Advertisement

Category: ಪುಸ್ತಕ ಸಂಪಿಗೆ

ʼನೀರಿನೊಳಗಿನ ಮಂಜುʼ ಕಾದಂಬರಿಯ ಕೆಲವು ಪುಟಗಳು

ಮದುವೆಯಾಗುವಾಗ ಜಯಂತಿ ಕುಲಕರ್ಣಿ ರಾಂಪುರದ ಒಂದು ಹೈಸ್ಕೂಲಿನಲ್ಲಿ ಕನ್ನಡ ಟೀಚರಾಗಿದ್ದಳು. ಅದು ಖಾಸಗಿ ಹೈಸ್ಕೂಲಾಗಿದ್ದುದರಿಂದ ಸಂಬಳವೆನ್ನುವುದು ‘ನಾಮ್ಕಾವಸ್ಥೆ’ಯದಾಗಿತ್ತು. ಎಂ.ಎ ಓದಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಿಂತ ಹವ್ಯಾಸದ ಥರ ಪಾಠವನ್ನಾದರೂ ಮಾಡಿ ‘ಟೈಂಪಾಸ್’ ಮಾಡಬಹುದು ಎಂಬಂತೆ ಆಕೆ ಹೈಸ್ಕೂಲಲ್ಲಿ ದುಡಿಯುತ್ತಿದ್ದಳು. ಬಸವೇಶ್ವರ ಕಾಲೇಜಿನಲ್ಲಿರುವ ಸತೀಶ್ ಕುಲಕರ್ಣಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಾರೆ ಎಂಬುದರಿಂದ ಮದುವೆಯ ಪೂರ್ವದಲ್ಲೇ ಆಕೆ ತಾನೂ ಆ ಕಾಲೇಜಿನಲ್ಲಿ ಸೇರಬೇಕೆಂಬ ಕನಸು ಕಂಡಿದ್ದಳು.
ಡಾ. ನಾ. ಮೊಗಸಾಲೆಯವರ “ನೀರಿನೊಳಗಿನ ಮಂಜು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಚಂದ್ರಶೇಖರ ಕಂಬಾರರ ಕಾವ್ಯಲೋಕ

ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ.
ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದ “ಕಂಬಾರರ ಕಾವ್ಯ ಮತ್ತು ನಾಟಕಗಳು” ವಿಮರ್ಶಾ ಸಂಕಲನ ನಾಳೆ ಬಿಡುಗಡೆಯಾಗಲಿದ್ದು ಆ ಕೃತಿಯ ಒಂದು ಲೇಖನ ನಿಮ್ಮ ಓದಿಗೆ

Read More

ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು

ಬೆಕ್ಕಿನ ಮರಿ, ಗುಬ್ಬಿಯ ಧ್ವನಿ, ಮ್ಯಾಚಿಂಗ್ ರಿಬ್ಬನ್ ಎಂಬೆಲ್ಲಾ ಬಣ್ಣದ ಲೋಕದೊಂದಿಗೆ ಬದುಕಿನ ಸತ್ಯವನ್ನು ಪರಿಚಯಿಸುವ ಸರಳ ಕವಿತೆಗಳನ್ನು ಬರೆದಿರುವ ಕೆ.ವಿ. ತಿರುಮಲೇಶ್ ಅವರು ಮಕ್ಕಳ ಮನೋಲೋಕದೊಳಗೆ ಸದ್ದಿಲ್ಲದೆ ಹೆಜ್ಜೆಯಿರಿಸಿದ್ದಾರೆ.
“ಚಿಕ್ಕಣಿ ರಾಜ” ಎಂಬ ಬಣ್ಣದ ಚಿತ್ರಗಳಿರುವ ಸುಂದರ ಕವಿತಾ ಸಂಕಲನದ ಅನನ್ಯತೆಯ ಕುರಿತು ಸುಮವೀಣಾ ಅವರು ಬರೆದ ಟಿಪ್ಪಣಿ ಇಲ್ಲಿದೆ.

Read More

ಕನ್ನಡಿಯ ಮುಂದೆ ಆವರಣ ಕಳಚಿಕೊಳ್ಳುತ್ತ…..

ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು.
ಇಂದು ಬಿಡುಗಡೆಯಾಗಲಿರುವ ಡಾ. ಗೀತಾ ವಸಂತ ಅವರ “ಅವಳ ಅರಿವು” ಅಂಕಣ ಬರಹಗಳ ಸಂಕಲನದ ಒಂದು ಲೇಖನ ನಿಮ್ಮ ಓದಿಗೆ

Read More

ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ…

ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಮೇರಿಯ ಮನೆಗೆ ಹೋಗಿದ್ದ.
ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ