ಕೆಟಿಎಸ್-ತೇಜಸ್ವಿ ಸ್ನೇಹಕ್ಕೆ ಕಾರಣರಾದವರು ಪ್ರೊಫೆಸರ್ ನಂಜುಂಡಸ್ವಾಮಿ
ತೇಜಸ್ವಿ ಜತೆ ಮಾತನಾಡುವುದೇ ಒಂದು ನವೀನ ಅನುಭವ. ಮತ್ತು ತನಗೆ ಗೊತ್ತಿಲ್ಲದ ಒಂದು ವಿಚಾರ ನೋಡಿದರೆ ಅಥವಾ ಗಮನಿಸಿದರೆ ಅವರು ಪಡುತ್ತಿದ್ದ ಅಚ್ಚರಿ, ಅಗಾಧತೆಯನ್ನು ವರ್ಣಿಸಲು ಸಾಧ್ಯವಿಲ್ಲ. ಪ್ರತಿಯೊಂದು ಹೊಸ ವಿಚಾರವನ್ನು ಕಾತರ, ಕುತೂಹಲದಿಂದ ನೋಡುವ ಅವರ ಕೌತುಕವೇ ಅವರನ್ನು ದೊಡ್ಡ ಮನುಷ್ಯನನ್ನಾಗಿಸಿತು. ಹೊಸತನ್ನು ಕಂಡಿದ್ದೇ ‘ಏ ನೋಡೋ ಶಿವ ಹೇಗಿದೆ!’ ಎಂದು ಅಚ್ಚರಿಯಿಂದ ನೋಡುವ ಆ ನೋಟವನ್ನು ನೆನಪಿಸಿಕೊಂಡರೇ ಅವರ ಜೀವನ ಪ್ರೀತಿಯ ಬಗ್ಗೆ ಕೌತುಕ ಹುಟ್ಟಿಸುತ್ತದೆ.
ಕೆ.ಟಿ. ಶಿವಪ್ರಸಾದ್ ಹಾಗೂ ಪೂರ್ಣಚಂದ್ರ ತೇಜಸ್ವಿಯವರ ಒಡನಾಟದ ಕುರಿತ ನಾಗರಾಜ್ ಹೆತ್ತೂರು ಕೃತಿ “ಶಿವ ಮೇಡ್ ಬೈ ತೇಜಸ್ವಿ”ಯ ಆಯ್ದ ಭಾಗ

