ಕೊನಾರ್ಕ್‌ನ ಮಿಥುನ ಶಿಲ್ಪಗಳು: ಡಾ. ಜೆ. ಬಾಲಕೃಷ್ಣ ಬರಹ
ಒರಿಸ್ಸಾದ ದೇವಾಲಯಗಳ ಹೊರಭಾಗದಲ್ಲಿ ಯಥೇಚ್ಛವಾಗಿ ಶಿಲ್ಪಕಲೆ ಇರುವಂತೆ ಅದಕ್ಕೆ ತದ್ವಿರುದ್ಧವಾಗಿ ದೇವಾಲಯಗಳ ಒಳಭಾಗ ಭಣ ಭಣಗುಟ್ಟುವಂತೆ ಖಾಲಿಯಾಗಿರುತ್ತದೆ. ಇದನ್ನು ಗಮನಿಸಿದ ಖ್ಯಾತ ಕಲೆ-ಸಂಸ್ಕೃತಿಯ ವಿದ್ವಾಂಸ ಆನಂದ ಕೂಮಾರಸ್ವಾಮಿ, `ಬದುಕೆಂಬುದು ಒಂದು ಮಾಯಾ ಪರದೆ ಇದ್ದಂತೆ. ಅದರ ಹಿಂಭಾಗದಲ್ಲಿ ದೇವರಿದ್ದಾನೆ. ದೇವಾಲಯದ ಹೊರಭಾಗದಲ್ಲಿ ನಮ್ಮ ಬದುಕಿನ, ಸಂಸಾರದ ಚಿತ್ರಣವಿರುತ್ತದೆ. ಅಲ್ಲಿನ ಕೆತ್ತನೆ, ಚಿತ್ರಣಗಳು ಬದುಕೆಂಬ ಮಾಯಾಲೋಕವನ್ನೂ, ಹುಟ್ಟು-ಸಾವುಗಳ ಬದುಕಿನ ಚಕ್ರಕ್ಕೆ ಮನುಷ್ಯನನ್ನು ಬಂಧಿಸಿರುವ ಆತನ ಆಸೆ ಆಕಾಂಕ್ಷೆಗಳನ್ನೂ, ನೋವು ನಲಿವುಗಳನ್ನೂ ಪ್ರತಿಬಿಂಬಿಸುತ್ತವೆ.
ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ