ಹಂಗಿಲ್ಲದ ಹಾದಿಯಲ್ಲಿ…
ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ.
ಸುಮಿತ್ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಜಿ.ಪಿ. ಬಸವರಾಜು ಬರಹ