Advertisement

Category: ಸಾಹಿತ್ಯ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ

ಕಾಲ ಕೈಕೊಡುತ್ತದೆ ಎಂದು ಸದಾ ಯೋಚಿಸುತ್ತಿದ್ದ ಹರಿಶ್ಚಂದ್ರನಿಗೆ ತನ್ನ ಮಗಳ ಹೆಸರು ‘ಸಮಯ’ವೆಂದು ತಿಳಿದಾಗ ಆಶ್ಚರ್ಯವಾಯಿತು. ಅಮೃತಾ ನೆನಪಾದಳು. ಎಲ್ಲಿದ್ದಾಳೆ? ಸಮಯಳ ಜೊತೆ ಇದ್ದಾಳೆಯೆ? ಸಮಯಳಿಗೆ ಹೇಗೆ ಗೊತ್ತಾಯಿತು ತನ್ನ ವಿಳಾಸ ಫೋನ್ ನಂಬರ್? ಅಮೃತಾ ಹೇಳಿರಬಹುದೆ? ತನ್ನಿಂದ ವಂಚಿತಳಾದವಳು. ಅವಳು ಹೇಳಿರುವುದು ಅಸಾಧ್ಯ ಎಂಬುದು ಖಾತ್ರಿ. ಒಂದುಕ್ಷಣ ಹರಿಶ್ಚಂದ್ರನ ಮುಖ ಕಪ್ಪಿಟ್ಟಿತು. ಮುಸ್ಸಂಜೆಯ ಕೆಂಪು ಬೆಳಕು ಕಿಟಕಿ ಪ್ರವೇಶಿಸಿತು.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಎಂ.ಎನ್. ವ್ಯಾಸರಾವ್ ಬರೆದ ಕತೆ “ಟಿಕ್ ಟಿಕ್ ಟಿಕ್ ಟಿಕ್ ಕೈಕೊಟ್ಟ ಗಡಿಯಾರ”

Read More

ಆನಂದ ಈ. ಕುಂಚನೂರ ಬರೆದ ಈ ಭಾನುವಾರದ ಕತೆ

ನಿದ್ರೆಯಿಲ್ಲದೆ ಬಳಲಿಕೆಯಲ್ಲಿ ಅಸಾಧ್ಯ ಆಕಳಿಕೆ ಬರುತ್ತಿದ್ದರೂ ಕಣ್ರೆಪ್ಪೆ ಒಂದನ್ನೊಂದು ತಾಕುತ್ತಿರಲಿಲ್ಲ. ಯಾವಾಗಲೂ ನುಂಗುವ ನಿದ್ದೆ ಗುಳಿಗೆ ಕೂಡ ಈಗೀಗ ಕೆಲಸ ಮಾಡುತ್ತಿಲ್ಲ. ಹೀಗೆ ಎಲ್ಲ ಅಸಂಖ್ಯ ಕಾರ್ಮೋಡಗಳ ಮಧ್ಯೆ ಬೆಳ್ಳಿರೇಖೆಯೊಂದು ಮಿಂಚಿದಂತಾಗಿ ಗೆಲುವಾದರು. ತಮಗೆ ಹೊಳೆದ ವಿಚಾರಕ್ಕೆ ಖುಷಿಯಾಯಿತು.
ಆನಂದ ಈ. ಕುಂಚನೂರ ಹೊಸ ಕಥಾ ಸಂಕಲನ “ನಿರೂಪ”ದ ಒಂದು ಕತೆ “ನಕ್ಷತ್ರ ದಾನ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ

ಅದರೊಳಗೇನಿದೆ ಎನ್ನುವುದು ಒಳಹೋದವರಿಗೆ ಬಿಟ್ಟರೆ ಬೇರೆ ಯಾರಿಗೂ ಗೊತ್ತಿಲ್ಲ. ಒಳಗೆ ಹೋದವರು ಎಬ್ಬಿಸುತ್ತಿದ್ದ ನಗು ಹೊರಗೆ ಕೂತ ಹೊಸಬರಲ್ಲಿ ಮೂಡಿಸುತ್ತಿದ್ದದ್ದು ವಿಸ್ಮಯವನ್ನು, ಕುತೂಹಲವನ್ನು. ನಟರಾಜ ಕೊಟ್ಟಿದ್ದ ಐಡಿಯಾ ಫಲ ಕೊಡುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಮಹಾನಗರದ ಮರಿಮೊಮ್ಮಗನಂತಿತ್ತು ಭರತಪುರ. ಅಂಥ ಪುಟ್ಟ ಪಟ್ಟಣದ ಜನರನ್ನಷ್ಟೇ ನಗಿಸಿ, ಇದ್ದ ಸಾಲವನ್ನು ಏಳೆಂಟು ತಿಂಗಳುಗಳಲ್ಲಿಯೇ ತೀರಿಸಿ, ಸ್ಮೈಲು ಬೀರಿದ್ದ ಇಸ್ಮಾಯಿಲ.
ಡಾ. ವಿಶ್ವನಾಥ ಎನ್ ನೇರಳಕಟ್ಟೆ ಬರೆದ ಈ ಭಾನುವಾರದ ಕತೆ “ಇಸ್ಮಾಯಿಲನ ಸ್ಮೈಲಿಂಗು ಮಹಲು”

Read More

ತಾಂತ್ರಿಕ ಕವಿಯ ಮಾಂತ್ರಿಕ ಕವಿತೆಗಳು….: ದೇವರಾಜ್‌ ಹುಣಸಿಕಟ್ಟಿ ಬರಹ

ಪ್ರೇಮ, ಪ್ರೇಮ ವೈಫಲ್ಯದ ಕುರಿತು ಕವಿತೆಗಳು ನಿಮಗೆ ಈ ಸಂಕಲದಲ್ಲಿ ಢಾಳವಾಗಿಯೇ ಸಿಗುತ್ತವೆ. ಉದಾಹರಣೆಗೆ “ಕಾಳಜಿ”, ಕಟ್ಟಳೆಯೊಳಗೆ “ಗೋರಿ ಅಲ್ಲ ರೆಂಜಿ ಗಿಡ” ಹೀಗೆ ಅನೇಕ ಕವಿತೆಗಳು ನಿಮ್ಮ ವೈಯುಕ್ತಿಕ ಪ್ರೇಮ, ವೈಫಲ್ಯದ ನೋವು ಸುಖ ಎರಡಕ್ಕೂ ಜೊತೆಯಾಗಿ ರಮಿಸುತ್ತವೆ. ಹೀಗೆ ಕವಿಯೊಬ್ಬ ಆಪ್ತವಾಗುತ್ತಲೇ ಹೋಗುತ್ತಾನೆ. ಇಲ್ಲಿ ವೈನು, ವೇಶ್ಯೆ, ಮೆಟ್ಟು, ಪದ, ಕವಿ, ಕವಿತೆ ಹೀಗೆ ಅನೇಕ ವಿಷಯಗಳ ಕವಿತೆಗಳು ನಿಮ್ಮನ್ನ ಮಾಂತ್ರಿಕ ಸ್ಪರ್ಶದಿಂದ ಎದೆ ನೆಲವ ತೇವಗೊಳಿಸದೇ ಇರುವುದಿಲ್ಲ.
ಸದಾಶಿವ ಸೊರಟೂರು ಅವರ “ಗಾಯಗೊಂಡ ಸಾಲುಗಳು” ಕವನ ಸಂಕಲನದ ಕುರಿತು ದೇವರಾಜ್‌ ಹುಣಸಿಕಟ್ಟಿ ಬರಹ, ನಿಮ್ಮ ಓದಿಗೆ

Read More

ಬಾನು ಮುಷ್ತಾಕ್ ಕತೆಗಳ ಅನುವಾದದ ಬಗ್ಗೆ ಕೆಲವು ಟಿಪ್ಪಣಿಗಳು: ಬಿ.ವಿ.ರಾಮಪ್ರಸಾದ್ ಬರಹ

ದೀಪಾ ಅವರ ರೀತಿಯಲ್ಲೇ ಬಾನುರವರು ಕೆಲವು ಉರ್ದು ಪದಗಳನ್ನು ಯಾವುದೇ ವಿವರಣೆ ಇಲ್ಲದೇ ಅನುವಾದ ಮಾಡದೇ ಬಳಸುತ್ತಾರೆ. ಉದಾಹರಣೆಗೆ ಸಂಬಂಧ ಸೂಚಕ ಪದಗಳಾದ ಭಾಬಿ, ಅಮ್ಮಿ, ಆಪ, ಬೇಟಾ, ಅಮ್ಮಿಜಾನ್, ದಾದಿಮಾ. ಆದರೆ ಸಾಕಷ್ಟು ಬಾರಿ ಇವುಗಳ ಬದಲು ಅತ್ತಿಗೆ, ಅಮ್ಮ, ತಂದೆ, ಅನ್ನುವ ಕನ್ನಡ ಪದಗಳನ್ನೇ ಬಳಸಿದ್ದಾರೆ. ಇಸ್ಲಾಮ್‌ಗೆ ಸಂಬಂಧಿಸಿದ ಆಜಾನ್, ಮುತವಲ್ಲಿ, ಕಫನ್, ಗುಸುರ್, ದಫನ್, ಖಬರ್‌ಸ್ತಾನ್, ಇವುಗಳೂ ಕೂಡ ವಿವರಣೆಯಿಲ್ಲದೆ ಕೆಲವೊಮ್ಮೆ ಉರ್ದು ಮೂಲ ರೂಪದಲ್ಲಿ, ಕೆಲವೊಮ್ಮೆ ಉರ್ದು ಮೂಲರೂಪದ ಜೊತೆಗೆ ಕನ್ನಡದ ವಿವರಣೆಯೊಂದಿಗೆ ಬರುತ್ತವೆ.
ಬಾನು ಮುಷ್ತಾಕ್ ಕತೆಗಳ ಅನುವಾದದ ಕುರಿತು ಬಿ.ವಿ.ರಾಮಪ್ರಸಾದ್ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ