ಕಥಾಲೋಕದ ಆಯಾಮಗಳನ್ನು ಬದಲಿಸಿದ ತಿರುಮಲೇಶರು
ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ. ಇಂದು ಕೆ.ವಿ. ತಿರುಮಲೇಶ್ ಅವರ ಹುಟ್ಟುಹಬ್ಬ. ಅವರು ಬರೆದ
ʻಕೆಲವು ಕಥಾನಕಗಳುʼ ಕಥಾಸಂಕಲನದ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ಈ ಸಂದರ್ಭದ ಓದಿಗಾಗಿ

