Advertisement

Category: ಸರಣಿ

ನಾಟಕರಂಗದ ತಮಾಷೆ ಪ್ರಸಂಗಗಳು: ಚಿತ್ರಾ ವೆಂಕಟರಾಜು ಸರಣಿ

ಬರುವಾಗ ಸುಳ್ಯ, ಪುತ್ತೂರಿನ ಸಮೀಪ ಬೆಳಗಿನ ಜಾವ ಸುಮಾರು ೪ ಗಂಟೆಗೆ ಮೂತ್ರವಿಸರ್ಜನೆಗಾಗಿ ಗಾಡಿ ನಿಲ್ಲಿಸಿದರು. ನಂತರ ಹೊರಟು ಇನ್ನೇನು ಮೈಸೂರು ಹತ್ತಿರ ಬರುತ್ತಿದ್ದಂತೆ ಎಲ್ಲರಿಗೂ ಸಂಪೂರ್ಣ ಎ‍ಚ್ಚರವಾಯಿತು. ಇದ್ದಕ್ಕಿದ್ದಂತೆ ಯಾರೋ ‘ರಾಜಪ್ಪ ಎಲ್ಲಿ’ ಅಂತ ಕೇಳಿದರು. ಟೆಂಪೋ ಎಲ್ಲಾ ಹುಡುಕಿದರೂ ರಾಜಪ್ಪ ಇಲ್ಲ. ಎಲ್ಲಿ ಬಿಟ್ಟು ಬಂದ್ವಿ ಗೊತ್ತಿಲ್ಲ. ಅವರು ಪಾಪ ಒಂದು ಪಟಾಪಟಿ ಲುಂಗಿ ಬನಿಯನ್ ಮತ್ತು ಟವೆಲ್ ಸುತ್ತಿಕೊಂಡು ಇಳಿದವರು ವಾಪಸ್ ಬರುವ ಹೊತ್ತಿಗೆ ಟೆಂಪೋ ಹೊರಟಾಗಿತ್ತು. ಕಾಲಲ್ಲಿ ಚಪ್ಪಲಿಯೂ ಇಲ್ಲದಂತೆ ಯಾರದ್ದೋ ಸಹಾಯ ಕೇಳಿ ಕೊನೆಗೆ ಚಾಮರಾಜನಗರದಲ್ಲಿ ಕಾಣಿಸಿಕೊಂಡರು.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿ

Read More

ಓದು ಮುಗಿದ ನಂತರದ ಪ್ರಾರಂಭದ ದಿನಗಳು…: ಬಸವನಗೌಡ ಹೆಬ್ಬಳಗೆರೆ ಸರಣಿ

ಆಗ ಜಿಲ್ಲಾವಾರು ನೇಮಕವಿದ್ದ ಕಾರಣ ನನಗೆ 2 ಜಿಲ್ಲೆಗಳಿಗೆ ಅರ್ಜಿ ಹಾಕಲು ಹಣ ಇಲ್ಲದ ಕಾರಣ ಬರೀ ಒಂದೇ ಜಿಲ್ಲೆಯಲ್ಲಿಯೇ ಅರ್ಜಿ ಸಲ್ಲಿಸಿದೆ, ಅದೂ ಮೈಸೂರಿನಲ್ಲಿ. ಕೆಲಸವನ್ನು ಗಿಟ್ಟಿಸಲೇ ಬೇಕೆಂಬ ಹಠವಿಡಿದು ಓದಿದೆ. ನಾನು ಮೈಸೂರಿನಲ್ಲಿಯೇ ಅರ್ಜಿ ಹಾಕಲು ಕಾರಣ ಅಲ್ಲಿ ನನ್ನ ಗೆಳೆಯನ ಅಣ್ಣನೊಬ್ಬನು ಓದುತ್ತಿದ್ದ. ಪರೀಕ್ಷೆ ಬರೆಯುವ ದಿನ ಅವನ ರೂಮಿನಲ್ಲಿ ಉಳಿಯಬಹುದು. ಬೇರೆ ಕಡೆ ಉಳಿದು ಖರ್ಚು ಮಾಡಲು ಹಣದ ತೊಂದರೆ ಇದ್ದುದರಿಂದ ನಾನು ಮೈಸೂರು ಒಂದಕ್ಕೇ ಅರ್ಜಿ ಹಾಕಲು ತೀರ್ಮಾನಿಸಿದ್ದೆ!
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

“ಮಿಡಲ್”‌ ನಾಮದವನಾದ ನಾನು…: ಎಚ್. ಗೋಪಾಲಕೃಷ್ಣ ಸರಣಿ

ಈ ಮಿಡಲ್ ಬಂದ ಒಂದು ತಿಂಗಳಲ್ಲಿ ಅಂತ ಕಾಣ್ಸುತ್ತೆ ಹೆಗಡೆ ಸಾಹೇಬರು ಎಲ್ಲೋ ಭಾಷಣ ಮಾಡುತ್ತಾ ಶೇಖಡಾ ಹತ್ತರಷ್ಟು ಉಳಿಸಿ ಸರ್ಕಾರದಲ್ಲಿ ಇಡಿ ಅಂತ ಹೇಳಿದರೆ ಜನ ತಮಾಷೆ ಮಾಡ್ತಾರೆ ಅಂತ ಹೇಳಿದ್ದರು. ಸರ್ಕಾರದ ವರಿಷ್ಠರು ಸಹಾ ಈ ಮಿಡಲ್‌ಗಳನ್ನೂ ಆಸಕ್ತಿಯಿಂದ ಓದುತ್ತಾರೆ ಅಂತ ಗೊತ್ತಾಗಿತ್ತು. ಮಿಡಲ್ ಮೋಡಿಯಲ್ಲಿ ಕತೆ ನಿಂತೆ ಬಿಡ್ತು ಅಂತ ಅನಿಸಲಿಲ್ಲ. ಕಾರಣ ಮನಸು ಪೂರ್ತಿ ಮಿಡಲ್ ಹಾಗೂ ಹಾಸ್ಯ ಲೇಖನಗಳತ್ತ ಪೂರ್ಣ ವಾಲಿಬಿಟ್ಟಿತ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ೭೪ನೇ ಬರಹ ನಿಮ್ಮ ಓದಿಗೆ

Read More

ಜಗತ್ತಿನ ಅತ್ಯಂತ ಸುಂದರ ಫೋಟೋ(2):ಶೇಷಾದ್ರಿ ಗಂಜೂರು ಸರಣಿ

ಈ ಆಲೋಚನೆ ಹೊಳೆದ ರಾತ್ರಿ ಅವನಿಗೆ ನಿದ್ದೆಯೇ ಬರಲಿಲ್ಲ. ಕಾಲೇಜಿನ ಇನ್ನೊಬ್ಬ ಪ್ರೊಫೆಸರ್ ಕೊಟ್ಟಿದ್ದ ಹೋಂ ವರ್ಕ್ ಮಾಡಲೂ ಸಹ ಮನಸು ಬರಲಿಲ್ಲ. ಬದಲಿಗೆ, ಹಾಸಿಗೆಯಿಂದೆದ್ದು, ಇಲ್ಲಿಯವರೆಗೆ ಕಲೆ ಹಾಕಿದ್ದ ಅಂಕಿ-ಸಂಖ್ಯೆಗಳು-ಮಾಹಿತಿಗಳನ್ನೆಲ್ಲಾ ಮತ್ತೆ-ಮತ್ತೆ ನೋಡಿ, ಸಣ್ಣ ಕಾಗದದ ಮೇಲೊಂದು ದಾರದಂತೆ ಗೆರೆಯೊಂದನ್ನು ಎಳೆದು ಅದರ ಮೇಲೆ, ತನ್ನ ಲೆಕ್ಕಾಚಾರ ಬಳಸಿ ಬಿಳಿಗಣ್ಣು, ಹಳದಿ ಬಣ್ಣ, ಕಿರು ರೆಕ್ಕೆ, ಹಾರೆಗಣ್ಣು ಇತ್ಯಾದಿ ಜೀನುಗಳನ್ನು ಮಾರ್ಕ್ ಮಾಡಿದ. ವಂಶವಾಹಿ ಗುಣಗಳು ಒಂದು ಪೀಳಿಗೆಯಿಂದ ಇನ್ನೊಂದಕ್ಕೆ ಹೇಗೆ ಸಂವಹಿಸುತ್ತದೆ ಎಂದು ತೋರುವ “ಜೀನ್ ಮ್ಯಾಪ್” ಒಂದು ಹೀಗೆ ಮಾನವ ಇತಿಹಾಸದಲ್ಲೇ ಮೊದಲ ಬಾರಿಗೆ ಸಿದ್ಧವಾಯಿತು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿ “ವಿಜ್ಞಾನದ ಕಥಾ ಪ್ರಸಂಗಗಳು”

Read More

ರಂಗದ ಮೇಲಿನ  ದೃಶ್ಯಕಾವ್ಯ  ‘ಚಿತ್ರಾಂಗದಾ’: ಚಿತ್ರಾ ವೆಂಕಟರಾಜು ಸರಣಿ

ಕೊನೆಗೂ ಯಾಕೆ ಈ ನಾಟಕವನ್ನು ಮಾಡಬೇಕು, ಯಾಕೆ ಈ ನಾಟಕವನ್ನು ನೋಡಬೇಕು ಎನ್ನುವುದು ಪ್ರತಿಯೊಬ್ಬ ಕಲಾವಿದನ, ಪ್ರೇಕ್ಷಕನ ಮೂಲಭೂತ ಪ್ರಶ್ನೆ. ಇಲ್ಲಿ ಇದು ಚಿತ್ರಾಂಗದಾ ಮತ್ತು ಅರ್ಜುನನ ಕತೆಯಾದರೂ ಅದರ ನೆಪದಲ್ಲಿ ನಡೆಯುವುದು ಗಂಡು ಹೆಣ್ಣು ಮತ್ತು ಅವರಿಬ್ಬರ ಸಂಬಂಧದ ಸಂಕೀರ್ಣತೆಯ ಬಗ್ಗೆ. ಹೆಣ್ಣಾದರೂ ಗಂಡಿನಂತೆ ವನದಲ್ಲಿರುವ ಚಿತ್ರಾಂಗದೆ ಅರ್ಜುನನನ್ನು ನೋಡಿದ್ದೆ ಮತ್ತೆ ‘ಹೆಣ್ತನ’ ಕ್ಕೆ ಹಾತೊರೆಯುತ್ತಾಳೆ. ಅವಳೊಳಗಿನ ಹೆಣ್ಣನ್ನು ನೋಡಿದ ಅರ್ಜುನ ತನ್ನ ಬ್ರಹ್ಮಚರ್ಯದ ನಿಯಮವನ್ನು ಮುರಿಯುತ್ತಾನೆ.
ಚಿತ್ರಾ ವೆಂಕಟರಾಜು ಬರೆಯುವ “ಚಿತ್ತು-ಕಾಟು” ಸರಣಿಯಲ್ಲಿ ‘ಚಿತ್ರಾಂಗದಾ’ ನಾಟಕದ ಕುರಿತ ಬರಹ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ