಹಂಗೇ ಹಿಂದೆ ಸರಿದು ಜನರತ್ತ ಬಂದು ನಿಂತಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಲ್ಲೇಶ್‌ ಕುಂಬಾರ ಬರೆದ ಕತೆ “ಕಪಿಲೆ” ನಿಮ್ಮ ಈ ಭಾನುವಾರದ ಓದಿಗೆ

Read More

ಇಲ್ಲಿ ಎಲ್ಲವೂ ಸರಿ ಇದ್ಯಾ…?

ವಿನಯ ಅಲಿಶಾಳಿಗೆ ಪ್ರಪೋಸ್ ಮಾಡಿದ ಎಂಬ ಸುದ್ದಿ ಕೇಳಿದ ಮೂರು ದಿನಕ್ಕೇ ಅರವಿಂದನಿಗೆ ಲಘು ಹೃದಯಾಘಾತವಾಗಿತ್ತು. ಶಿಕಾಗೋದಿಂದ ಓಡಿಬಂದಿದ್ದರು, ವಿನಯ ಮತ್ತು ಅಲಿಶಾ ಇಬ್ಬರೂ. ಮನಸ್ಸಿನ ವ್ಯಾಪಾರವೇ ವಿಚಿತ್ರ. ವಿನಯ ಅಲಿಶಾಳನ್ನು ಮದುವೆ ಮಾಡಿಕೊಳ್ಳುವುದು ಗ್ಯಾರಂಟಿ ಎಂದು ಗೊತ್ತಿದ್ದರೂ ವಿನಯನ ಪ್ರಪೋಸಲ್ಲಿಗೂ, ಅರವಿಂದನ ಹಾರ್ಟ್ ಅಟ್ಯಾಕಿಗೂ ಕಾರ್ಯಕಾರಣ ಸಂಬಂಧ ಹುಡುಕಲು ವೈದ್ಯಕೀಯ ಪುರಾವೆಗಳ ಸಾಥ್ ಕೇಳಿದ್ದಳು, ಸುಕನ್ಯಾ.
ಗುರುಪ್ರಸಾದ್‌ ಕಾಗಿನೆಲೆ ಬರೆದ ನೀಳ್ಗತೆ “ಥ್ಯಾಂಕ್ಸ್‌ಗಿವಿಂಗ್”ನ ಎರಡನೆಯ ಕಂತು ನಿಮ್ಮ ಓದಿಗಾಗಿ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ