Advertisement

Category: ಸಾಹಿತ್ಯ

ಮಂಟೇದರನೊಕ್ಕಲು ಲೋಕರೂಢಿಗೊಳಗಾದುದು: ಮಂಜುನಾಥ್ ಲತಾ ಬರೆದ ಕತೆ

“‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ…”

Read More

ಅಕ್ಷತಾ ಕೃಷ್ಣಮೂರ್ತಿ ಪುಸ್ತಕಕ್ಕೆ ಪ್ರೊ.ಕಾಳೇಗೌಡ ನಾಗವಾರ ಬರೆದ ಮುನ್ನುಡಿ

“ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ …”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಕೆ.ಕೆ. ಶೆಟ್ಟಿ ಬರೆದ ಕತೆ

“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…”

Read More

ವಿ.ಆರ್. ಕಾರ್ಪೆಂಟರ್ ಕಥಾ ಸಂಕಲನ ಕುರಿತು ಶ್ರೀದೇವಿ ಕೆರೆಮನೆ ಬರಹ

“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.”

Read More

ಬೆಂಗಳೂರಲ್ಲಿ ಕಳೆದುಹೋದ ಸಿಂಹ: ಶಂಕರಪ್ಪ ಕೆ.ಪಿ. ಬರೆದ ಕತೆ

“ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ