Advertisement

Category: ಸರಣಿ

‘ಮೀಸೆಯ ಮಹಿಮೆ’ ಎಂಬ ವಿಷಯದ ಬಗ್ಗೆ ನಾನೇಕೆ ಬರೆದೆ?!: ಬಸವನಗೌಡ ಹೆಬ್ಬಳಗೆರೆ ಸರಣಿ

ಅಂದಿನಿಂದ ಮೇಡಂ ಜೊತೆ ನಾನು ಅಷ್ಟಾಗಿ ಮಾತನಾಡಿಸುತ್ತಿರಲಿಲ್ಲ. ಪಾಠ ಮಾಡುವಾಗ ವಾದಗಳು ನನ್ನಿಂದ ಇರುತ್ತಿತ್ತು. ಒಮ್ಮೆ ಪೋಷಕರಿಗೆ ಹೆಣ್ಣು ಅಥವಾ ಗಂಡು ಎಂಬ ಲಿಂಗ ನಿರ್ಧಾರವಾಗಲು ಯಾರು ಕಾರಣ? ಎಂಬ ಪ್ರಶ್ನೆಯನ್ನು ನಮ್ಮ ಮುಂದಿಟ್ಟರು. ಆಗ ಕಾಲೇಜಿನ ನಮ್ಮ ಸೆಕ್ಷನ್‌ನಲ್ಲಿದ್ದ 60 ರಲ್ಲಿ 59 ಪ್ರಶಿಕ್ಷಣಾರ್ಥಿಗಳು ಹೆಣ್ಣೇ ಕಾರಣ ಎಂದರು. ನಾನೊಬ್ಬ ಮಾತ್ರ ಒಬ್ಬ ವ್ಯಕ್ತಿಯ ಲಿಂಗ ನಿರ್ಧಾರಕ್ಕೆ ಗಂಡೇ ಕಾರಣ ಎಂಬುದನ್ನು ಸಕಾರಣ ಸಹಿತ ತಿಳಿಸಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಮೂವತ್ತಾರನೆಯ ಕಂತು ನಿಮ್ಮ ಓದಿಗೆ

Read More

ಏಳು….. ಕೋಡಗ…… ಕೊಡಗು: ಸುಮಾವೀಣಾ ಸರಣಿ

“ಮಗನೆ ಏಳು!” ಎಂದೆ. “ಎಷ್ಟು ಗಂಟೆ” ಎಂದು ನಿದ್ರೆಗಣ್ಣಲ್ಲಿಯೇ ಅವನು ಕೇಳಿದ “ಏಳು” ಎಂದೆ. “ಗಂಟೆ ಏಳಾಗಿದೆ ಎದ್ದೇಳು” ಎನ್ನಬಹುದಾಗಿತ್ತು. ಅವನ ಪ್ರಶ್ನೆ ಮತ್ತು ನನ್ನ ಕಮಾಂಡ್ ಒಂದೇ ಪದದಲ್ಲಿ ಮುಗಿಯಿತು. ಇಂಥ ಬ್ಯಾಡ್ ಅಲ್ಲ ಬೆಡ್ ತರಲೆಗಳು ಸಹಜವೇ ಅಲ್ವೆ!
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಹದಿನಾರನೆಯ ಬರಹ ನಿಮ್ಮ ಓದಿಗೆ

Read More

ತ್ಯಾಗದಿಂದ ಹುಟ್ಟಿಕೊಂಡಂಥ ಕಾವ್ಯ: ಎಸ್. ಜಯಶ್ರೀನಿವಾಸ ರಾವ್ ಸರಣಿ

“ನಾನು ಬರೆಯುವೆ ಕಣ್ಮರೆಯಾಗಲು, ಇದರಿಂದ ಜೀವನವು ನನಗೆ ಬಹಿರಂಗವಾಗುತ್ತೆ, ನಾನಿಲ್ಲದೆನೇ, ಅಂತ್ಯದಲ್ಲಿ ನನ್ನ ಮುಖವು ಕಾಗದದ ಬಿಳಿ ಬಣ್ಣಕ್ಕಿಂತ ಹೆಚ್ಚು ಮಸುಕಾಗಿರುತ್ತೆ, ಪ್ರತಿಬಿಂಬವಿಲ್ಲದೆನೇ. ತನ್ನನ್ನು ತಾನು ಮರೆಯಬಹುದಾದಂತಹ ಜಗತ್ತು. ಕನ್ನಡಿಯಾಗಲ್ಲ, ಒಂದು ಕಲ್ಲಾಗಿ.”
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಇಟಲಿ ದೇಶದ ಹೆಸರಾಂತ ಕವಿ ಆ್ಯಂಟೊನೆಲಾ ಅನೆಡಾ-ರವರ (Antonella Anedda, 1955) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

Read More

ಬೇವಿನ್‌ ಮರ್ದಲ್ಲಿ ಬಾಗ್ಲು ಮಾಡಸ್ತಾರ!: ಎಚ್. ಗೋಪಾಲಕೃಷ್ಣ ಸರಣಿ

ಒಂದೇ ಒಂದು ಭಂಡ ಧೈರ್ಯ ಇತ್ತು ನೋಡಿ. ಅದು ಈಗ ಮುನ್ನೆಲೆಗೆ ಜಿಗಿಯಿತು. ಕೂಡಲೇ ನನ್ನ ಆರನೇ ಸೆನ್ಸ್ ಜಾಗೃತ ಆಯಿತು. ನನ್ನ ಅರಿವಿಗೆ ಬಂದಿದ್ದ ಬೇವಿಗೆ ಸಂಬಂಧಪಟ್ಟ ಲೇಖನಗಳು, ಅವುಗಳ ಬಗ್ಗೆ ಇದ್ದ ನಂಬಿಕೆಗಳು, ನಮ್ಮ ಪೂರ್ವಜರು ಬೇವನ್ನು ಉಪಯೋಗಿಸುತ್ತಿದ್ದ ರೀತಿ ರಿವಾಜು ಎಲ್ಲವೂ ತಲೆಯಲ್ಲಿ ಒಂದರ ಹಿಂದೆ ಒಂದು ಬಂದು ಕ್ಯೂ ನಿಂತವು. ಮಲ್ಲಯ್ಯನ ಕಡೆ ನೋಡಿದೆ. ಅವನ ಮುಖದಲ್ಲಿ ಒಂದು ರೀತಿಯ ವಿಚಿತ್ರ ಕಳೆ ಕಾಣಿಸಿತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಐವತ್ತೆಂಟನೆಯ ಕಂತು

Read More

ಮಲೆಯ ಮಕ್ಕಳ ಬೇಸಿಗೆ ರಜಾ – ಮಜಾ: ಭವ್ಯ ಟಿ.ಎಸ್. ಸರಣಿ

ಅಜ್ಜಿ ಮನೆಯ ಹತ್ತಿರ ಒಂದು ಹಳ್ಳ ಇತ್ತು. ಅಲ್ಲಿಗೆ ಅಜ್ಜಿ ಬಟ್ಟೆಗಳನ್ನು ತೊಳೆಯಲು ತೆಗೆದುಕೊಂಡು ಹೋದರೆ ನಾವು ಹಿಂದೆ ಹೊರಟುಬಿಡುತ್ತಿದ್ದೆವು. ಅಜ್ಜಿಯೊಂದಿಗೆ ಬಟ್ಟೆ ತೊಳೆಯುವುದು ಕೂಡ ನಮಗೆ ಒಂದು ಆಟವಾಗಿತ್ತು. ಜೊತೆಗೆ ನೀರಾಟವಾಡಲು ಒಳ್ಳೆಯ ಅವಕಾಶ. ಒಬ್ಬರಿಗೊಬ್ಬರು ನೀರೆರೆಚುತ್ತಾ ಸಂಭ್ರಮಿಸುತ್ತಿದ್ದೆವು. ಅಜ್ಜಿ, ನೀರ್ ಕಂಡ್ರೆ ಸಾಕು ಈ ಹುಡ್ಗುರನ್ನ ಹಿಡಿಯೋರೇ ಇಲ್ಲ… ಅಂತ ಬೈದು ನಮ್ಮನ್ನೆಲ್ಲಾ ಕೂಗಿ ಕರೆದು ಮನೆಗೆ ಕರೆತರುತ್ತಿದ್ದಳು.
ಭವ್ಯ ಟಿ.ಎಸ್. ಬರೆಯುವ “ಮಲೆನಾಡಿನ ಹಾಡು-ಪಾಡು” ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ