ಕನಸು ಬಿತ್ತಿ ನನಸಾಗಿಸಿದ ಕುಸುಮಕ್ಕ: ರಂಜಾನ್ ದರ್ಗಾ ಸರಣಿ
ಅವರು ಉತ್ತರ ಕನ್ನಡದ ಎಲ್ಲೆಂದರಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಒಂದು ಕಡೆ ಮಹಿಳೆಯರ ಸಂಘಟನೆ. ಇನ್ನೊಂದು ಕಡೆ ಸಾಕ್ಷರತಾ ಸಭೆ, ಮತ್ತೊಂದು ಕಡೆ ದೇಶೀಯ ಔಷಧಿಗಳ ಮಹತ್ವದ ಕುರಿತು ಮಾತನಾಡುವುದು, ಇನ್ನೊಂದು ಕಡೆ ಸರಳ ಜೀವನ ವಿಧಾನದ ಬಗ್ಗೆ ತಿಳಿ ಹೇಳುವುದು. ಹೀಗೆ ನಮ್ಮ ಕುಸುಮಕ್ಕನ ಅವತಾರಗಳು ಬಹಳವಾಗಿದ್ದವು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 91ನೇ ಕಂತು ನಿಮ್ಮ ಓದಿಗೆ

