‘ಗಂಟಿಚೋರ್’ ಎಂಬ ಐಡೆಂಟಿಟಿ ಅಥವಾ ಗುರುತಿನ ಪ್ರಶ್ನೆ
ಕರ್ನಾಟಕ ಸರಕಾರವು ೧೯೭೬ರಲ್ಲಿ ಪರಿಶಿಷ್ಟ ಜಾತಿ, ಪಂಗಡದ ಅಮೆಂಡ್ಮೆಂಟನ್ನು ಪಾಸು ಮಾಡಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಪಟ್ಟಿಯನ್ನು ಬಿಡುಗಡೆ ಮಾಡಿತು. ಈ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ‘ಗಂಟಿಚೋರ್’ ಹೆಸರು ಮಾತ್ರ ಸೇರಿ ಅದರ ಜತೆ ಇದ್ದ ಸಮಾನಾಂತರ ಪದಗಳನ್ನು ಕೈಬಿಡಲಾಯಿತು. ಈ ಪಟ್ಟಿಯು ಗಂಟಿಚೋರ್ ಸಮುದಾಯಕ್ಕೆ ಬಿಕ್ಕಟ್ಟನ್ನು ತಂದಿಟ್ಟಿತು. ಕಾರಣ ಒಂದೇ ಸಮಾನಾಂತರ ಪದಗಳಾದ ಭಾಮ್ಟಾ, ಉಚಲ್ಯ, ವಡ್ಡರ್, ತುಡುಗವಡ್ಡರ್, ಗಿರಣಿವಡ್ಡರ್, ಠಕಾರಿ, ಪಾತ್ರೂಟ್ ಹೊರಗುಳಿದವು.
Read More
