ನೀರಿಗೊಡ್ಡಿದ ಗಾಳಿ-ಬೆಳಕು: ಆಲೂರು ದೊಡ್ಡನಿಂಗಪ್ಪ ಕಾದಂಬರಿಗೆ ರಘುನಾಥ ಚ.ಹ. ಮುನ್ನುಡಿ
ಮಹಾನ್ ಬಲಶಾಲಿ ಹಾಗೂ ಅಪ್ರತಿಮ ಸುಂದರಿಯ ಪ್ರೇಮ ಊರ ಕಣ್ಣಿಗೆ ದೈವಿಕವಾಗಿ ಕಾಣಿಸುತ್ತದೆ. ವಿವಾಹಬಾಹಿರ ಸಂಬಂಧ ಊರಕಣ್ಣಿಗೆ ಸ್ವೀಕಾರಾರ್ಹ ಅಚ್ಚರಿಯಾಗಿ ಕಾಣಿಸಲಿಕ್ಕೆ, ಪ್ರೇಮಿಗಳ ವ್ಯಕ್ತಿತ್ವವಷ್ಟೇ ಕಾರಣವಲ್ಲ; ಮಲ್ಲನ ಕೇಡಿಗತನದ ಬಗ್ಗೆ ಊರಿಗಿರುವ ಅಸಹನೆಯೂ ಕಾರಣ. ಆ ಅಸಹನೆ ಅಸಹಾಯಕತೆಯಾಗಿರುವಾಗ, ತಮ್ಮ ಸಿಟ್ಟನ್ನು ಕೊಂಚವಾದರೂ ಸಮಾಧಾನಗೊಳಿಸುವ ರೂಪದಲ್ಲಿ ಪ್ರೇಮಪ್ರಕರಣ ಅವರಿಗೆ ಒದಗಿಬಂದಿದೆ. ಈ ಪ್ರೇಮಪ್ರಕರಣ ಜಾತೀಯತೆಯನ್ನು ವಿರೋಧಿಸುವ ಪ್ರತಿಭಟನೆಯ ರೂಪದಂತೆಯೂ ಕಾದಂಬರಿ ಚಿತ್ರಿಸುತ್ತದೆ.
ಆಲೂರು ದೊಡ್ಡನಿಂಗಪ್ಪ ಕಾದಂಬರಿ “ಚಂದ್ರನ ಚೂರು” ಗೆ ರಘುನಾಥ ಚ.ಹ. ಮುನ್ನುಡಿ